ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 20-04-2021 ರಂದು ಮಡಿಕೇರಿ ತಾಲ್ಲೂಕು ಕೋಪಟ್ಟಿ ಗ್ರಾಮದ  ನಿವಾಸಿ  ಡಲೇಶ್‍ ಕುಮಾರ್ ಎಂಬುವವರು  ಗ್ರಾಮದ ಬಸ್‍ ತಂಘುದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಭಾಗಮಂಡಲ ಠಾಣೆ ಪಿಎಸ್‍ಐ ಹೆಚ್‍.ಕೆ ಮಹದೇವ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 23-04-2021 ರಂದು ಮಡಿಕೇರಿ ತಾಲ್ಲೂಕು ನಾಪೋಕ್ಲು ಗ್ರಾಮದಲ್ಲಿ ವಿ.ಟಿ.ಸಿ ಸೂಪರ್‍ ಮಾರ್ಕೆಟ್ ‍ದಿನಸಿ ಅಂಗಡಿಯಲ್ಲಿ ವ್ಯವಸ್ಥಾಪಕರಾದ ರಹೀಂ ಎಂಬುವವರು ಕೋವಿಡ್‍  ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಸಹಾ  ಸರ್ಕಾರದ ಮಾರ್ಗಸೂಚಿ ಪಾಲಿಸದೆ ಸಾರ್ವಜನಿಕರು ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿರುವುದು ಕಂಡು ಬಂದ ಮೇರೆ ಕಾನೂನು ಕ್ರಮ ಜರುಗಿಸಲು ನಾಪೋಕ್ಲು ಪಂಚಾಯಿತಿ ಅಧಿಕಾರಿ ನೀಡಿದ ದೂರಿನ  ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 23-04-2021 ರಂದು ಮಡಿಕೇರಿ ನಗರಸಭೆ ಎಇಇ(ಪರಿಸರ) ರವರು ನಗರ ಸಭೆ ಅರೋಗ್ಯ ನಿರೀಕ್ಷಕರೊಂದಿಗೆ  ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನುಸಾರ ನಿಷೇಧಿಸಲ್ಪಟ್ಟ ವ್ಯಾಪಾರ ವಹಿವಾಟುಗಳ  ಬಗ್ಗೆ ಪರಿಶೀಲನೆ ಮಾಡುತ್ತಿರುವಾಗ ಈ ಕೆಳಕಂಡ ಮಳಿಗೆಗಳ ಮಾಲೀಕರು

1). ಪಿ.ಕೆ ಶ್ರೀನಿವಾಸ್‍ , ಪ್ಯಾಲೇಸ್‍ ಟೊಯೋಟಾ ಶೋ ರೂಂ, ಮಾರ್ಕೆಟ್‍ ರಸ್ತೆ, ಮಡಿಕೇರಿ.

2). ಕಾಂತರಾಜು ,ಅರಸ್‍ ಕಾರ್‍ ಟಾಟಾ ಮೋಟಾರ್ಸ್ , ರೇಸ್‍ಕೋರ್ಸ್‍ ರಸ್ತೆ, ಮಡಿಕೇರಿ.  

3) ಕೂರ್ಗ್ ಆಪ್ಟಿಕಲ್ಸ್  , ಕಾಲೇಜು ರಸ್ತೆ, ಮಡಿಕೇರಿ.

4) ರಕ್ಷಿತ್‍, ಕೂರ್ಗ್ ಸರ್ವಿಸ್‍ ಸ್ಟೇಷನ್‍, ರೇಸ್‍ ಕೋರ್ಸ್ ರಸ್ತೆ, ಮಡಿಕೇರಿ.

5). ಪವನ್, ಶ‍್ರೀ ಇಗ್ಗುತಪ್ಪ ಎಂಟರ್ ಪ್ರೈಸಸ್, ಕೊಹಿನೂರ್‍ ರಸ್ತೆ, ಮಡಿಕೇರಿ.

6) ಶಂಕರ್‍ ಭಟ್‍, ಕೂರ್ಗ್ ಫ್ಯಾನ್ಸಿ ಸ್ಟೋರ‍, ಕೆ.ಎಸ್.ಆರ್,ಟಿಸಿ ಬಸ್ ನಿಲ್ದಾಣದ ಬಳಿ, ಮಡಿಕೇರಿ.

7) ಇಸಾಕ್‍ ಅಹಮದ್, ಬಿ.ಎಸ್‍ ಸ್ಪೈಸಸ್, ರೇಸ್‍ ಕೋರ್ಸ್ ರಸ್ತೆ, ಮಡಿಕೇರಿ.

8) ಅನಿಲ್‍, ಬೀ ಲೈನ್‍ ಮೊಬೈಲ್ ಶಾಪ್, ಕೈಗಾರಿಕಾ ಪ್ರದೇಶ, ಮಡಿಕೇರಿ.

ಎಂಬುವವರು ಮಳಿಗೆಯನ್ನು ತೆರೆದು ವಹಿವಾಟು ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ಈ ಬಗ್ಗೆ ನಗರ ಸಭೆ ಅಧಿಕಾರಿಗಳು ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 23-04-2021 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು 7ನೇ ಹೊಸಕೋಟೆ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎನ್-1934 ರ ಮಾರುತಿ 800 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-36-ಎ-7132 ರ ಗೂಡ್ಸ್ ವಾಹನ ಮತ್ತು ಕೆಎ-03-ಎನ್-4672 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಗೂಡ್ಸ್‍ ವಾಹನ ಮಗುಚಿ ಬಿದ್ದು ರಿಯಾಜ್ ಅಹಮದ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 23-04-2021 ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನುಸಾರ ನಿಷೇಧಿಸಲ್ಪಟ್ಟ ವ್ಯಾಪಾರ ವಹಿವಾಟುಗಳ  ಬಗ್ಗೆ ಪರಿಶೀಲನೆ ಮಾಡುತ್ತಿರುವಾಗ ಹರಿಶ್ಚಂದ್ರಪುರದಲ್ಲಿರುವ ಹೈಟೆಕ್‍ ಫರ್ನೀಚರ್‍ ಮಳಿಗೆಯ ವ್ಯವಸ್ಥಾಪಕರಾದ ಸಮ್ಮದ್ ಎಂಬುವವರು ಮಳಿಗೆಯನ್ನು ತೆರೆದು ವಹಿವಾಟು ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 24-04-2021 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080