ಅಭಿಪ್ರಾಯ / ಸಲಹೆಗಳು

ದಾರಿ ತಡೆದು ಕೊಲೆ ಬೆದರಿಕೆ

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಬೇಂಗೂರು ಗ್ರಾಮದ ನಿವಾಸಿ ಐ.ಬಿ. ಸೋಮಯ್ಯ ಮುತ್ತಣ್ಣ ಎಂಬವರೊಂದಿಗೆ ಭಾಗಮಂಡಲ ಪೊಲೀಸ್ ಠಾಣೆಗೆ ಹೋಗಿ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದಾಗ ಕೋಪಟ್ಟ ಗ್ರಾಮದಲ್ಲಿ ಆರೋಪಿಗಳಾದ ಕೊಟ್ಟುಕತ್ತೀರ ಗೋಕುಲ ಮತ್ತು ಇತರೆ ಮೂವರು ಸೇರಿ ದಾರಿ  ತಡೆದು ಅವಾಚ್ಯವಾಗಿ ನಿಂದಿಸಿ  ಕೊಲೆ ಬೆದರಿದೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ನಕಲಿ ಸಹಿ ಮಾಡಿ ಆಸ್ತಿ ವರ್ಗಾವಣೆ

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ನಾಪಂಗಡ ದೇವಯ್ಯನವರ ತಾಯಿಯವರ ಹೆಸರಿನಲ್ಲಿದ್ದ 5.04 ಏಕ್ರೆ ಜಾಗದ ಪೈಕಿ 1.17 ಏಕ್ರೆ ಜಾಗವನ್ನು ದೇವಯ್ಯನವರ ತಂದೆ ಮಾಪಂಗಡ ಪೂವಯ್ಯನವರ ಹೆಸರಿನಲ್ಲಿ ಕಾನೂನಾತ್ಮಕವಾಗಿ ಖರೀದಿಸಿದ್ದು, ರೆವಿನ್ಯು ಮತ್ತು ಸರ್ವೆ ಇಲಾಖೆಯವರು ಶಾಮೀಲಾಗಿ ಪೋರ್ಜರಿ ಮಾಡಿ ಮಲ್ಲೇಂಗಡ ವಿನೀತ್ ಹಾಗು ಪೊನ್ನಪ್ಪನವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ವಿನಾಕಾರಣ ಜಗಳ, ಹಲ್ಲೆ

ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಕೆ.ಬೋಪಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿಎರವರ ಬೋಜ ರವರು ದಿನಾಂಕ 7-4-2021ರಂದು ರಾತ್ರಿ 10-30 ಗಂಟೆಗೆ ತಮ್ಮ ಮನೆಯ ಅಂಗಳದಲ್ಲಿದ್ದಾಗ ಲೈನ್ ಮನೆಯ ಪಕ್ಕದ ವಾಸಿಯಾದ ಪಣಿಎರವರ ಗಣೇಶ್ ಎಂಬಾತ ಅಲ್ಲಿಗೆ ಬಂದು ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹಲ್ಲೆ ನಡೆಸಿ ತಲೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ನವೀಕರಣ​ : 09-04-2021 04:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ