ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 21-04-2021 ರಂದು ಪೊನ್ನಂಪೇಟೆ ತಾಲ್ಲೂಕು ಲಕ್ಕುಂದ  ಗ್ರಾಮದ  ನಿವಾಸಿ  ಶಶಿ ಎಂಬುವವರು  ಅವರ  ಅಂಗಡಿಯ  ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ  ಮಾಡುತ್ತಿದ್ದ ಪ್ರಕರಣವನ್ನು ಕುಟ್ಟ ಠಾಣೆ ಪಿಎಸ್‍ಐ ಚಂದ್ರಪ್ಪ  ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ 21-04-2021 ರಂದು ಮಡಿಕೇರಿ ತಾಲ್ಲೂಕು ಪಾಲೂರು ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯವರು ಕೋವಿಡ್‍-19 ಹರಡುವಿಕೆ ತಡೆಗಟಗಟ್ಟಲು ಸರ್ಕಾರದ ಆದೇಶಾನುಸಾರ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಜಾತ್ರೆ ನಡೆಸಿ ಸುಮಾರು 400 ರಿಂದ 450 ಜನರು ಸೇರಿದ್ದು ಸಾಮಾಜಿಕ ಅಂತರ  ಕಾಪಾಡದೆ, ಮಾಸ್ಕ್‍ ಧರಿಸದೇ  ನಿಯಮ ಉಲ್ಲಂಘಿಸಿರುವ  ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 21-04-2021 ರಂದು ಮಡಿಕೇರಿ ನಗರದ  ದಾಸವಾಳ ರಸ್ತೆಯ ನಿವಾಸಿ ಇಬ್ರಾಹಿಂ ಎಂಬುವವರಿಗೆ ಕಾಲೇಜು ರಸ್ತೆಯಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಅಶ್ವಿನಿ ಬಸ್‍ ಲೋಡರ್‍ ಸಲೀಂ, ಚಾಲಕ ಮತ್ತು ನಿರ್ವಾಹಕರು ಅವಾಚ್ಯ ಪದಗಳಿಂದ ಬೈದು ರಾಡಿನಿಂದ ಹಲ್ಲೆ ಮಾಡಿ ನೋವು ಪಡಿಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ಮಹಮ್ಮದ್ ಅಫ್ಸರ್‍ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣಗಳು.    

            ದಿನಾಂಕ: 20-04-2021 ರಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪಿ.ಡಿಒ ರವರು ಗ್ರಾಮ ಲೆಕ್ಕಾಧಿಕಾರಿ, ಕಛೇರಿ ಸಹಾಯಕರು, ಸಹಾಯಕ ಪೊಲೀಸ್‍ ಉಪನಿರೀಕ್ಷಕರವರೊಂದಿಗೆ ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ಈ ಕೆಳಕಂಡ ವರ್ತಕರು ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಕಂಡು ಬಂದ ಮೇರೆ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  1. ಸಂಶುದ್ದೀನ್, ಡಾ. ಮೊಬೈಲ್‍ ಶಾಪ್‍, ಸುಂಟಿಕೊಪ್ಪ. 2. ಶಾಂತಪ್ಪ, ಶ್ರೀ ವಿನಾಯಕ ನ್ಯೂಸ್ ಏಜೆನ್ಸಿ, ಸುಂಟಿಕೊಪ್ಪ. 3. ಗೋಪಾಲ್‍ ಭಟ್‍, ಅಶ್ವಿನಿ ಮೆಡಿಕಲ್ಸ್,ಸುಂಟಿಕೊಪ್ಪ. 4. ಬೋಪಯ್ಯ, ಪೂಜಾ ಬಾರ್‍ & ರೆಸ್ಟೋರಂಟ್, ಸುಂಟಿಕೊಪ್ಪ, 5. ಬಾಲಯ್ಯ, ಸ್ವಾಗತ್‍ ಬಾರ್‍ & ರೆಸ್ಟೋರಂಟ್‍, ಸುಂಟಿಕೊಪ್ಪ 6. ರಮೇಶ್‍, ಎಲೆಕಟ್ರಿಕಲ್‍ ಶಾಪ್‍, ಸುಂಟಿಕೊಪ್ಪ. 7. ಮುರಳೀಧರ ಕಾಮತ್‍, ಗಣೇಶ್‍ ಬಜಾರ್‍ ಶಾಪ್‍, ಸುಂಟಿಕೊಪ್ಪ. 8. ರಫೀಕ್‍ ಸಾಗರ್‍, ಹಾಲು ಮಾರಾಟ ಮಳಿಗೆ, ಸುಂಟಿಕೊಪ್ಪ.

ಅಕ್ರಮ ಲಾಟರಿ ಮಾರಾಟ ಪ್ರಕರಣ

                ದಿನಾಂಕ: 21-04-2021 ರಂದು ಸೋಮವಾರಪೇಟೆ   ತಾಲ್ಲೂಕು ನೆಲ್ಯಹುದಿಕೇರಿ  ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹ್ಯಾರಿಸ್ ಎಂಬುವವರು ಅಕ್ರಮ ವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಸಾರ್ವಜನಿರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಠಾಣೆ ಪಿಎಸ್‍ಐ ಮೋಹನ್‍ ರಾಜ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಕಳವು ಪ್ರಕರಣ

                ದಿನಾಂಕ: 20-04-2021 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ತೆಲುಗರ ಬೀದಿ ನಿವಾಸಿ ಶಿಲನ್‍ ಕೆ.ಜಿ ಎಂಬುವವರು ಅವರ ಮೆನಯ ಬಳಿ ಇರುವ ಶೆಡ್‍ ನಲ್ಲಿ ನಿಲ್ಲಿಸಿದ್ದ ಕೆಎ-03-ಎಂಎ-0355 ರ ಮಾರುತಿ 800 ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೋವಿಡ್‍ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 21-04-2021 ರಂದು ವಿರಾಜಪೇಟೆ ನಗರ ಠಾಣೆ ಪಿಎಸ್‍ಐ ಜಗದೀಶ್‍ ಧೂಲಶೆಟ್ಟಿ ರವರು ಸಿಬ್ಬಂದಿಯವರೊಂದಿಗೆ ನಗರ ಗಸ್ತುಕರ್ತವ್ಯ ಮಾಡುವಾಗ ನಗದ ದೊಡ್ಡಟ್ಟಿ  ಚೌಕಿ ಬಳಿ ಗಣೇಶ್‍ ವೈನ್ಸ್ ಮಳಿಗೆ ಪರಿಶೀಲನೆ ಮಾಡಿದಾಗ ಕೋವಿಡ್‍-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರ ಮಾರ್ಗಸೂಚಿ ನೀಡಿದ್ದರೂ ಸಹಾ ನಿರ್ಲಕ್ಷತೆಯಿಂದ ಸಾರ್ವಜನಿಕರು ಮಾಸ್ಕ್‍ ಧರಿಸದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮದ್ಯ ಖರೀದಿಗೆ ಅವಕಾಶ ಮಾಡಿರುವುದು ಕಂಡುಬಂದಿದ್ದು ವೈನ್‍ ಶಾಪ್‍ ಮೇನೇಜರ್ ಕಾವೇರಪ್ಪ ಎಂಬುವವರು ವಿರುದ್ದ ನೀಡಿದ ವರದಿ ಮೇರೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-04-2021 05:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ