Feedback / Suggestions

ಕಳವು ಪ್ರಕರಣ ಪತ್ತೆ, ಆರೋಪಿ ಬಂಧನ. 

          ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ನಂಜುಂಡೇಶ್ವರ ಬಡಾವಣೆ ಹಾಗೂ ಆದರ್ಶ ದ್ರಾವಿಡ ಕಾಲೋನಿಯಲ್ಲಿ ಮನೆಯ ಒಳಗೆ ನುಗ್ಗಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.  

ಕುಶಾಲನಗರ ಟೌನ್ ನ ನಿವಾಸಿಗಳು ತಮ್ಮ ಕೆಲಸಗಳ ನಿಮಿತ್ತ ಮನೆಗೆ ಬೀಗ ಹಾಕಿ ತೆರಳಿದ್ದ ಸಂದರ್ಭ ಸದರಿ ಮನೆಗಳ ಬೀಗ ಹೊಡೆದು ಕಳವು ಮಾಡಿದ 2 ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಿಪಿಐ ಕುಶಾಲನಗರ ವೃತ್ತರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಸಿಪಿಐ ಕುಶಾಲನಗರ ರವರ ತಂಡ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ 2 ಕಳವು ಪ್ರಕರಣಗಳು ಪತ್ತೆಯಾಗಿರುತ್ತದೆ.

 ದಸ್ತಗಿರಿ ಮಾಡಲಾದ ಆರೋಪಿಯ ವಿವರ : 1. ಕಿರಣ್ ಕುಮಾರ್ ಆರ್ ತಂದೆ ರವಿಕುಮಾರ್ ಪ್ರಾಯ 22 ವರ್ಷ, ಸೆಂಟ್ರಿಂಗ್ ಕೆಲಸ, ವಾಸ: ದುದ್ದಗಲ್ ಹಾನಗಲ್ಲು ಗ್ರಾಮ, ಸೋಮವಾರಪೇಟೆ ತಾಲೂಕು.

ಆರೋಪಿಯಿಂದ ವಶಪಡಿಸಿಕೊಳ್ಳಲಾದ ಕಳವು ಮಾಲಿನ ವಿವರ :

  1. ಹೆಚ್.ಪಿ ಕಂಪನಿಯ 2 ಲ್ಯಾಪ್ ಟಾಪ್ ಗಳು
  2. 6,500 ರೂ ನಗದು ಹಣ
  3. ಒಂದು ಜೊತೆ ಚಿನ್ನದ ಓಲೆ
  4. ಒಂದು ಚಿನ್ನದ ಕೈಬಳೆ
  5. ಒಂದು ಚಿನ್ನದ ಕರಿಮಣಿಸರ
  6. ಒಂದು ಸ್ಯಾಮ್ಸಂಗ್ ಮೊಬೈಲ್ ಪೋನ್
  7. ಒಂದು ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಬ್ಬಿಣದ ಹಾರೆಯನ್ನು ವಶಪಡಿಸಿಕೊಳ್ಳಲಾಗಿದೆ.

 ಸದರಿ ಪ್ರಕರಣವನ್ನು ಹೆಚ್.ಎಂ. ಶೈಲೇಂದ್ರ ಪೊಲೀಸ್ ಉಪಾಧೀಕ್ಷಕರು ಸೋಮವಾರಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಹೇಶ್ ಎಂ, ಸಿಪಿಐ ಕುಶಾಲನಗರ ವೃತ್ತ ರವರ ನೇತೃತ್ವದಲ್ಲಿ, ಗಣೇಶ್ ಪಿಎಸ್ಐ ಕುಶಾಲನಗರ ಟೌನ್ ಪೊಲೀಸ್ ಠಾಣೆ, ಗೋಪಾಲ ಎಎಸ್ಐ ಸಿಬ್ಬಂದಿಯವರಾದ ಸುದೀಶ್ ಕುಮಾರ್ , ರಂಜಿತ್ ಹಾಗೂ ಕುಶಾಲನಗರ ಉಪವಿಭಾಗದ ಕ್ರೈಂ ಸಿಬ್ಬಂದಿಗಳಾದ ಬಿ.ಎಸ್. ದಯಾನಂದ, ಸಜಿ, ಪ್ರಕಾಶ್, ಉಮೇಶ್ ರವರ ಪರಿಶ್ರಮದಲ್ಲಿ ಭೇಧಿಸಿದ್ದು, ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಕೊಡಗು ಜಿಲ್ಲೆಯ ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದೆಂದು ಹಾಗೂ ಹಾಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು. ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 112 ಇಂಡಿಯಾ ಎಂಬ ತಂತ್ರಾಂಶವನ್ನು ತಯಾರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಿಕೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 26-02-2021 ರಂದು ಸೋಮವಾರಪೇಟೆ ತಾಲ್ಲೂಕು ಕಲ್ಲೂರು ಗ್ರಾಮದ  ನಿವಾಸಿ  ಪ್ರಶಾಂತ್‍  ಎಂಬುವವರು ಅಂದಗೋವೆ ಗ್ರಾಮದ ಬಸ್ ತಂಗುದಾಣದ ಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆ ಪೊಲೀಸ್‍ ನಿರೀಕ್ಷಕರಾದ ಹೆಚ್‍.ವೈ ವೆಂಕಟರಮಣ  ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

          ದಿನಾಂಕ: 24-02-2021 ರಂದು ಸೋಮವಾರಪೇಟೆ ತಾಲ್ಲೂಕು ಶಿರಂಗಾಲ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಒಂದು ಪಿಕ್‍ ಅಪ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-19-ಇಜೆ-2058 ರ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಬಿದ್ದು ಗಾಯಗೊಂಡಿದ್ದು, ಪಿಕ್‍ ಅಪ್‍ ಚಾಲಕ ವಾಹನವನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ದಿನಾಂಕ: 26-02-2021 ರಂದು ಬೈಕ್‍ ಸವಾರ ಕೃಷ್ಣಪ್ಪ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಆನ್ ಲೈನ್‍ ವಂಚನೆ ಪ್ರಕರಣ

          ದಿನಾಂಕ: 25-02-2021 ರಂದು ಮಡಿಕೇರಿ ನಗರದ ಅಶೋಕಪುರ ನಿವಾಸಿ ಗಣೇಶ್‍ ಎಂಬುವವರು ಹೊಂದಿರುಪಂಜಾಬ್‍ ನ್ಯಾಷನಲ್‍ ಬ್ಯಾಂಕ್‍ ಕ್ರೆಡಿಟ್‍ ಕಾರ್ಡ್‍ ಆಕ್ಟಿವೇಷನ್‍ ಮಾಡಲು ವೆಬ್‍ ಸೈಟ್‍ ಮೂಲಕ ಹುಡುಕಿದಾಗ ದೊರೆತ ಕಸ್ಟಮರ್‍ ಕೇರ್‍ ನಂಬರ್ 18002082135 ಕ್ಕೆ ಕರೆ ಮಾಡಿದಾಗ ಅಪರಿಚಿತ  ವ್ಯಕ್ತಯೊಬ್ಬ ಕ್ರೆಡಿಟ್‍ ಕಾರ್ಡ್‍ ಆಕ್ಟಿವೇಶನ್‍ ಮಾಡಿಕೊಡುವುದಾಗಿ ಹೇಳಿ ಕಾರ್ಡ್ ನಂಬರ್ ಮತ್ತು ಒಟಿಪಿ ನಂಬರ್‍ ಪಡೆದು ₹. 39,200 ಹಣವನ್ನು ಬ್ಯಾಂಕ್‍ ಖಾತೆಯಿಂದ ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

          ದಿನಾಂಕ: 26-02-2021 ರಂದು ಮಡಿಕೇರಿ ತಾಲ್ಲೂಕು ಹುಲಿತಳ, ಹಾಕತ್ತೂರು ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-21-ಎಫ್‍-0052 ರ ಕೆ.ಎಸ್‍.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಯು-3357 ರ ಸ್ಕೂಟರ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಜಶ್ವಂತ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ತಂದೆ ಸುಬ್ಬಯ್ಯ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಆನೆ ತುಳಿದು ಯುವಕ ಸಾವು.

          ದಿನಾಂಕ: 25-02-2021 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಬೀಟಿಕಾಡು ಗ್ರಾಮದ ಬಿಬಿಟಿಸಿ ಕಾಫಿ ಎಸ್ಟೇಟ್‍ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಸಂದೀಪ್ ಎಂಬುವವರ ಮೇಲೆ ಕಾಡಾನೆ ದಾಳಿ ಮಾಡಿದ್ದರಿಂದ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ಶರಣ್‍ರಾಜ್‍ ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 27-02-2021 06:54 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080