ಅಭಿಪ್ರಾಯ / ಸಲಹೆಗಳು

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

 ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಪಾರೂರು ಗ್ರಾಮದಲ್ಲಿ ದಿನಾಂಕ 11-11-2021 ರಂದು ಪಾಲೂರು ಗ್ರಾಮದ  ದಕ್ಷಿತ್ ಎಂಬವರು ತನ್ನ ಸ್ನೇಹಿತರೊಂದಿಗೆ ವಾಲಿಬಾಲ್ ಆಟವನ್ನು ಆಡುತ್ತಿರುವಾಗ್ಗೆ ಆಟದ ವಿಚಾರದಲ್ಲಿ ಜಗಳವಾಗಿದ್ದು, ದಿನಾಂಕ 12-11-2021 ರಂದು ಧಕ್ಚಿತ್ ರವರು ತನ್ನ ಮೋಟಾರ್ ಸೈಕಲಿನಲ್ಲಿ ಪಾಲೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ದರ್ಶನ್ ಹಾಗು ಚಂಗಪ್ಪನವರು ಹಿಂದಿನ ದಿನ ನಡೆದ ಜಗಳದ ಬಗ್ಗೆ ಮಾತನಾಡಿ ಮತ್ತೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಬಲಕಣ್ಣಿಗೆ ನೋವನ್ನುಂಟು ಮಾಡಿದ್ದು ಅಲ್ಲದೆ ದೊಣ್ಣೆಯಿಂದಲೂ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದರೋಡೆ ಪ್ರಕರಣ

ದಿನಾಂಕ 12-11-2021 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ  ಶನಿವಾರಸಂತೆ ನಗರದ ನಿವಾಸಿ ನಜಿಯಾ ತಬ್ಸಮ್ ಎಂಬವರು ಅವರ ತಂಡ ಮತ್ತು ಮಕ್ಕಳೊಂದಿಗೆ ತಮ್ಮ ಬಾಪ್ತು ದಸ್ಟರ್ ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದು, ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದ ಹತ್ತಿರ ತಲುಪುವಾಗ್ಗೆ 6 ಜನರು ಮೂರು ಬೈಕಿನಲ್ಲಿ ಬಂದ ಅಪರಿಚತ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ  ನಜಿಯಾ ತಬ್ಸಮ್ ರವರ ಗಂಡನನ್ನು ಕಾರಿನಿಂದ ಹೊರಗೆ ಎಳೆದು ಹಲ್ಲೆ ನಡೆಸಿದ್ದು ಅದನ್ನು ತಡೆಯಲು ಹೋದ ನಜಿಯಾ ತಬ್ಸಮ್ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಾಗು ಕಾರಿನಲ್ಲಿದ್ದ ನಗದು ಹಣ ರೂ.1,20,000/- ಗಳನ್ನು ದರೋಡೆಮಾಡಿಕೊಂಡು ಹೋಗಿದ್ದು ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಹೆದರಿಸಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶಿನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮೋಟಾರ್ ಸೈಕಲಿಗೆ ಕಾರು ಡಿಕ್ಕಿ

ವಿರಾಜಪೇಟೆ ತಾಲೋಕಿನ ಹೆಗ್ಗಳ ಗ್ರಾಮದ ನಿವಾಸಿ ಎಂ.ಎಸ್. ಮಂಜುನಾಥ ಎಂಬವರು ದಿನಾಂಕ 12-11-2021 ರಂದು  ವಿರಾಜಪೇಟೆ  ನಗರಗ ಕಾವೇರಿ ಬೇಕರಿಯ ಬಳಿ ತನ್ನ ಮೋಟಾರ್ ಸೈಕಲಿನಲ್ಲಿ ಕುಳಿತು ಮುಂದೆ ಸಾಗುವಷ್ಟರಲ್ಲಿ ವಿರಾಜಪೇಟೆ ಕಡೆಯಿಂದ ಕೇರಳದ ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರೊಂದು ಡಿಕ್ಕಿಯಾದ ಪರಿಣಾಮ ಸದರಿ ಎಂ.ಎಸ್. ಮಂಜುನಾಥರವರ ಕಾಲಿಗೆ ಗಾಯವಾಗಿದ್ದು ಅಲ್ಲದೆ ಮೋಟಾರ್ ಸೈಕಲ್ ಜಖಂಗೊಂಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗಕ್ಕೆ ಅಳವಡಿಸಿದ ತಂತಿ ಹಾಗು ಕಂಬ ಕಳವು

ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದಲ್ಲಿ ಎಂ.ಎನ್. ಪೂವಣ್ಣ ಎಂಬವರು ತಮ್ಮ ಅಣ್ಣನವರರಿಂದ ನಾಲ್ಕೇರಿ ಗ್ರಾಮದಲ್ಲಿ 0.92 ಏಕ್ರೆ ಜಾಗವನ್ನು ಖರೀದಿಸಿ ಆರ್.ಟಿ.ಸಿ. ಹೊಂದಿದ್ದು, ಸದರಿ ಜಾಗದಲ್ಲಿ ಅಳವಡಿಸಿದ ತಂತಿಬೇಲಿಯನ್ನು ಹಾಗು ಕಂಬಗಳನ್ನು ದಿನಾಂಕ 28-11-2021 ಮತ್ತು 29-11-2021ರ ನಡುವಿನ ಅವಧಿಯಲ್ಲಿ ಕಿತ್ತು ತೆಗೆದು ಕಳ್ಳತನ ಮಾಡಿಕೊಂಡು ಹೋಗಿದ್ದು ಇದರಿಂದ 20,000 ರೂ. ನಷ್ಟವಾಗಿರುತ್ತೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನವೀಕರಣ​ : 13-11-2021 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080