ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 24-01-2022 ರಂದು ಕುಶಾಲನಗರ ತಾಲ್ಲೂಕು ಕೊಡಗರಹಳ್ಳಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-13-ಪಿ-7844 ರ ಕಾರನ್ನು ಅದರ ಚಾಲಕಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಮೋರಿಗೆ ಡಿಕ್ಕಿಪಡಿಸಿ ನಂತರ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಪಿ-3589 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಚಾಲಕಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 24-01-2022 ರಂದು ಸೋಮವಾರಪೇಟೆ ತಾಲ್ಲೂಕು ದೊಡ್ಡ ಅಬ್ಬೂರು ಗ್ರಾಮದ ನಿವಾಸಿ  ಮಹಿಳೆಯೊಬ್ಬರು ಅವರ ಮನೆಯ ಹೊರಭಾಗದಲ್ಲಿ ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪಿಎಸ್‌ಐ ವಿರೂಪಾಕ್ಷ ಮತ್ತು ಸಿಬ್ಬಂದಿಯವರು  ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 24-01-2022 ರಂದು ಮಡಿಕೇರಿ ತಾಲ್ಲೂಕು ಮುಕ್ಕೋಡ್ಲು ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಎಂ-6207 ರ ಕಾರನ್ನು ಅದರ ಚಾಲಕ ವಿಶು ಪೆಮ್ಮಯ್ಯ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಕೆ-6825 ರ ಮೋಟರ್‍ ಸೈಕಲ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

          ದಿನಾಂಕ: 24-01-2022 ರಂದು ಕುಶಾಲನಗರ ತಾಲ್ಲೂಕು ಅಭ್ಯತ್‍ ಮಂಗಲ ಜ್ಯೋತಿನಗರದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-12-6572 ರ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-19-ಇಬಿ-2420 ರ ಬೈಕ್‍ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಸುನಿಲ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

          ದಿನಾಂಕ: 15-01-2022 ರಿಂದ 24-01-2022 ರ ನಡುವಿನ ದಿನಗಳಲ್ಲಿ ವಿರಾಜಪೇಟೆ ಪಟ್ಟಣದ ಸುಣ್ಣದ ಬೀದಿ ಎಫ್‍.ಎಂ.ಸಿ ರಸ್ತೆಯ ಹಳೆಯ ಮನೆಯ ಶೆಡ್‍ ನಲ್ಲಿ ಅಕಲಾಕ್‍ ಅಹಮ್ಮದ್ ಎಂಬುವವರು ಇಟ್ಟಿದ್ದ ಮರದ ಮಿಲ್‍ಗೆ ಸಂಬಂದಿಸಿದ ಒಟ್ಟು ₹. 2,50,000 ಮೌಲ್ಯದ ವಿದ್ಯುತ್‍ ಮೋಟಾರ್‍ ಹಾಗೂ ಇತರ ಕಬ್ಬಿಣದ ಉಪಕರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆಯ ನಿವಾಸಿಗಳಾದ ಶಹಬಾಜ್‍ ಮತ್ತು ಜುನೈದ್‍ ಎಂಬುವವರ ಮೇಲೆ ‍ಗುಮಾನಿ ಇರುವ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 25-01-2022 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080