ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ, ವ್ಯಕ್ತಿ ಸಾವು

ದಿನಾಂಕ 26/02/2021ರ ರಾತ್ರಿ ವೇಳೆ ಕುಶಾಲನಗರದ ಕೂಡ್ಲೂರು ಬಳಿಯ ಟಿ.ಸಿ.ಸಿ. ಕಾಫಿ ವರ್ಕ್ಸ್‌ ನ ಮುಂಭಾಗ ಯಾವುದೋ ಒಂದು ಅಪರಿಚಿತ ಲಾರಿಯ ಚಾಲಕ ಪಿರಿಯಾಪಟ್ಟಣದ ದಿಂಡಿಗಾಡು ನಿವಾಸಿ ಪ್ರಸನ್ನ ಕುಮಾರ್‌ ಎಂಬವರಿಗೆ ಲಾರಿಯನ್ನು ಡಿಕ್ಕಿಪಡಿಸಿದ ಪರಿಣಾಮ ಪ್ರಸನ್ನ ಕುಮಾರ್‌ರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗಂಡಸು ಕಾಣೆ ಪ್ರಕರಣ

ದಿನಾಂಕ 26/02/2021ರಂದು ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ನಿವಾಸಿಗಳಾದ ಜುನೈದ್‌ ಹಾಗೂ ನಿಯಾಜ್‌ ಎಂಬವರು ಕುಶಾಲನಗರಕ್ಕೆ ಹೋಗಿ ಬರುವುದಾಗಿ ಹೇಲಿ ಸ್ಕೂಟರಿನಲ್ಲಿ ಹೋದವರು ಮನೆಗೆ ಮರಳಿ ಬಾರದೇ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕರ್ತವ್ಯಕ್ಕೆ ಅಡ್ಡಿ ಪ್ರಕರಣ

ದಿನಾಂಕ 26/02/2021ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಸಿದ್ದಲಿಂಗ ಬಾನಸೆಯವರು ಅಮ್ಮತ್ತಿ ಬಳಿ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿಗೆ ಒಂದು ಕಾರಿನಲ್ಲಿ ಬಂದ ಸಿದಾಪುರದ ನಿವಾಸಿ ಹಾಸಿಮ್‌ ಎಂಬವರು ಕಾರಿನಲ್ಲಿ ಸೀಟ್‌ ಬೆಲ್ಟ್‌ ಹಾಕದೇ ವಾಹನ ಚಾಲಿಸುತ್ತಿದ್ದ ಅಪರಾಧಕ್ಕಾಗಿ ಸ್ಥಳದಂಡ ಕಟ್ಟುವಂತೆ ಪಿಎಸ್‌ಐ ಸಿದ್ದಲಿಂಗ ಬಾನಸೆಯವರು ಸೂಚಿಸಿದ್ದು ಆಗ ಹಾಸಿಮ್‌ರವರು ಪೊಲೀಸರನ್ನು ನಿಂದಿಸುತ್ತಾ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐರವರನ್ನು ತಳ್ಳಿಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 28-02-2021 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ