ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 21-05-2021 ರಂದು ಪೊನ್ನಂಪೇಟೆ ತಾಲ್ಲೂಕು ಬಲ್ಯಮಂಡೂರು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-09-ಪಿ-253 ರ ಆಲ್ಟೋ ಕಾರನ್ನು ಅದರ  ಚಾಲಕ ಕಾಳಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-29-ಎಂ-2183 ರ ಓಮ್ನಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿದ್ದು ಈ ಬಗ್ಗೆ ತಮ್ಮಯ್ಯ ಎಂಬುವವರು ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

                ದಿನಾಂಕ: 20-05-2021 ರಂದು ಸೋಮವಾರಪೇಟೆ ತಾಲ್ಲೂಕು ಗರಗಂದೂರು ಗ್ರಾಮದ ಹೊಸತೋಟ ನಿವಾಸಿ ನೌಶದ್‌ ಎಂಬುವವರು ಕೆಲಸ ಮುಗಿಸಿ ಮರ ಕತ್ತರಿಸುವ ಯಂತ್ರವನ್ನು ಪಿಕ್‌ ಅಪ್‌ ವಾಹನದಲ್ಲಿ ಇಟ್ಟುಕೊಂಡು ವಾಪಾಸ್ಸು ಮನೆಗೆ ಹೋಗುವಾಗ ಗರಗಂದೂರು ಗ್ರಾಮದ ಹಾರಂಗಿ ಹಿನ್ನೀರಿನ ಬಳಿ ನಿಲ್ಲಿಸಿರುವಾಗ ಯಾರೋ ಕಳ್ಳರು ಪಿಕ್‌ ವಾಹನದಲ್ಲಿ ಇಟ್ಟಿದ್ದ ₹. 50,000 ಬೆಲೆಬಾಳು ಮರ ಕುಯ್ಯುವ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಗರಗಂದೂರು ಗ್ರಾಮದ ಹೊಸತೋಟ ನಿವಾಸಿ ಮುಸ್ತಾಫ ಎಂಬುವವರ ಮೇಲೆ ಗುಮಾನಿ ಇರುವುದಾಗಿ ನೀಡಿ ದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಿಕ್‌ ಅಪ್‌ ವಾಹನಕ್ಕೆ ಸೌದೆ ತುಂಬಿಸುವಾಗ ಬಿದ್ದು ವ್ಯಕ್ತಿ ಸಾವು.

            ದಿನಾಂಕ: 21-05-2021 ರಂದು ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದ ರಿವರ್‌ ಸೈಡ್‌ ಎಸ್ಟೇಟ್‌ ನಲ್ಲಿ ಪಿಕ್‌ ಅಪ್‌ ವಾಹನಕ್ಕೆ ಸೌದೆ ತುಂಬಿಸುವಾಗ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದು, ಸೌದೆ ತುಂಬಿಸುವಾಗ ಯಾವುದೇ ಮುಂಜಾಗ್ರತೆ ವಹಿಸದೇ ಇರುವ ಬಗ್ಗೆ ಕೆಎ-12-ಬಿ-1492 ರ ಪಿಕ್‌ ವಾಹನದ ಚಾಲಕ ಮೊಹಮ್ಮದ್‌ ಎಂಬುವವರು ಮೇಲೆ ಮೃತರ ಮಗ ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 21-05-2021 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲುಗ್ರಾಮದ ನಿವಾಸಿ ಆನಂದ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಲೋಹಿತ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು ಪ್ರಕರಣ

            ದಿನಾಂಕ: 19-05-2021 ರಂದು ಪೊನ್ನಂಪೇಟೆ ತಾಲ್ಲೂಕು ಅತ್ತೂರು ಗ್ರಾಮದ ಮಾಚಯ್ಯ ಎಂಬುವವರ ತೋಟದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೋಣಿಕೊಪ್ಪ ನಿವಾಸಿ ಶಮೀರ್‌ ಎಂಬುವವರಿಗೆ ಸೇರಿದ ಕೆಎ-12-ಕೆ-9168 ರ ಬೈಕನ್ನು ಯಾರೊ ಕಳ್ಳವು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 21-05-2021 ರಂದು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 21-05-2021 ರಂದು ಸೋಮವಾರಪೇಟೆ ತಾಲ್ಲೂಕು ಕೂಡಿಗೆ ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-05-2021 01:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ