ಅಭಿಪ್ರಾಯ / ಸಲಹೆಗಳು

ಕಾಂಪೌಂಡ್ ಕೆಡವಿ ಹಾನಿ, ದೂರು ದಾಖಲು.

ದಿನಾಂಕ 24-12-2021 ರಂದು ಶ್ರೀಮಂಗಲ ವಿಎಸ್ಎಸ್ಎನ್ ಆಡಳಿತ ಮಂಡಳಿಯವರು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನ್ನು ಜೆಸಿಬಿ ಮೂಲಕ ಕೆಡವಿ ಹಾನಿ ಮಾಡಿರುವ ಬಗ್ಗೆ ಡಾ.ಕವನ್ ಕುಮಾರ್, ಕರುಣಾ ಟ್ರಸ್ಟ್ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ತೋಟಕ್ಕೆ ನುಗ್ಗಿ  ಕಾಫಿ ಕಳ್ಳತನ

ಸಿದ್ದಾಪುರ ಠಾಣಾ ಸರಹದ್ದಿನ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಕೆ.ವಾಣಿ ಉತ್ತಪ್ಪ ರವರು ದಿನಾಂಕ 22-12-2021 ರಂದು ತನ್ನ ಪತಿಯವರ ಅನಾರೋಗ್ಯದ  ನಿಮಿತ್ತ ಮಂಗಳೂರಿಗೆ ಹೋದ ಸಂದರ್ಭದಲ್ಲಿ ಅವರ ಕಾಫಿ ತೋಟಕ್ಕೆ  ಅವರ ಮಗನಾದ ಕೆ.ಯು.ಪೂವಯ್ಯನವರು ಅಕ್ರಮ ಪ್ರವೇಶ ಮಾಡಿ ಸುಮಾರು ಅಂದಾಜು 2.5 ಲಕ್ಷ ಮೌಲ್ಯದ ಕಾಫಿ ಹಣ್ಣನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಪಂಚಾಯ್ತಿ ಮಹಿಳಾ ನೌಕರಳ ಮೇಲೆ ದೌರ್ಜನ್ಯ:

ಸೋಮವಾರಪೇಟೆ ತಾಲೋಕು, ಕೋರಳ್ಳಿ ಗ್ರಾಮದ ನಿವಾಸಿ ಕೆ.ವಿ. ಪುನೀತ್ ಎಂಬವರ ಅಕ್ಕ ಹರಿಣಿ ಕೆ.ವಿ ರವರು ಕೊಡ್ಲಿಪೇಟೆಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಗ್ರಾಮ ಪಂಚಾಯಿತಿ ಅದ್ಯಕ್ಷ ಚಂದ್ರಶೇಖರ್,ತಾತ್ಕಾಲಿಕ ವಾಟರ್ ಮನ್ ಗಳಾದ ವೀರಭದ್ರ, ವಸಂತ, ತ್ಯಾಗರಾಜು ಪಂಚಾಯಿತಿ ಸದ್ಯರಾದ ಪ್ರಸನ್ನ  ಮತ್ತು ದೊಡ್ಡಕೊಡ್ಲಿಗ್ರಾಮಸ್ತರಾದ ವಸಂತಕುಮಾರ್  ಹೇಮಂತ್, ಜಗದೀಶ್, ಕೆರಗನಹಳ್ಳಿ ಗ್ರಾಮದ ರೇವುಗೌಡ ಮತ್ತು ವಾಟರ್ ಮನ್ ವೀರಭದ್ರರವರ ಇಬ್ಬರು ಮಕ್ಕಳು  ಕಚೇರಿಯ ಬಿಲ್ಲುಗಳ ಗಳ ವಿಚಾರದಲ್ಲಿ ವಿನಾ ಕಾರಣ ಹರಿಣಿ ಕೆ.ವಿ ರವರೊಂದಿಗೆ  ಆಗಾಗ್ಗೆ ತಕರಾರು ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದು ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿ  ಕೆಲಸದಿಂದ ತೆಗೆಯುತ್ತೇವೆಂದು ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದುದರಿಂದ ಮಾನಸಿಕ ಹಿಂಸೆಯಾಗಿ  ಸದರಿ ಹರಿಣಿಯವರು ದಿನಾಂಕ  ದಿನಾಂಕ 23/12/2021 ಯಾವುದೋ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಬಗ್ಗೆ ಹಾಸನ ಮಂಗಳ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆಂದು ಕೆ.ವಿ. ಹರಿಣಿಯವರ ಸಹೋದರ ಕೆ.ವಿ. ಪುನೀತ್ ರವರುನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 25-12-2021 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080