ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 23/08/2021ರಂದು ಕುಶಾಲನಗರದ ಕೆಇಬಿ ರಸ್ತೆಯ ಬಳಿ ರಮೇಶ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ಬೈಕ್‌ ಸವಾರನು ಬೈಕನ್ನುಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಮೇಶರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಮೇಶರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 25/08/2021ರಂದು ನಾಪೋಕ್ಲು ಬಳಿಯ ಮರಂದೋಡ ನಿವಾಸಿ ಚೋಯಮಾಡಂಡ ಅಪ್ಪಚ್ಚು ಎಂಬವರು ಗಣಪತಿ ಎಂಬವರ ಮನೆಯಿಂದ ಹೋಗುತ್ತಿರುವಾಗ ಚೋಯಮಾಡಂಡ ಅಶೋಕ ಎಂಬಾತನು ಹಳೆ ದ್ವೇಷದಿಂದ ಅಪ್ಪಚ್ಚುರವರ ತಲೆಯ ಹಿಂಭಾಗ ಮತ್ತು ಮುಂಭಾಗಕ್ಕೆ ಗಾರೆ ಕತ್ತಿಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಂಟೈನರ್‌ ಮಗುಚಿ ವ್ಯಕ್ತಿ ಸಾವು

ದಿನಾಂಕ 26/08/2021ರಂದು ಸುಂಟಿಕೊಪ್ಪ ಬಳಿಯ ಬಾಳೆಕಾಡು ತೋಟದ ಬಳಿ ಒಂದು ಕಂಟೈನರ್‌ ಲಾರಿಯನ್ನು ಅದರ ಚಾಲಕ ಮುರಳೀಧರ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿಕೊಂಡಿದ್ದು ಲಾರಿಯಲ್ಲಿದ್ದ ಲಾರಿಯ ಕ್ಲೀನರ್‌ ಸುಬ್ರಮಣಿ ಎಂಬಾತನು ಲಾರಿಯ ಕೆಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 26/08/2021ರಂದು ಗೋಣಿಕೊಪ್ಪ ನಿವಾಸಿ ತಾಹಿರ್‌ ಎಂಬವರು ಅವರ ರಿಕ್ಷಾದಲ್ಲಿ ಕೈಕೇರಿಯಿಂದ ಗೋಣಿಕೊಪ್ಪದ ಕಡೆಗೆ ಬರುತ್ತಿರುವಾಗ ಗೋಣಿಕೊಪ್ಪದ ನಯನ ಚಿತ್ರಮಂದಿರದ ಮುಂಭಾಗದಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ನಾಪೋಕ್ಲು ಬಳಿಯ ಕೊಳಕೇರಿ ನಿವಾಸಿ ನಿತಿನ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತಾಹಿರ್‌ರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ತಾಹಿರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 26/08/2021ರಂದು ಗೋಣಿಕೊಪ್ಪದ ಚೆನ್ನಂಗೊಲ್ಲಿ ನಿವಾಸಿ ಅಭಿಲಾಶ್‌ ಎಂಬವರು ಅವರ ಸ್ನೇಹಿತರಾದ ನವೀನ್‌ ಎಂಬವರೊಂದಿಗೆ ತಿತಿಮತಿಯ ಅಂಚೆ ಕಚೇರಿ ಬಳಿ ಮಾತನಾಡುತ್ತಾ ನಿಂತಿರುವಾಗ ಅಲ್ಲಿಗೆ ಬಂದ ದೇವರಪುರದ ನಿವಾಸಿಗಳಾದ ಸುರೆ, ರಮೇಶ ಮತ್ತು ಮಹೇಶ ಎಂಬವರು ಅಭಿಲಾಶ್‌ರವರ ಜೊತೆ ವಿನಾ ಕಾರಣ ಜಗಳವಾಡಿ ಕೈ ಹಾಗೂ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನುಷ್ಯ ಕಾಣೆ

ವಿರಾಜಪೇಟೆಯ ಅರಸು ನಗರ ನಿವಾಸಿ ಪ್ರಮೀಳಾ ಎಂಬವರು ಓಣಂ ಹಬ್ಬದ ಪ್ರಯುಕ್ತ ದಿನಾಂಕ 21/08/2021ರಂದು ಅವರ ತಾಯಿಯ ಮನೆಯಾದ ನಲ್ವತೊಕ್ಲು ಗ್ರಾಮದ ಚೀಪೆಕಾಡು ಪೈಸಾರಿಗೆ ಗಂಡ ಪ್ರವೀಣ ಹಾಗೂ ಮಕ್ಕಳೊಂದಿಗೆ ಹೋಗಿದ್ದು ದಿನಾಂಕ 25/08/2021ರಂದು ಪ್ರವೀಣನು ಗೋಣಿಕೊಪ್ಪದಲ್ಲಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದಾತನು ಇದುವರೆಗೂ ಮನೆಗೆ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 27-08-2021 03:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ