ಅಭಿಪ್ರಾಯ / ಸಲಹೆಗಳು

ಆನ್‍ಲೈನ್‍ ವಂಚನೆ ಪ್ರಕರಣ

                ವಿರಾಜಪೇಟೆ ತಾಲ್ಲೂಕು ಹಾಲುಗುಂದ ಗ್ರಾಮದ ನಿವಾಸಿ ಮಹಮ್ಮದ್ ಹನೀಫ್‍ ಎಂಬುವವರು ಅವರ ಗೂಡ್ಸ್ ವಾಹನವನ್ನು ಆನ್‍ಲೈನ್‍ ಮೂಲಕ ಮಾರಾಟ ಮಾಡಲು ಒಎಲ್‍ಎಕ್ಸ್‍ ಅಪ್ಲಿಕೇಶನ್‍ನಲ್ಲಿ ಜಾಹೀರಾತು ನೀಡಿದ್ದರು. ನಂತರ ಇವರ ಮೊಬೈಲ್‍ ನಂಬರ್‍ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಾಹನವನ್ನು ಖರೀದಿಸುವುದಾಗಿ ಹೇಳಿ ಹಣ ಸಂದಾಯ ಮಾಡಲು ಫೋನ್‍ ಪೇ ಅಥವಾ ಗೂಗಲ್‍ ಪೇ ಅಪ್ಲಿಕೇಶನ್‍ ನಂಬರ್‍ ಕೇಳಿದ್ದು, ಅವರ ಸ್ನೇಹಿತ ಕೊಂಡಂಗೇರಿ ನಿವಾಸಿ ಹನೀಫ್‍ ಎಂಬುವವರ ಗೂಗಲ್‍ ಪೇ ಮತ್ತು ಫೋನ್‍ ಪೇ ಅಪ್ಲಿಕೇಶನ್‍ ನಂಬರ್‍ ನೀಡಿದಾಗ ಮೊದಲಿಗೆ ₹.1 ಹಣವನ್ನು ಸಂದಾಯ ಮಾಡಿ ನಂಬಿಕೆ ಬರುವಂತೆ ಮಾಡಿ ಗೂಗಲ್‍ ಪೇ ಮೂಲಕ ಹಣ ಕಳುಹಿಸಲು ಆತನು ಹೇಳಿದಂತೆ ರಿಕ್ವೆಸ್ಟ್‍ ಕಳುಹಿಸಿದಾಗ ಬ್ಯಾಂಕ್‍ ಖಾತೆಯಿಂದ ಒಟ್ಟು ₹.90,000 ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಉಪಯೋಗಿಸಿದ ವಾಹನ ಖರೀದಿಸಲು ಅಥವಾ ಮಾರಾಟ ಮಾಡಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಮತ್ತು ಯಾವುದೇ ವಸ್ತಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿಕೊಳ್ಳುವುದು. ಆನ್‍ ಲೈನ್ ಹಣಕಾಸು ವರ್ಗಾವಣೆ ವ್ಯವಹಾರಗಳನ್ನು ತಮ್ಮ ಬ್ಯಾಂಕ್‍  ಅಧಿಕೃತ ಅಪ್ಲಿಕೇಶನ್‍ ಗಳನ್ನು ಬಳಸಲು ಕೋರಲಾಗಿದೆ.

ಹೆಲ್ಮೆಟ್‍ ಧರಿಸದೇ ಅತಿವೇಗ ವಾಹನ ಚಾಲನೆ , ಪ್ರಕರಣ ದಾಖಲು.

                ದಿನಾಂಕ: 29-03-2021 ರಂದು ಕುಶಾಲನಗರ ತಾವರೆಕೆರೆ ಬಳಿ ಸಂಚಾರ ಠಾಣೆ ಪಿಎಸ್‍ಐ ರವರು ಐಎಂವಿ ಕಾಯ್ದೆಯಡಿ ವಾಹನ ತಪಾಸಣೆ ಮಾಡುತ್ತಿರುವಾಗ ಕೆಎ-45-ವಿ-9021 ರ ಸ್ಕೂಟರನ್ನು ಅದರ ಸವಾರ ಸುರೆಶ್‍ ಎಂಬುವವರು ಜೊತೆಯಲ್ಲಿ ಅಭಿಲಾಶ್‍ ಮತ್ತು ಮೂರ್ತಿ ಎಂಬ ಇಬ್ಬರು ಸವಾರರೊಂದಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು ಈ ಬಗ್ಗೆ ಪಿ.ಎಸ್‍.ಐ ರವರ ವರದಿ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ 28-03-2021 ರಂದು ಪೊನ್ನಂಪೇಟೆ ತಾಲ್ಲೂಕು ಬೆಳ್ಳೂರು ಗ್ರಾಮದ ಹೆಮ್ಮಾಡು ಪೈಸಾರಿ ನಿವಾಸಿ ಕೌಶಿನ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಧನು, ಕೃಷ್ಣಪ್ಪ, ಕೀರ್ತನ್‍ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‍ ಕಳವು ಪ್ರಕರಣ

                ದಿನಾಂಕ: 25-03-2021 ರಂದು ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದ ನಿವಾಸಿ ರಂಜಿತ್‍ ಕುಮಾರ್‍ ಎಂಬುವವರು ಅವರ ಮನೆಯ ಬಳಿ ನಿಲ್ಲಿಸಿದ್ದ ಕೆಎ-09-ಇಪಿ-4387 ರ ಬೈಕನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 29-03-2021 ರಂದು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 29-03-2021 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ  ನಿವಾಸಿ  ಗಿರೀಶ್‍ ಎಂಬುವವರು  ಅವರ ಮನೆಯ  ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ  ಠಾಣೆ ಪಿಎಸ್‍ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ವಾಹನ ತೆರಿಗೆ ಪಾವತಿಸದೆ ವಂಚನೆ, ಪ್ರಕರಣ ದಾಖಲು

                ದಿನಾಂಕ: 29-03-2021 ರಂದು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯವರು ಐಎಂವಿ ಕಾಯ್ದೆಯಡಿ ವಾಹನ ತಪಾಸಣೆ ಮಾಡುತ್ತಿರುವಾಗ ಕೆಎ-13-ಇಜಿ-9478 ನೋಂದಣಿ ಸಂಖ್ಯೆಯ ಬೈಕನ್ನು ಕೂಡುಮಂಗಳೂರು ನಿವಾಸಿ ಪರಿಶೀಲಿಸಿದಾಗ ಯಾವುದೇ ದಾಖಲಾತಿ ಹಾಜರುಪಡಿಸದೇ ಇದ್ದು ಈ ಬಗ್ಗೆ ಪರಿಶೀಲಿಸಿದಾಗ ಹೊಸ ಬೈಕ್‍ ಖರೀದಿಸಿದ ನಂತರ ಸರ್ಕಾರಕ್ಕೆ ತೆರಿಗೆ ಪಾವತಿಸಿ ನೋಂದಣಿ ಮಾಡಿಸದೇ ಬೇರೆ ಯಾವುದೋ ವಾಹನದ ನಂಬರನ್ನು ಬಳಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 30-03-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080