ಅಭಿಪ್ರಾಯ / ಸಲಹೆಗಳು

ಜೆನರೇಟರ್‌ ಕಳವು ಪ್ರಕರಣ ಪತ್ತೆ, ಆರೋಪಿಗಳ ಬಂಧನ:

            ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಕಿರುಂದಾಡು ಗ್ರಾಮದಲ್ಲಿ ವರದಿಯಾಗಿದ್ದ ವಿದ್ಯುತ್‌ ಜೆನರೇಟರ್‌ ಕಳವು ಪ್ರಕರಣವನ್ನು ನಾಪೋಕ್ಲು ಠಾಣೆ ಪೊಲೀಸರು ಪತ್ತೆ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೆನರೇಟರ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಪಿಕ್‌ ಅಪ್‌ ವಾಹನ ವಶಕ್ಕೆ ಪಡೆದಿರುತ್ತಾರೆ.

ದಿನಾಂಕ 25-07-2021 ರ ರಾತ್ರಿ ಕಿರಂದಾಡು ಗ್ರಾಮದಲ್ಲಿ ಮನೆಯ ಪಕ್ಕದಲ್ಲಿರುವ ಶೆಡ್ಡಿನ ರೋಲಿಂಗ್‌ ಶೆಟರ್‌ ಬೀಗವನ್ನು ಮುರಿದು ಶೆಡ್ಡಿನಲ್ಲಿ ಅಳವಡಿಸಿಟ್ಟಿದ್ದ ₹. 45,000 ಬೆಲೆಬಾಳುವ ಪೆಟ್ರೋಲ್ ಚಾಲಿತ ವಿದ್ಯತ್‌ ಜನರೇಟರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.  

            ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಆರೋಪಿಗಳಾದ 1)ಹಮೀದ್ ಬಿ.ಎಂ ತಂದೆ ಪೌತಿ ಮಮ್ಮದ್ ಪ್ರಾಯ 35 ವರ್ಷ ವ್ಯಾಪಾರ ವೃತ್ತಿ ಚಾಲಕ ವೃತ್ತಿ ವಾಸ ಹೊದವಾಡ ಗ್ರಾಮ ಮತ್ತು 2) ಬೀಟೆಬಾಣೆ  ಬದ್ರುದ್ದಿನ್ @ ಬದ್ರು ತಂದೆ ಪೌತಿ ಅಹಮ್ಮದ್ ಪ್ರಾಯ 36 ವರ್ಷ  ತರಕಾರಿ ವ್ಯಾಪಾರ ವಾಸ ಹೊದವಾಡ ಗ್ರಾಮ ಎಂಬುವವರನ್ನು ವಶಕ್ಕೆ ಪಡೆದು ಬಂಧಿತರಿಂದ ವಿದ್ಯುತ್‌ ಜೆನರೇಟರ್‌ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಪಿಕ್‌ ಅಪ್‌ ವಾಹನವನ್ನು ವಶಕ್ಕೆ ಪಡೆದಿರುತ್ತಾರೆ.

  ಈ ಪ್ರಕರಣವನ್ನು ನಾಪೋಕ್ಲು ಠಾಣಾ ಪಿಎಸ್‌ಐ ಕಿರಣ್‌, ಎ.ಎಸ್‌.ಐ ಕುಶಾಲಪ್ಪ, ಸಿಬ್ಬಂದಿಯವರಾದ ಸಾಜನ್‌, ರವಿಕುಮಾರ್‌, ಮಹೇಶ್‌, ನವೀನ್‌ ರವರನ್ನೊಳಗೊಂಡ ತಂಡ ಮಡಿಕೇರಿ ಗ್ರಾಮಾಂತರ ಸಿ.ಪಿ.ಐ ಅನೂಪ್‌ ಮಾದಪ್ಪ ರವರ ನೇತೃತ್ವದಲ್ಲಿ ಪತ್ತೆ ಮಾಡಿದ್ದು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 25-07-2021 ರಂದು ಮಡಿಕೇರಿ –ಕುಶಾಲನಗರ ಹೆದ್ದಾರಿ ರಸ್ತೆಯ ಸಿಂಕೋನ ಎಸ್ಟೇಟ್‌ ಬಳಿ ಕೆಎ-03-ಎಂಎಸ್-7918 ರ ಕಾರಿನ ಚಾಲಕ ಅತಿವೇಗ ಮತ್ತು ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಎಪಿ-09-ಎಎಕ್ಸ್-3526 ರ ಕಾರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂ ಗೊಂಡಿರುತ್ತವೆ.

          ಈ ಬಗ್ಗೆ ಉಭಯ ಕಡೆಯವರ ನಡುವೆ ಘಟನೆಯ ಸ್ಥಳದಲ್ಲಿ ವಾಗ್ವಾದವಾಗಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಊಭಯ ಕಡೆಯವರುನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಸಂಧರ್ಭ ಹಲ್ಲೆ ಮಾಡಿ ಚಿನ್ನಾಭರಣ ಕಳವು ಪ್ರಕರಣ:

ಮಡಿಕೇರಿ ತಾಲ್ಲೂಕು ಸಿಂಕೋನ ಎಸ್ಟೇಟ್‌ ಬಳಿ ಹೆದ್ದಾರಿ ರಸ್ತೆಯಲ್ಲಿ ನಡೆದಿದ್ದ ರಸ್ತೆ ಅಪಘಾತ ಸಂದರ್ಭ ಕಾರುಚಾಲಕ ನಡುವೆ ವಾಗ್ವಾದವಾಗುವಾಗ ಹಲ್ಲೆ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

          ದಿನಾಂಕ 25-07-2021 ರಂದು ಎ.ಟಿ.ಮೊಣ್ಣಪ್ಪರವರು  ಕುಟುಂಬ ಸಮೇತ  ಅವರ ಎಪಿ-09-ಎಎಕ್ಸ್-3526 ರ ಸಂಖ್ಯೆಯ ಲ್ಯಾನ್ಸರ್ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಸಿಂಕೋನಾ ತೋಟದ ಬಳಿ ಹಿಂಬದಿಯಿಂದ ಕೆಎ-03-ಎಂಎಸ್-7918 ರ ಡಸ್ಟರ್ ಕಾರು ಡಿಕ್ಕಿ ಪಡಿಸಿದ್ದರಿಂದ  ಕಾರು ಜಖಂಗೊಂಡಿದ್ದು ಈ ಬಗ್ಗೆ ಡಸ್ಟರ್‌ ಕಾರಿನ ಚಾಲಕನು ಅತೀವೇಗದಿಂದ ಕಾರು ಚಾಲನೆ ಮಾಡಿದ ಕಾರಣ ಅಪಘಾತವಾಗಿರುವುದಾಗಿ ಮನವರಿಕೆ ಮಾಡುತ್ತಿರುವಾಗ ಡಸ್ಟರ್ ಕಾರಿನ ಚಾಲಕನು ಅವಾಚ್ಯವಾಗಿ ಬೈದು 20 ನಿಮಿಷದ ಅವದಿಯಲ್ಲಿ ಏಕಾ ಏಕಿ ಸುಮಾರು ಹತ್ತು ಜನರು ಗುಂಪು ಸೇರಿಸಿ ಮೊಣ್ಣಪ್ಪ ರವರ ಕುಟುಂಬದವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಗಾಯಪಡಿಸಿದ್ದು, ಹಲ್ಲೆ ಮಾಡಿದ ವ್ಯಕ್ತಿಗಳು ಮೊಣ್ಣಪ್ಪ ರವರ ಮಕ್ಕಳು ಧರಿಸಿದ್ದ ಎರಡು ಚಿನ್ನದ ಸರ ಹಾಗೂ ಉಂಗುರುವನ್ನು ಕದ್ದೊಯ್ದ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

      ದಿನಾಂಕ 26-07-2021 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ 1) ಹೆಚ್.ಯು.ರಫೀಕ್ ಖಾನ್ ತಂದೆ ಉಸ್ಮಾನ್, ಪ್ರಾಯ 42 ವರ್ಷ, ಸುಂಟಿಕೊಪ್ಪ, 2) ಆರ್.ಹೆಚ್.ನಾಸಿರ್ ತಂದೆ ಹಸನ್, 34 ವರ್ಷ, ಸುಂಟಿಕೊಪ್ಪ. 3) ಹೆಚ್.ಯು.ಇಸಾಕ್ ತಂದೆ ಉಸ್ಮಾನ್, ಪ್ರಾಯ 40 ವರ್ಷ, ಸುಂಟಿಕೊಪ್ಪ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿರುತ್ತದೆ

          ಈ ಪ್ರಕರಣದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಎಸ್.ಎಸ್. ರವಿಕಿರಣ್, ಪಿ.ಎಸ್.ಐ ಎಂ.ಕೆ. ಸದಾಶಿವ, ಮತ್ತು ಠಾಣಾ ಸಿಬ್ಬಂದಿಯವರಾದ ಹೆಚ್.ಡಿ.ಪ್ರಸನ್ನ ಕುಮಾರ್, ಕೆ.ಕೆ. ಶಶಿಧರ್, ಕೆ.ಜಿ.ರವಿಕುಮಾರ್, ಟಿ.ಆರ್.ದಿನೇಶ್, ದಿನೇಶ್.ಕೆ.ಡಿ, ಸೋಮಶೇಖರ್ ಸಜ್ಜನ್, ಜಿ.ಎಸ್.ಅನಿಲ್, ಮಾದಯ್ಯ, ಸಿದ್ದರಾಮ ವಂದಲ, ಅಂತೋಣಿ ಐ.ಜೆ, ಎಂ.ಡಿ. ಸೋಮಶೇಖರ್  ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 26-07-2021 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎಲ್-58-ಎಲ್-3362 ರ ಕಾರನ್ನು ಅದರ ಚಾಲಕ ಶಮೀರ್‌ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-04-ಎಂ.ಎಂ-9879 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳ ಚಾಲಕರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 27-07-2021 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080