ಅಭಿಪ್ರಾಯ / ಸಲಹೆಗಳು

           ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ -19 ಚಿಕಿತ್ಸೆ ಬಗ್ಗೆ ದಾಖಲಾಗಿ ಮೃತಪಟ್ಟ ವರಿಗೆ ಸಂಬಂಧಿಸಿದ  ಮೊಬೈಲ್ ಗಳ ಕಾಣೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಅಪರಾಧ ಗುಪ್ತಚರದಳ ಹಾಗೂ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

        ಕೋವಿಡ್-19 ಸಂಬಂಧ ಚಿಕಿತ್ಸೆಯ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರಪೇಟೆಯ ಕೆ.ಎನ್ ತೇಜಸ್ವಿ ಎಂಬವರ ಪತ್ನಿ ದಾಖಲಾಗಿದ್ದು  ತನ್ನ ಪತ್ನಿಗೆ ಸಂಬಂಧಿಸಿದ ಮೊಬೈಲನ್ನು  ಜಿಲ್ಲಾ ಆಸ್ಪತ್ರೆಯಿಂದ  ಹಿಂತಿರುಗಿಸಿರುವುದಿಲ್ಲ ಮೊಬೈಲನ್ನು  ಆಸ್ಪತ್ರೆಯಲ್ಲಿ ಕಳವು ಮಾಡಿರುತ್ತಾರೆ ಕಳ್ಳತನವಾದ ಮೊಬೈಲನ್ನು ಪತ್ತೆಹಚ್ಚಿಕೊಡಬೇಕೆಂದು ಮಡಿಕೇರಿ ನಗರ ಪೊಲೀಸ್ ಠಾಣೆಗೆ  ದೂರು ನೀಡಿದ ಮೇರೆ  ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರ.ಸಂ 32/2021 ಕಲಂ ; 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

       ಜಿಲ್ಲಾ ಅಪರಾಧ ಗುಪ್ತಚರ ದಳ ಹಾಗೂ ಮಡಿಕೇರಿ ನಗರ ಪೊಲೀಸರು ಮಾಹಿತಿ ಕಲೆಹಾಕಿದ  ಜಿಲ್ಲಾ ಅಪರಾಧ ಗುಪ್ತಚರದಳದ ಸಿಬ್ಬಂದಿಗಳು ಹಾಗೂ ಮಡಿಕೇರಿ ನಗರ ಪೊಲೀಸರು ತನಿಖೆ ಕೈಗೊಂಡು   ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾದ  ರೋಗಿಗಳಿಗೆ ಕಾಫಿ ಹಾಗೂ ಟೀ ಸಪ್ಲೈ ಮಾಡುತ್ತಿದ್ದ ವ್ಯಕ್ತಿಯೊಬ್ಬನು  ಕೃತ್ಯಕ್ಕೆ ಸಂಬಂಧಿಸಿದಂತೆ  ಬಂಧಿಸಿ ವಿಚಾರಣೆಗೊಳಪಡಿಸಿದಾಗ  ಕೋವಿಡ್-19 ನಿಂದ ಮೃತಪಟ್ಟ ಕೆಲವು ವ್ಯಕ್ತಿಗಳ ಮೊಬೈಲ್ , ಎಟಿಎಂ ಕಾರ್ಡನ್ನು  ಕಳ್ಳತನ ಮಾಡಿರುವುದು ತಿಳಿದುಬಂದಿರುತ್ತದೆ.

 ಬಂಧಿತ ವ್ಯಕ್ತಿಯ  ವಿಳಾಸ;

ಸುಮಂತ್  ಕೆ.ಡಿ  ತಂದೆ ಲೇಟ್ ದೇವರಾಜ್ , ಪ್ರಾಯ 24 ವರ್ಷ .ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ  ಕಾಫೀ ಮತ್ತು ಟೀ  ಸಪ್ಲೈಯರ್ ,  ಬಾಬಣ್ಣ ಎಂಬವರ ಮನೆಯಲ್ಲಿ ಬಾಡಿಗೆಗೆ  ವಾಸ ರೇಸ್ ಕೋರ್ಸ್ ರಸ್ತೆ ಮಡಿಕೇರಿ. ಸ್ವಂತ ಊರು ಬಿಳಿಗೇರಿ ಜಂಕ್ಷನ್  ಮೇಕೇರಿ.

           ಸದ್ರಿ ಆರೋಪಿಯು ಅಪರಾಧ  ಚಾರಿತ್ಯವುಳ್ಳ  ವ್ಯಕ್ತಿಯಾಗಿದ್ದು ಈತನಿಂದ  ಕೋವಿಡ್-19 ಚಿಕಿತ್ಸೆ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟ ಸೋಮವಾರಪೇಟೆ ನಿವಾಸಿ ಮಹಿಳೆ ಹಾಗೂ ಶ್ರೀಮಂಗಲ ಕುರ್ಚಿ ಗ್ರಾಮ ನಿವಾಸಿಯೊಬ್ಬರಿಗೆ ಸಂಬಂಧಿಸಿದ ಹಾಗೂ  ಇನ್ನೊಂದು ವಿಳಾಸ ಪತ್ತೆಯಾಗದ ವ್ಯಕ್ತಿಗೆ ಸೇರಿದ ಒಂದು ಮೊಬೈಲ್ ಸೇರಿದಂತೆ ವಿವಿಧ ಕಂಪನಿಗಳ ಒಟ್ಟು 03 ಮೊಬೈಲ್ ಗಳನ್ನು  ಹಾಗೂ ವಿವಿಧ ಬ್ಯಾಂಕ್ ಗಳಿಗೆ ಸಂಬಂಧಿಸಿದ 03 ಎಟಿಎಂ ಕಾರ್ಡ್ ಗಳನ್ನು  ವಶಪಡಿಸಿಕೊಳ್ಳಲಾಗಿರುತ್ತದೆ.

ಮಡಿಕೇರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್  ಅನೂಪ್ ಮಾದಪ್ಪ , ಡಿಸಿಐಬಿ ಸಿಬ್ಬಂದಿಗಳಾದ  ಎಎಸ್ಐ ಹಮೀದ್. ಯೊಗೇಶ್ ಕುಮಾರ್ , ನಿರಂಜನ್ , ವಸಂತ , ಸುರೇಶ್ , ಅನಿಲ್ ಕುಮಾರ್ ,ವೆಂಕಟೇಶ್ , ಶರತ್ ರೈ , ಸುಮತಿ , ಶಶಿಕುಮಾರ್  ಹಾಗೂ ಮಡಿಕೇರಿ ನಗರ ಠಾಣೆಯ ಅಪರಾಧ ಸಿಬ್ಬಂದಿಗಳಾದ  ಪ್ರವೀಣ್ , ನಾಗರಾಜ್ , ಸುನಿಲ್, ಆರುಣ್ , ಶ್ರೀನಿವಾಸ್  ಹಾಗೂ ಸಿಡಿಆರ್ ಸೆಲ್ ನ  ರಾಜೇಶ್, ಗಿರೀಶ್   ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು  ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

       ಕೋವಿಡ್ -19 ಚಿಕಿತ್ಸೆಯ ಬಗ್ಗೆ ದಾಖಲಾಗುವ ರೋಗಿಗಳು ಮತ್ತು ಅವರ ಸಂಬಂಧಿಕರು ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳನ್ನು ಆಸ್ಪತ್ರೆಯಲ್ಲಿ ತಮ್ಮ ಬಳಿ ಇಟ್ಟುಕೊಳ್ಳದೇ  ಉಪಯೋಗಕ್ಕಿರುವಷ್ಟು ಹಣವನ್ನು ಮಾತ್ರ ತರುವಂತೆ ಹಾಗೂ ಎಚ್ಚರದಿಂದ ಇರಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 26-05-2021 ರಂದು ಪೊನ್ನಂಪೇಟೆ ನಗರದ ಎಂ.ಜಿ ನಗರ ತಿರುವಿನ ಬಳಿ ರಸ್ತೆಯಲ್ಲಿ ಕೆಎ-12-ಎನ್-9210‌ ರ ಕಾರನ್ನು ಅದರ ಚಾಲಕ ಕುಟ್ಟಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆ-12-ಆರ್-6690 ರ ಬೈಕ್‌ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಮಂಜು ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ ಡೌನ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 26-05-2021 ರಂದು ಸೋಮವಾರಪೇಟೆ ತಾಲ್ಲೂಕು ಇಗ್ಗೋಡ್ಲು ಗ್ರಾಮದ ಪೊದವಾಡ ನಿವಾಸಿ ಚಂಗಪ್ಪ ಎಂಬುವವರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ಹಿಟ್ಟಿನ ಗಿರಣಿ ಮತ್ತು ಕಾಫಿ ಗಿರಣಿ ತೆರೆದು ನಿಯಮ ಉಲ್ಲಂಘಿಸಿದ ಮೇರೆ ಪಂಚಾಯಿತಿ ಅಧಿಕಾರಿಗಳು ಪರಿಶೀಲನೆ ಮಾಡಿ ನೀಡಿದ ವರದಿ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.

ನಕಲಿ ಕೋವಿಡ್‌ ಪರಿಕ್ಷಾ ವರದಿ ಪ್ರಕರಣ

                ದಿನಾಂಕ: 26-05-2021 ರಂದು ವಿರಾಜಪೇಟೆ ತಾಲ್ಲೂಕು ಪೆರಂಬಾಡಿ ಚೆಕ್‌ ಪೋಸ್ಟ್‌ ನಲ್ಲಿ ಎ.ಎಸ್.ಐ ಮೊಹಮ್ಮದ್‌ ಮತ್ತು ಸಿಬ್ಬಂದಿಯವರು ಕೇರಳ ರಾಜ್ಯದಿಂದ ಕರ್ನಾಟಕ  ರಾಜ್ಯಕ್ಕೆ ಆಗಮಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುವಾಗ ಕೆಎಲ್-58-ಆರ್-9690       ನೋಂದಣಿ ಸಂಖ್ಯೆಯ ಗೂಡ್ಸ್‌ ವಾಹನವನ್ನು ಪರಿಶೀಲಿಸುವಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳ ಕೋವಿಡ್‌ ಪರಿಶೀಲನಾ ವರದಿ ತೋರಿಸುವಂತೆ ಸೂಚಿಸಿದಾಗ ಮೊಬೈಲ್‌ ನಲ್ಲಿದ್ದ ಕೇರಳ ರಾಜ್ಯದಲ್ಲಿ ಪರೀಕ್ಷೆ ಮಾಡಿಸಿದ ವರದಿಯನ್ನು ತೋರಿಸಿರುತ್ತಾರೆ. ವರದಿಯನ್ನು ಸಂಬಂದಪಟ್ಟ ವೆಬ್‌ ಸೈಟ್‌ ನಲ್ಲಿ ಪರಿಶೀಲಿಸಿದಾಗ ನಕಲಿ ವರದಿ ಎಂಬುದಾಗಿ ತಿಳಿದುಬಂದ ಮೇರೆ ವಿಚಾರಣೆ ಮಾಡಿದಾಗ ಮೊಬೈಲ್‌ ನಲ್ಲಿ ಎಡಿಟ್‌ ಮಾಡಿ ಸುಳ್ಳು ಕೋವಿಡ್‌ ಪರಿಕ್ಷಾ ವರದಿಯನ್ನು ಸೃಷ್ಟಿಸಿಕೊಂಡಿರುವುದಾಗಿ ಕಂಡುಬಂದಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 27-05-2021 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ