Feedback / Suggestions

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 25-04-2022 ರಂದು ಕುಶಾಲನಗರ -ಮಡಿಕೇರಿ ಹೆದ್ದಾರಿ ರಸ್ತೆಯ ಆನೆಕಾಡು ಬಳಿ ಕೆಎ-12-ಯು-1628 ರ ಸ್ಕೂಟರನ್ನು ಸವಾರ ದರ್ಶನ್‌ ಎಂಬುವವರು ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತಿದ್ದ ಕೆಎ-12-ಎಂಎ-8444 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

            ದಿನಾಂಕ: 19-04-2022 ರಂದು ಕುಶಾಲನಗರ ತಾಲ್ಲೂಕು ಸುಂದರನಗರ ನಿವಾಸಿ ಸುರೇಶ ಎಂಬುವವರು ಮೃತಪಟ್ಟಿದ್ದು ಅವರ ಮೃತದೇಹಕ್ಕೆ ಸ್ನಾನ ಮಾಡಿಸುವ ಸಮಯದಲ್ಲಿ ಗಣೇಶ್‌ ಎಂಬುವವರು ಮೃತ ಶರೀರದ ಮೇಲೆ ಗಾಯಗದ ಗುರುತು ಇರುವುದನ್ನುಕಂಡು ಕೂಡಲೇ 112 ತುರ್ತು ಕರೆ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡದಾಗ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ದಿನಾಂಕ: 25-04-2022 ರಂದು ಮೃತ ಸುರೇಶ ರವರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕುತ್ತಿಗೆ ಹಿಸುಗುವಿಕೆಯಿಂದ ಉಸಿರುಗಟ್ಟಿ ಸಾವು ಸಂಭವಿಸಿರುವುದಾಗಿ ವೈದ್ಯ ರ ಅಭಿಪ್ರಾಯ ವರದಿಯ ಮೇರೆ ಪರಿಶೀಲಸಿದಾಗ ಮೃತ ಸುರೇಶ್‌ ರವರು ಕುಟುಂಬಕ್ಕೆ ಸಂಬಂದಿಸಿದ ಸೈಟುಗಳನ್ನು ಮನೆಯಲ್ಲಿ ಅನುಮತಿ ಪಡೆಯದೇ ಮಾರಾಟ ಮಾಡಿ ಬಂದ ಹಣವನ್ನು ಯಾರಿಗೂ ಕೊಡದೇ ಮದ್ಯಪಾನ ಮಾಡಿ ವ್ಯರ್ಥ ಮಾಡುತ್ತಿದ್ದುದರಿಂದ ಮನೆಯಲ್ಲಿ ಅತನ ತಂಗಿ ಭವ್ಯ ಎಂಬುವವರೊಂದಿಗೆ ಆಗಿಂದಾಗ್ಗೆ ಜಗಳವಾಗುತ್ತಿದ್ದರಿಂದ ಆತನ ತಂಗಿ ಈ ಕೃತ್ಯ ಮಾಡಿರಬಹುದೆಂಬ ಸಂಶಯದಿಂದ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 26-04-2022 05:24 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080