ಅಭಿಪ್ರಾಯ / ಸಲಹೆಗಳು

ಕಾಡಾನೆ ದಾಳಿ, ವ್ಯಕ್ತಿ ಸಾವು

            ದಿನಾಂಕ: 27-12-2020 ರಂದು ರಾತ್ರಿ ಪೇರೂರು ಗ್ರಾಮದ ನಿವಾಸಿ ಅಪ್ಪಣ್ಣ ಎಂಬುವವರು ಮದುವೆ ಕಾರ್ಯಕ್ರಮದಿಂದ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ದಾರಿ ಮಧ್ಯೆ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಈ ಬಗ್ಗೆ ಪೂಣಚ್ಚ ಎಂಬುವವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 27-12-2020 ರಂದು ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡ ಬಳಿ ಕೆ-12-ಯು-1385 ರ ಬೈಕನ್ನು ಅದರ ಸವಾರ ದುಡುಕು ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಆರ್-6101 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಂಚನೆ ಪ್ರಕರಣ

            ಮಡಿಕೇರಿ ಕನ್ಸಟ್ರಕಷನ್‍ ಪ್ರೈ ಲಿ ಸಂಸ್ಥೆಯಲ್ಲಿ ಮೇನೇಜರ್ ವೃತ್ತಿ ಮಾಡಿಕೊಂಡಿರುವ ವಿಜೇತ್ ರೈ ಎಂಬುವವರು ಸಂಸ್ಥೆಯ ವತಿಯಿಂದ ನಡೆಸುತ್ತಿರುವ ರಸ್ತೆ ಕಾಮಗಾರಿಗಾಗಿ ಬಳ್ಳಾರಿಯ ನಮಿತ ಅಸೋಷಿಯೇಶನ್ ರವರಿಂದ 38 ಟನ್‍ ಕಬ್ಬಣದ ಸರಳನ್ನು ಖರೀದಿಸಿದ್ದು ದಿನಾಂಕ: 12-12-2020 ರಂದು ಚಾಲಕ ಸೂರಿ ಎಂಬುವವರು ಕೆಎ-51-ಎ-3437 ರ ಲಾರಿಯಲ್ಲಿ ತಂದಿದ್ದ ಕಬ್ಬಿಣದ ಸರಳುಗಳನ್ನು ಇಳಿಸುವ ಸಮಯದಲ್ಲಿ ಪರಿಶೀಲಿಸಿದಾಗ 5 ಟನ್‍ ಕಬ್ಬಿಣದ  ಸರಳು ಕಡಿಮೆ ಇದ್ದುದ್ದು ಕಂಡುಬಂದಿರುತ್ತದೆ. ಲಾರಿ ಚಾಲಕ ಖರೀದಿಗಿಂತ ಕಡಿಮೆ ಸರಕನ್ನು ಇಳಿಸಿ ₹. 3 ಲಕ್ಷ   ವಂಚನೆ ಮಾಡಿದ್ದು ಈ ಬಗ್ಗೆ  ದಿನಾಂಕ: 28-12-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 29-12-2020 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ