ಅಭಿಪ್ರಾಯ / ಸಲಹೆಗಳು

ವಿದ್ಯುತ್ ಸ್ಪರ್ಷಗೊಂಡು ಮಹಿಳೆಗೆ ಗಾಯ.

          ದಿನಾಂಕ: 22-02-2021 ರಂದು ವಿರಾಜಪೇಟೆ ತಾಲ್ಲೂಕು ಹೈಸೊಡ್ಲೂರು ಗ್ರಾಮದ ಕುಪ್ಪಂಡ ಮುದ್ದಯ್ಯ ಎಂಬುವವರ ತೋಟದಲ್ಲಿ ಕಾಫಿ ಕುಯ್ಯುತ್ತಿದ್ದ ಅಸ್ಸಾಂ ಮೂಲದ ಮಹಿಳೆಯೊಬ್ಬರಿಗೆ ತೋಟದೊಳಗೆ ಹಾದು ಹೋಗಿದ್ದ ವಿದ್ಯುತ್‍ ಕಂಬದಿಂದ ವಿದ್ಯುತ್‍ ಸ್ಪರ್ಷಗೊಂಡು ಮಹಿಳೆ ಗಾಯಗೊಂಡಿರುತ್ತಾರೆ. ತೋಟದೊಳಗೆ ಅಳವಡಿಸಲಾಗಿದ್ದ ಹೊಸ ವಿದ್ಯುತ್ ಕಂಬದಿಂದ ಮುರಿದ ಹಳೆಯ ಕಂಬಕ್ಕೆ ವಿದ್ಯುತ್‍ ಹರಿದಿದ್ದರಿಂದ ಮಹಿಳೆ ವಿದ್ಯುತ್‍ ಸ್ಪರ್ಷಗೊಂಡು ಗಾಯಗೊಂಡಿದ್ದು ವಿದ್ಯುತ್‍ ಸರಬರಾಜು ಇಲಾಖೆಯ ನಿರ್ಲಕ್ಷತೆಯ ಬಗ್ಗೆ ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

          ದಿನಾಂಕ: 21-02-2021 ರಿಂದು ಕುಶಾಲನಗರ ಪಟ್ಟಣದ ಆದರ್ಶ ದ್ರಾವಿಡ ಕಾಲೋನಿ ನಿವಾಸಿ ಕಿರಣ್‍ ಎಂಬುವವರು ಕುಟುಂಬದವರೊಂದಿಗೆ ಮನೆಗೆ ಬೀಗ ಹಾಕಿಕೊಂಡು ಧರ್ಮಸ್ಥಳಕ್ಕೆ ಹೋಗಿ ವಾಪಾಸ್ಸು ದಿನಾಂಕ: 22-02-2021 ರಂದು ಸಂಜೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿ ಗಾಡ್ರೆಜ್‍ ನಲ್ಲಿಟ್ಟಿದ್ದ ಚಿನ್ನಾಭರಣ, ನಗದು, ಲ್ಯಾಪ್‍ಟಾಪ್ ಸೇರಿದಂತೆ ಒಟ್ಟು ₹. 1,70,000  ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 24-02-2021 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ