ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಪ್ರಕರಣ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯಲ್ಲಿ ಹೆಚ್.ಜಿ.ಮೋಹನ್ ಎಂಬುವವರು ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

            ದಿನಾಂಕ:22/09/2021 ರಂದು ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯ ನಿವಾಸಿಯಾದ ಮೋಹನ್ ಎಂಬುವವರು ತನ್ನ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದಾಗಿ  ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿ, ಆರೋಪಿ ಮೋಹನ್.ಹೆಚ್.ಜಿ ತಂದೆ:ಪೌತಿ ಗಣೇಶ ಪ್ರಾಯ 32 ವರ್ಷ, ಕೂಲಿ ಕೆಲಸ,ದೇವ ಕಾಲೋನಿ, ಹುದೂರು ಹಳ್ಳಿಗಟ್ಟು ಗ್ರಾಮ, ಪೊನ್ನಂಪೇಟೆ ತಾಲ್ಲೂಕು. ರವರು ತನ್ನ ಮನೆಯ ಆವರಣದಲ್ಲಿ ಬೆಳೆದಿದ್ದ ರೂ.50,000/- ಮೌಲ್ಯದ ಒಟ್ಟು 2 ಕೆ.ಜಿ 444 ಗ್ರಾಂ ತೂಕದ 9 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸ ಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

            ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್, ಪೊನ್ನಂಪೇಟೆ ಠಾಣಾ ಪಿಎಸ್ಐ  ಡಿ.ಕುಮಾರ್ ಹಾಗೂ ಸಿಬ್ಬಂದಿಯವರಾದ ಎಂ.ಡಿ.ಮನು, ಪಿ.ಎ.ಮಹಮದ್ ಅಲಿ, ಕೆ.ಎಸ್.ಮಹೇಂದ್ರ, ಅಬ್ದುಲ್ ಮಜೀದ್, ಮಹದೇಶ್ವರ ಸ್ವಾಮಿ, ಹೇಮಲತಾ ರೈ ,ಅಬ್ದುಲ್ ಬಷೀರ್ ರವರು ಭಾಗವಹಸಿದ್ದರು.

ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಅ ಕ್ರಮವಾಗಿ ಗಾಂಜಾ ಬೆಳೆಯುವಿಕೆ ಮತ್ತು ಮಾರಾಟ,  ಮಾದಕ ವಸ್ತುಗಳ ಸಾಗಣಿಕೆ ಮತ್ತು ಮಾರಾಟದ  ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್‍ ಕಂಟ್ರೋಲ್‍ ರೂಂ ನಂಬರ್‍ 100 ಅಥವಾ 112 (ERSS) ಸಂಖ್ಯೆಗೆ ದೂರವಾಣಿ ಕರೆ ಮಾಡಿ ಗುಪ್ತವಾಗಿ ಮಾಹಿತಿಯನ್ನು ನೀಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸುವಂತೆ ಕೋರಲಾಗಿದೆ. (ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು)

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 22-09-2021 ರಂದು ರಾತ್ರಿ ಮಡಿಕೇರಿ ನಗರದ ಬಸ್‌ ಡಿಪೋ ಬಳಿ ಯಾವುದೋ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸೆ ಬದಿಯಲ್ಲಿದ್ದ ಅಶ್ವತ್‌ ನಾರಾಯಣ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಿದ್ದು ಗಾಯಗೊಂಡಿದ್ದು, ಡಿಕ್ಕಿಪಡಿಸಿದ ನಂತರ ಸವಾರ ವಾಹನವನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಸ್ಕೂಟರ್‌ಗೆ ಟ್ರಾಕ್ಟರ್‌ ಡಿಕ್ಕಿ, ಮಹಿಳೆ ಸಾವು.

            ದಿನಾಂಕ: 22-09-2021 ರಂದು ಕುಶಾಲನಗರದ ಮಾದಾಪಟ್ಟಣದ ಬಳಿ ಹೆದ್ದಾರಿ ರಸ್ತೆಯಲ್ಲಿ ಒಂದು ಟ್ರಾಕ್ಟರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಕೆಎ-12-ಎಲ್-4309‌ ರ ಸ್ಕೂಟರ್‌ ಗೆ  ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ ಸವಾರ ಗಾಯಗೊಂಡು ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಬೈಕ್‌ ಕಳವು ಪ್ರಕರಣ

            ದಿನಾಂಕ: 22-09-2021 ರಂದು ವಿರಾಜಪೇಟೆ ತಾಲ್ಲೂಕು ಗುಹ್ಯ ಗ್ರಾಮದ ನಿವಾಸಿ ರಂಜಿತ್‌ ಮತ್ತು ಸಿದ್ದಾಪುರ ಹೈಸ್ಕೂಲ್‌ ಪೈಸಾರಿ ನಿವಾಸಿ ಶರಣು ಎಂಬುವವರು ನೆಲ್ಯಹುದಿಕೇರಿ ಗ್ರಾಮದಿಂದ ಒಂದು ಬೈಕನ್ನು ಕಳವು ಮಾಡಿಕೊಂಡು ಅದರ ನಂಬರ್‌ ಪ್ಲೇಟ್‌ ತೆಗೆದು ಮಾರಾಟ ಮಾಡಲು ಹೋಗುತ್ತಿರುವಾಗ ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್‌ಐ ಸಿದ್ದಲಿಂಗ ಬಾನಸೆ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳನ್ನು ಹಾಗೂ ಕಳವು ಮಾಡಿದ್ದ ಬೈಕನ್ನು ವಶಕ್ಕೆ ಪಡೆದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 ಆಸ್ತಿ ಮಾರಾಟದಲ್ಲಿ ವಂಚನೆ ಪ್ರಕರಣ

            ಮಡಿಕೇರಿ ತಾಲ್ಲೂಕು ಹೊದವಾಡ ಗ್ರಾಮದ ನಿವಾಸಿ ವೆಂಕಟೇಶ್‌ ಎಂಬುವವರಿಗೆ ಮಡಿಕೇರಿ ನಿವಾಸಿಗಳಾದ ಬಿ.,ಟಿ ನಂಜಪ್ಪ ಮತ್ತು ಅವರ ಮಗ ತಿಮ್ಮಯ್ಯ ಎಂಬುವವರು ಹೊದವಾಡ ಗ್ರಾಮದಲ್ಲಿರುವ ಕಾಫಿ ತೋಟವನ್ನು ಮಾರಾಟ ಮಾಡುವುದಾಗಿ ನಂಬಿಸಿ ₹.75 ಲಕ್ಷ ಹಣವನ್ನು ಮುಂಗಡವಾಗಿ ಪಡೆದು ಅಗ್ರಿಮೆಂಟ್‌ ಮಾಡಿಕೊಟ್ಟು ನಂತರ ಜಮೀನು ರಿಜಿಸ್ಟರ್‌ ಮಾಡಿಕೊಡದೇ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 22-09-2021 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

 

ಇತ್ತೀಚಿನ ನವೀಕರಣ​ : 23-09-2021 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080