ಅಭಿಪ್ರಾಯ / ಸಲಹೆಗಳು

ಆನ್‍ ಲೈನ್‍ ವಂಚನೆ ಪ್ರಕರಣ

                ಮಡಿಕೇರಿ ತಾಲ್ಲೂಕು ಚೇಲಾವರ ಗ್ರಾಮದ ನಿವಾಸಿ ಮಹಿಳೆ ಯೊಬ್ಬರಿಗೆ ಶಾಪ್‍ ಕ್ಲ್ಯೂಸ್‍ ಎಂಬ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಆಶಿಶ್‍ ಕುಮಾರ್‍ ಮತ್ತು ಅನುರಾಗ್‍ ಲಾಲ್‍ ಎಂಬುವವರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಗಿಫ್ಟ್‍ ಪಡೆದುಕೊಳ್ಳುವಂತೆ ಹೇಳಿದ್ದನ್ನು ನಂಬಿ ಬ್ಯಾಂಕ್‍ ಖಾತೆಯಿಂದ ₹. 3,47,200 ಹಣವನ್ನು ಜಮಾ ಮಾಡಿಸಿಕೊಂಡು ಯಾವುದೇ ಗಿಫ್ಟ್‍ ನೀಡದೇ ಮೊಸ ಮಾಡಿದ್ದು ಈ ಬಗ್ಗೆ ದಿನಾಂಕ:  22-04-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣಗಳು.  

              ದಿನಾಂಕ: 20-04-2021 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನರ ಪಟ್ಟಣದಲ್ಲಿ ಪಂಚಾಯತಿ ಮುಖ್ಯಾಧಿಕಾರಿಯವರು ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ಈ ಕೆಳಕಂಡ ವರ್ತಕರು ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಕಂಡು ಬಂದ ಮೇರೆ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಮೇರೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  1. ಶಶಾಂಕ್, ಮಂಜು ಎಲೆಕ್ಟ್ರಿಕಲ್ಸ್, ರಥಬೀದಿ, ಕುಶಾಲನಗರ. 2. ಮಲ್ಲೇಶ್‍, ಮೋರ್‍ ಸೂಪರ್‍ ಮಾರ್ಕೆಟ್‍, ಕುಶಾಲನಗರ. 3. ಮಹೇಂದ್ರ, ವಿಷ್ಣುಟೆಕ್ಸ್‍ ಟೈಲ್ಸ್, ಕುಶಾಲನಗರ. 4. ಮಯೂರ್‍ ಜ್ಯುವೆಲರ್ಸ್, ರಥಬೀದಿ, ಕುಶಾಲನಗರ. 5. ಮುಸ್ತಾಫ, ಔಟ್‍ ಲುಕ್‍ ಫುಟ್‍ವೇರ್, ರಥಬೀದಿ ಕುಶಾಲನಗರ. 6. ತೇಜಸ್‍, ಮೈಲಾರ್‍ ಶಾಪ್‍, ಕುಶಾಲನಗರ. 7. ಪತಂಜಲಿ ಸ್ಟೋರ್‍, ಕುಶಾಲನಗರ. 8. ಮುಖೇಶ್‍, ಶ್ರೀನಾಥ್‍ ಜ್ಯವೆಲರ್ಸ್‍, ಕುಶಾಲನಗರ. 9. ವಿಮಲ್‍ ವಿನಾಯಕ ಜ್ಯುವೆಲರ್ಸ್ ಕುಶಾಲನಗರ. 10. ಸನಾವುಲ್ಲಾ, ಫುಟ್‍ ವೇರ್‍ ಶಾಪ್‍, ಕುಶಾಲನಗರ. 11. ವೆಂಕಟೇಶ್‍, ಕಾವೇರಿ ಟಿಫಾನಿಸ್‍, ಕುಶಾಲನಗರ. 12. ಶ‍್ರೀನಿವಾಸ, ಾದಿ ಬಾರ್‍ ಮತ್ತು ರೆಸ್ಟೋರೆಂಟ್‍, ಮಾರ್ಕೆಟ್‍ ರಸ್ತೆ, ಕುಶಾಲನಗರ.

 ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ 21-04-2021 ರಂದು ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯ ನಿವಾಸಿಯೊಬ್ಬರು ಕೋವಿಡ್‍-19 ಸೋಂಕಿನಿಂದ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ಮೃತ ಶರೀರವನ್ನು ನೇರವಾಗಿ ರುದ್ರಭೂಮಿಗೆ ತೆಗೆದುಕೊಂಡು ಹೋಗದೇ ಮೃತರ ಸ್ವಗೃಹಕ್ಕೆ ತೆಗೆದುಕೊಂಡು ಹೋಗಿ ಕೋವಿಡ್‍ -19 ನಿಯಮ ಉಲ್ಲಂಘಿಸಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಈ ವಿದ್ಯಮಾನವನ್ನು ವಿಡಿಯೋ ಚಿತ್ರೀಕರಿಸಿ ಕುಶಾಲನಗರ ಪಟ್ಟಣ ಪಂಚಾಯತ್‍ ಮುಖ್ಯಾಧಿಕಾರಿಯವರ ಕಛೇರಿಗೆ ಕಳುಹಿಸಿದ್ದು. ಈ ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಂಚಾಯತ್‍ ಮುಖ್ಯಾಧಿಕಾರಿಯವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 22-04-2021 ರಂದು ಸೋಮವಾರಪೇಟೆ ಪಟ್ಟಣದ ಪಂಚಾಯತಿ ಮುಖ್ಯಾಧಿಕಾರಿ ಯವರು ಕಚೇರಿ ಸಿಬ್ಬಂದಿಯುವರೊಂದಿಗೆ ಹಾಗೂ ಪೊಲೀಸ್‍ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ಮಲಬಾರ್‍ ಹೊಟೇಲ್‍ ನಲ್ಲಿ ಮಾಲೀಕರಾದ ವಿಜೇಶ್‍  ಮತ್ತು ಮರಿಶ್‍ ಹೊಟೇಲ್‍ ಮಾಲೀಕರಾದ ತೀರ್ಥ ಎಂಬುವವರು ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರು ಸಾಮಾಜಿಕ ಅಂತರ  ಕಾಪಾಡದೆ, ಮಾಸ್ಕ್‍ ಧರಿಸದೇ  ಹೊಟೇಲ್‍ ನಲ್ಲಿ ಆಹಾರ ಸೇವನೆಗೆ ಅವಕಾಶ ಮಾಡಿದ್ದು ಈ ಬಗ್ಗೆ ಹೊಟೇಲ್‍ ಮಾಲೀಕ ರವರ ವಿರುದ್ದ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 22-04-2021 ರಂದು ಸೋಮವಾರಪೇಟೆ ತಾಲ್ಲೂಕು ಶಿರಂಗ‍ಳ್ಳಿ ನಿವಾಸಿ ಸುಬ್ರಮಣಿ ಎಂಬುವವರು ಗರ್ವಾಲೆ ಗ್ರಾಮಕ್ಕೆ ಮದುವೆ ಸಮಾರಂಭ ಮುಗಿಸಿ ವಾಪಾಸ್ಸು ಬರುತ್ತಿರುವಾಗ ಶಿರಂಗಳ್ಳಿ ಗ್ರಾಮದ ನಿವಾಸಿಗಳಾದ ಅಪ್ಪಯ್ಯ, ನಾಣಿಯಪ್ಪ, ಬೆಳ್ಳಿಯಪ್ಪ ಎಂಬುವವರು ಜಾಗದ ವಿಚಾರದಲ್ಲಿ ವೈಷಮ್ಯದಿಂದ ದಾರಿ ತಡೆದು ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ  ಬಗ್ಗೆ ನೀಡಿದ ಪುಕಾರಿನ  ಮೇರೆ ಸೋಮವಾಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 23-04-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080