ಅಭಿಪ್ರಾಯ / ಸಲಹೆಗಳು

ಫೇಸ್‌ ಬುಕ್‌ ಸ್ನೇಹಿತನಿಂದ ಕಿರುಕುಳ ಪ್ರಕರಣ.

          ಮಡಿಕೇರಿ ತಾಲ್ಲೂಕು ಕೋಪಟ್ಟಿ ಗ್ರಾಮದ ಮಹಿಳೆಯೊಂದಿಗೆ ಫೇಸ್‌ ಬುಕ್‌ ಮುಖಾಂತರ ಹರ್ಷದ್‌ ಎಂಬ ವ್ಯಕ್ತಿ ಪರಿಚಯವಾಗಿದ್ದನು. ಆತನ ಮೋಬೈಲ್‌ ನಿಂದ ಮಹಿಳೆಯ ಮೊಬೈಲ್‌ ಗೆ ಅಶ್ಲೀಲ ವೀಡಿಯೋಗಳು, ಸಂದೇಶಗಳನ್ನು ಕಳುಹಿಸುವುದು ಹಾಗೂ ಇತರ ಗೆಳತಿಯರ ಫೋನ್‌ ನಂಬರ್‌ ನೀಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದುದು ಅಲ್ಲದೆ ಅನೈತಿಕ ಸಂಬಂದಕ್ಕೆ ಒತ್ತಾಯ ಮಾಡುತ್ತಿದ್ದು ಈ ಬಗ್ಗೆ ದಿನಾಂಕ 21-06-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‌ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

            ಫೇಸ್‌ ಬುಕ್‌ , ವಾಟ್ಸಪ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಂಚಕರು ನಕಲಿ ಖಾತೆಗಳನ್ನು ತೆರೆದು ನಕಲಿ ಫೋಟೊ ಉಪಯೋಗಿಸಿಕೊಂಡು ಸಾರ್ಜನಿಕರನ್ನು ಮರುಳು ಮಾಡಿ ಸ್ನೇಹಿತರನ್ನಾಗಿ ಮಾಡಿಕೊಂಡು ಆರ್ಥಿಕ ವಂಚನೆ ಹಾಗೂ ಇತರ ರೀತಿಯ ವಂಚನೆಗಳನ್ನು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಯಾವನೇ ವ್ಯಕ್ತಿ ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್‌ ಮಾದ್ಯಮ ಉಪಯೋಗಿಸಿ ಆನ್‌ಲೈನ್‌ ಮೂಲಕ ವಂಚನೆಗಳನ್ನು ಮಾಡುವುದು ಕಾನೂನು ರೀತಿ ಘೋರ ಅಪರಾಧ ವಾಗಿರುತ್ತದೆ. ಸಾರ್ಜನಿಕರು ಇಂತಹ ಸೈಬರ್‌ ಅಪರಾಧಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು, ಮುಖ್ಯವಾಗಿ ಯುವಕ ಯುವತಿಯರು ಫೇಸ್‌ ಬುಕ್‌ , ವಾಟ್ಸಪ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಗುರುತು, ಪರಿಚಯವಿರದ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ವಂಚಕರ ಬಣ್ಣದ ಮಾತುಗಳ ಉತ್ಪ್ರೇಕ್ಷೆಗಳಿಗೆ ಮರುಳಾಗಿ ಯಾವುದೇ ರೀತಿಯಿಂದಲೂ ರೀತಿಯ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಲು ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳನ್ನು ಕಾಲಹರಣಕ್ಕಾಗಿ, ಮೋಜಿಗಾಗಿ ಉಪಯೋಗಿಸದೆ ತಮ್ಮ ವಿದ್ಯಾಭ್ಯಾಸ, ಜ್ಞಾನ, ಕೌಶಲ್ಯ ಅಭಿವೃದ್ದಿಗೆ ಪೂರಕವಾಗುವಂತೆ ಮಾತ್ರ ಉಪಯೋಗಿಸಲು ಸಲಹೆ ನೀಡಲಾಗಿದೆ.

 ಹಲ್ಲೆ ಪ್ರಕರಣ

            ದಿನಾಂಕ: 21-06-2021 ರಂದು ಸೋಮವಾರಪೇಟೆ ತಾಲ್ಲೂಕು ನಂದಿಗುಂದ ಗ್ರಾಮದ ನಿವಾಸಿ ರಾಜಪ್ಪ ಎಂಬುವವರು ಗೌಡಳ್ಳಿ ಗ್ರಾಮಕ್ಕೆ ಹೋಗಿ ವಾಪಾಸ್ಸು ಅವರ ಕಾರಿನಲ್ಲಿ ಹೋಗುತ್ತಿರುವಾಗ ಗೌಡಳ್ಳಿ ಗ್ರಾಮದ ನಿವಾಸಿ ಮಿತುನ್‌ ಎಂಬುವವರು ಕಾರನ್ನು ತಡೆದು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ನೋವುಪಡಿಸಿ ಕಾರಿನ ಗಾಜನ್ನು ಒಡೆದು ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 21-06-2021 ರಂದು ಸೋಮವಾರಪೇಟೆ ತಾಲ್ಲೂಕು ಹಾರೆಹೊಸೂರು ಗ್ರಾಮದ ಅಶೋಕ್‌ ಎಂಬುವವರು ಕಾಫಿ ತೋಟದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಶನಿವಾರಂತೆ ಠಾಣೆ ಪಿಐ ಪರಶಿವಮೂರ್ತಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ದಯಾನಂದ, ಬಸಪ್ಪ, ಸೋಮಶೇಖರ್‌, ರಾಕೇಶ್‌, ಸುರೇಶ್‌, ರಾಜು, ಅಶೋಕ, ದಿಲೀಪ. ಸಂತೋಷ್‌, ಯುವರಾಜ, ಶರತ್‌, ನಿಶ್ಚಿತ್‌, ಜಯಂತ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್‌ ಹಾಳೆ, ₹. 6220 ನಗದು, ಇತರ ವಸ್ತುಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 21-06-2021 ರಂದು ಸೋಮವಾರಪೇಟೆ ತಾಲ್ಲೂಕು ಕಂಬಿಬಾಣೆ  ಗ್ರಾಮದ ನಿವಾಸಿ  ಮೋಹನ್  ಎಂಬುವವರು ಅವರ ಅಂಗಡಿಯಲ್ಲಿ  ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 21-06-2021 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ ನಿವಾಸಿ ಪೂರ್ಣೇಶ್ ಮತ್ತು  ಪಕ್ಕದ ಮನೆಯ ನಿವಾಸಿಗಳಾದ ನವೀನ್‌, ಪದ್ಮನಾಭ್‌ ಮತ್ತು ಗಗನ್‌ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹಲ್ಲೆ ಮಾಡಿಕೊಂಡು ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 20-06-2021 ರಂದು ವಿರಾಜಪೇಟೆ ಶಿವಕೇರಿ ನಿವಾಸಿ ರಾಜು ಎಂಬುವವರು ಅವರ ಮಗನ ವಿವಾಹ ನೆರವೇರಿಸಿದ್ದು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದವರು ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ಇದ್ದು, ನಿಯಮಾನುಸಾರ ಸಂಬಂದಪಟ್ಟ ತಹಸೀಲ್ದಾರ್‌ ರವರಿಂದ ಅನುಮತಿ ಪಡೆಯದೇ ಇರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ನೀಡಿದ ವರದಿ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-06-2021 04:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080