ಅಭಿಪ್ರಾಯ / ಸಲಹೆಗಳು

ಬೈಕ್‍ ಕಳವು ಪ್ರಕರಣ, ಆರೋಪಿಗಳ ಬಂಧನ.

ಸೋಮವಾರಪೇಟೆಯಲ್ಲಿ ಬೈಕ್‍ ಕಳವು ಮಾಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಸೋಮವಾರಪೇಟೆ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.

            ಇತ್ತೀಚೆಗೆ ಸೋಮವಾರಪೇಟೆಯ ಜೂನಿಯರ್ ಕಾಲೇಜು ಬಳಿ ಕಬಡ್ಡಿ ಪಂದ್ಯಾಟ ನಡೆಯುತ್ತಿರುವಾಗ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯವರು ಸರಣಿ ಬೈಕ್‍ ಕಳವು ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಮಾಡಿ ಸೋಮವಾರಪೇಟೆಯಿಂದ ಕಳುವಾಗಿದ್ದ ಬೈಕ್‍ ಹಾಗೂ ಬೆಟ್ಟದಪುರ ಠಾಣಾ ಸರಹದ್ದಿನಲ್ಲಿ ಕಳುವಾಗಿದ್ದ ಬೈಕ್  ಗಳನ್ನು ವಶಪಡಿಸಿಕೊಂಡಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿಗಳ ವಿವರ: 1. ಇರ್ಫಾನ್ ತಂಧೆ ಅನ್ವರ್, 22 ವರ್ಷ, ಮೆಕ್ಯಾನಿಕ್‍ ಕೆಲಸ, ವಾಸ: ಕೆರೆಬೇಲಿ, ಹಾರಂಗಿ ವಸತಿ ಗೃಹ, ಕೊಣನೂರು, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ.

  1. ಕೀರ್ತನ್‍ ತಂದೆ ಬಾಲಕೃಷ್ಣ, 24 ವರ್ಷ, ಕೂಲಿಕೆಲಸ, ವಾಸ: ಕರಿಯಪ್ಪ ಬಡಾವಣೆ, ಕುಶಾಲನಗರ.

            ಈ ಪ್ರಕರಣವನ್ನು ಸೋಮವಾರಪೇಟೆ ಉಪವಿಭಾಗ ಡಿವೈ.ಎಸ್.ಪಿ ಶೈಲೇಂದ್ರ ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಮಹೇಶ್‍ ಬಿ.ಜಿ, ಕುಶಾಲನಗರ ವೃತ್ತ ನಿರೀಕ್ಷಕರಾದ ಮಹೇಶ್ ಎಂ, ಕುಶಾಲನಗರ ಪಟ್ಟಣ ಠಾಣೆ ಪಿಎಸ್ಐ ಗಣೇಶ್‍, ಸೋಮವಾರಪೇಟೆ ಠಾಣೆ ಪಿಎಸ್‍ಐ ಶ್ರೀಧರ್, ಎಎಸ್‍ಐ ಖತೀಜ, ಎಎಸ್‍ಐ ಗೋಪಾಲ್, ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಬಸ್ಪಪ್ಪ, ಹರ್ಷಿತ್, ದಯಾನಂದ್, ಸಜಿ, ಸುಧೀಶ್, ರಂಜಿತ್, ಗಿರೀಶ್, ರಾಜೇಶ್ ರವರು ಪತ್ತೆ ಮಾಡಿದ್ದು , ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.

ವಾಹನ ಮಾಲೀಕರು ತಮ್ಮ ವಾಹನಗಳನ್ನು ರಾತ್ರಿ ಸಮಯದಲ್ಲಿ ಮನೆಯ ಹೊರಗೆ ನಿಲ್ಲಿಸದೆ ಮನೆಯ ಒಳಗೆ ಅಥವಾ ಶೆಡ್ಡಿನಲ್ಲಿ ನಿಲ್ಲಿಸಿಕೊಂಡು ತಮ್ಮ ವಾಹನಗಳ ಬಗ್ಗೆಮುಂಜಾಗ್ರತೆ ವಹಿಸಲು ಕೋರಲಾಗಿದೆ.

ದೇವಸ್ಥಾನದ ಹುಂಡಿ ಒಡೆದು ಹಣ ಕಳವು ಪ್ರಕರಣ

                ದಿನಾಂಕ: 19-03-2021 ರಿಂದ 21-03-2021 ರ ನಡುವೆ ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮದ ಶ‍್ರೀ ಭಗವತಿ ದೇವಸ್ಥಾನದ ಹುಂಡಿಗೆ ಹಾಕಿದ್ದ ಬೀಗವನ್ನು  ಯಾರೋ ಕಳ್ಳರು ಒಡೆದು ಅದರಲ್ಲಿದ್ದ ಅಂದಾಜು ₹. 10,000 ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೇವಾಲಯ ಕಾರ್ಯದರ್ಶಿ ಕುಶಾಲಪ್ಪ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-03-2021 05:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080