Feedback / Suggestions

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ: 25-04-2021 ರಂದು ಮಡಿಕೇರಿ ನಗರಸಭೆ ಪೌರಾಯುಕ್ತರು, ನಗರ ಸಭೆ ಅರೋಗ್ಯ ನಿರೀಕ್ಷಕರೊಂದಿಗೆ  ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ಪಟೇಲ್ಸ್ ರಿಯಾಲಿಟಿ ವೆಂಚರ್ಸ್ ಸಂಸ್ಥೆಯ ವ್ಯವಸ್ಥಾಪಕ ಗೋಪಾಲ ಗಿರಿಯಪ್ಪ ಮತ್ತು ನಂಜುಂಡ ಎಂಬುವವರು ಜೆಸಿಬಿ  ಯಂತ್ರದ ಮುಖಾಂತರ ಕೋವಿಡ್‍ ನಿಯಮ ಉಲ್ಲಂಘಿಸಿ ಸಂಸ್ಥೆಯ ಜಾಗದಲ್ಲಿ ಕಾಮಗಾರಿ ನಿವರ್ಹಿಸುತ್ತಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ: 21-04-2021 ರಂದು ನಂಜರಾಯಪ್ಟಣ ಸಿ.ಆರ್‍.ಸಿ ಅಧಿಕಾರಿಯವರು ಕಂದಾಯ ಇಲಾಖೆ ಅಧಿಕಾರಿಯವರೊಂದಿಗೆ ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ಕೆದಕಲ್‍ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಬಳಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ 70 ರಿಂದ 100 ಜನರು ಪಾಲ್ಗೊಂಡಿದ್ದು,  ಮಾರ್ಗಸೂಚಿ ಉಲ್ಲಂಘಿಸಿ ನಿಗದಿಗಿಂತ ಹೆಚ್ಚಿನ ಜನರನ್ನು ಸೇರಿಸಿದ್ದ ಬಗ್ಗೆ ದಿನಾಂಕ: 25-01-2021 ರಂದು ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 25-04-2021 ರಂದು ವಿರಾಜಪೇಟೆ ನಗರ ಠಾಣೆ ಪಿಎಸ್‍ಐ ಬೋಜಪ್ಪ ರವರು ಸಿಬ್ಬಂದಿಯವರೊಂದಿಗೆ ನಗರ ಗಸ್ತುಕರ್ತವ್ಯ ಮಾಡುವಾಗ ತೋರ ಗ್ರಾಮದ ಕುಪ್ಪೆಮೊಟ್ಟೆ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಕೋವಿಡ್‍-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರ ಮಾರ್ಗಸೂಚಿ ನೀಡಿದ್ದರೂ ಸಹಾ ನಿಯಮ ಉಲ್ಲಂಘಿಸಿ ನಿರ್ಲಕ್ಷತೆಯಿಂದ ಸುಮಾರು 30 ಜನರು ಸೇರಿಕೊಂಡು ಪೂಜೆ ನಡಡೆಸುತ್ತಿದ್ದುದು ಕಂಡುಬಂದಿದ್ದು ಈ ಬಗ್ಗೆ ನೀಡಿದ ವರದಿ ಮೇರೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 25-04-2021 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆ ಎಎಸ್‍ಐ ಶ್ರೀಧರ್‍ ರವರು ಸಿಬ್ಬಂದಿಯವರೊಂದಿಗೆ ಗಸ್ತುಕರ್ತವ್ಯ ಮಾಡುವಾಗ ಹೆಗ್ಗಳ ಗ್ರಾಮದ ಮಾಯಿಲಾ ಮಕ್ಕಿ ಕಾಲೋನಿಯಲ್ಲಿ ರಶೀದ್‍ ಎಂಬುವವರು ಕಾರು ಮತ್ತು ಸ್ಕೂಟರ್‍ ಗಳಲ್ಲಿ ಸಾರ್ಜನಿಕರನ್ನು ಕರೆದುಕೊಂಡು ಹೋಗಿ ಮನೆಯ ಅಂಗಳದಲ್ಲಿ ಸೇರಿಕೊಂಡು ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ಮೋಜು ಮಸ್ತಿ ಮಾಡಿಕೊಂಡಿರುವುದು ಕಂಡು ಬಂದಿದ್ದು, ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಬಗ್ಗ ನೀಡಿದ ವರದಿ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 26-04-2021 01:26 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080