ಅಭಿಪ್ರಾಯ / ಸಲಹೆಗಳು

ಕೊಲೆ ಯತ್ನ ಪ್ರಕರಣ

                ದಿನಾಂಕ: 27-03-2021 ರಂದು ಕುಶಾಲನಗರ ಪಟ್ಟಣದ ತಾವರೆಕೆರೆಯಲ್ಲಿ ನೆಸ್ಟ್‍ ವುಡ್‍ ಫರನೀಚರ್‍ ಅಂಗಡಿ ಬಳಿ ವಿರಾಜಪೇಟೆ ತಾಲ್ಲೂಕು ಎಡಪಾಲ ನಿವಾಸಿ ಮಜೀದ್‍ ಎಂಬುವವರು ಅವರ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಗೊಂದಿಬಸವನಹಳ್ಳಿ ನಿವಾಸಿ ಹನೀಫ್‍್ ಎಂಬುವವರು ವೈಯಕ್ತಿಕ ವಿಚಾರದ ವೈಷಮ್ಯದಿಂದ ಚಾಕುವಿನಿಂದ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಸುಮೇರ್‍ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 28-03-2021 ರಂದು ಮಡಿಕೇರಿ ನಗರದ ಮೈಸೂರು ರಸ್ತೆ ಕಮಾನ್‍ ಗೇಟ್‍ ಬಳಿ ಕೆಎ-19-ಎಸಿ-7319 ರ ಕಾರನ್ನು ಅದರ ಚಾಲಕ ಕುಮಾರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-45-ಆರ್‍-7448 ರ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

                ದಿನಾಂಕ: 27-03-2021 ರಂದು ಕುಶಾಲನಗರ ಪಟ್ಟಣದ ಬೈಚನಹಳ‍್ಳಿ ನಿವಾಸಿ ಮಹಿಳೆಯೊಬ್ಬರ ಮನೆಗೆ ಹಣೆಗೆ ವಿಭೂತಿ, ಕುತ್ತಿಗೆಗೆ ರುದ್ರಾಕ್ಷಿ ಮಣಿ ಧರಿಸಿ, ಕೈಯಲ್ಲಿ ಗಂಟೆ ಹಿಡಿದುಕೊಂಡು ಮನೆಗೆ ಹೋಗಿ ಕಷ್ಟ ಪರಿಹಾರ ಮಾಡಿಕೊಡುವುದಾಗಿ ತಿಳಿಸಿ ಅಕ್ಕಿ, ನಿಂಬೆಹಣ್ಣು, ಅರಿಶಿನ ಕೊಂಬು , ಎಣ್ಣೆ ತರಿಸಿಕೊಂಡು ಪೂಜೆ ಮಾಡುವ ನೆಪದಲ್ಲಿ ಗೃಹಿಣಿಯ ಮನೆಯಲ್ಲಿದ್ದ ₹. 6,50,500  ಮೌಲ್ಯದ ಚಿನ್ನಾಭರಣ, ₹. 31,500 ನಗದು ಹಣವನ್ನು ಪಡೆದು ಡಬ್ಬದಲ್ಲಿ ಹಾಕಿಕೊಂಡಿರುತ್ತಾರೆ. ಪೂಜೆ ಮುಗಿದ ನಂತರ ಬೇರೆ ಡಬ್ಬವನ್ನು ತರಲು ಹೇಳಿ ಗೃಹಿಣಿಗೆ ತಿಳಿಯದಂತೆ ಕಲ್ಲು ಅಕ್ಕಿಯನ್ನು ಹಾಕಿ, ನಿಂಬೆಹಣ್ಣನ್ನು ನೀಡಿ ಜ್ಯೂಸ್‍ ಮಾಡಿ ಕುಡಿಯುವಂತೆ ಹೇಳಿದ್ದು ಜ್ಯೂಸ್‍ ಕುಡಿದಾಗ ಮಂಕು ಕವಿದಂತಾಗಿದ್ದು , ಈ ರೀತಿ ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಚಿನ್ನಾಭರಣ, ಹಣ ಲಪಾಟಾಯಿಸಿ ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

                ಸಾರ್ವಜನಿಕರು ಈ ರೀತಿಯ ವಂಚಕರಿಂದ ಮೋಸ ಹೋಗದಂತೆ ಎಚ್ಚರವಹಿಸುವುದು. ಈ ರೀತಿ ಸನ್ಯಾಸಿ, ಮಂತ್ರವಾದಿಗಳ ವೇಷ ಹಾಕಿಕೊಂಡು ಪೂಜೆ ಮಾಡಿ ಕಷ್ಟ ಪರಿಹಾರ ಮಾಡುವುದಾಗಿ ಹೇಳಿಕೊಂಡು ತಿರುಗಾಡುವ ಯಾರೇ ಅಪರಿಚಿತ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ ಪೊಲೀಸ್‍ ಇಲಾಖೆಗೆ ಮಾಹಿತಿ ನೀಡಲು ಕೋರಿದೆ.

ಹಲ್ಲೆ ಪ್ರಕರಣ

                ದಿನಾಂಕ: 26-03-2021 ರಂದು ಪೊನ್ನಂಪೇಟೆ ತಾಲ್ಲೂಕು ಬೇಗೂರು ಗ್ರಾಮದ ಮಾಪಿಳ್ಳೆತೋಡು  ನಿವಾಸಿ ಶ್ರೀನಿವಾಸಗೌಡ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಮಣಿ ಎಂಬುವವರು ಹಳೆ ವೈಷಮ್ಯದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 27-03-2021 ರಂದು ಸೋಮವಾರಪೇಟೆ ತಾಲ್ಲೂಕು ಬಾಣಾವಾರ ಗ್ರಾಮದ  ನಿವಾಸಿ  ವಿಜಯ ಎಂಬುವವರು  ಅವರ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ  ಠಾಣೆ ಪಿಎಸ್‍ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 27-03-2021 ರಂದು ಸೋಮವಾರಪೇಟೆ ತಾಲ್ಲೂಕು ಬಾಣಾವಾರ ಗ್ರಾಮದ  ನಿವಾಸಿ  ಜಗದೀಶ ಎಂಬುವವರು  ಅವರ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ  ಠಾಣೆ ಪಿಎಸ್‍ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ನವೀಕರಣ​ : 28-03-2021 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080