ಅಭಿಪ್ರಾಯ / ಸಲಹೆಗಳು

ಆಕಸ್ಮಿಕ ವಾಗಿ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು.

                ಮಡಿಕೇರಿ ತಾಲ್ಲೂಕು ಚೇಲಾವರ  ಗ್ರಾಮದ ಮುಂಡ್ಯೋಳಂಡ ತಮ್ಮಯ್ಯ ಎಂಬುವವರು ತೋಟದಲ್ಲಿ ಕಾಳು ಮೆಣಸು ಹಾಗೂ ಮರ ಕಪಾತು ಮಾಡುವ ಕೆಲಸವನ್ನು ಕೆ.ಆರ್‍ ನಗರ ತಾಲ್ಲೂಕು ಸಿದ್ದನ ಕೊಪ್ಪ ಗ್ರಾಮದ ನಿವಾಸಿ ಚಂದ್ರ ಎಂಬುವವರಿಗೆ ಗುತ್ತಿಗೆ ನೀಡಿ ತೋಟದೊಳಗೆ  ವಿದ್ಯುತ್‍ ತಂತಿ ಹಾದು ಹೋಗಿದ್ದು ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದರು. ದಿನಾಂಕ: 20-03-2021 ರಂದು ಚಂದ್ರ ರವರು ಮರ ಕಪಾತು ಕೆಲಸ ಮಾಡುತ್ತಿರುವಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್‍ ತಂತಿಗೆ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ತಾಗಿ ವಿದ್ಯತ್‍ ಸ್ಪರ್ಷಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತ ಸಂಬಂದಿಕರಾದ ರವಿ ಎಂಬುವವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

                 ಕೊಡಗು ಜಿಲ್ಲೆಯ ಬಹಳಷ್ಟು ಕಾಫಿ ಹಾಗೂ ಇನ್ನಿತರ ತೋಟಗಳಲ್ಲಿ ವಿದ್ಯುತ್‍ ತಂತಿ ಹಾದುಹೋಗಿದ್ದು ತೋಟಗಳಲ್ಲಿ ಕೆಲಸ ನಿರ್ವಹಿಸುವಾಗ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿದ್ದು ಕಾರ್ಮಿಕರು ಕೆಲಸ ನಿರ್ವಹಿಸುವಾಗ ಮಾಡುವ ಸಣ್ಣ ಅಜಾಗರೂಕತೆಯಿಂದ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.  ಜಿಲ್ಲೆಯ ತೋಟಗಳ ಮಾಲೀಕರು ಕಾರ್ಮಿಕರಿಂದ ಕೆಲಸ ಮಾಡಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಕೋರಿದೆ. ವಿದ್ಯುತ್ ತಂತಿ ಹಾದುಹೋಗಿರುವ ಸ್ಥಳಗಳಲ್ಲಿ ಕೆಲಸಗಾರರು ಕೆಲಸ ಮಾಡುವ ಸಮಯದಲ್ಲಿ ಹಾಗೂ ಏಣಿ ಉಪಯೋಗಿಸುವಾಗ ರಬ್ಬರ್ ಕೈಗವಸು ( ರಬ್ಬರ್ ಗ್ಲೌಸ್) ಗಳನ್ನು ಹಾಗೂ ರಬ್ಬರ್ ಪಾದರಕ್ಷೆ (ರಬ್ಬರ್ ಶೂ)ಗಳನ್ನು ಧರಿಸುವಂತೆ, ಸಾಧ್ಯವಾದರೆ ವಿದ್ಯುತ್‍ ನಿಗಮದ ಸಂಬಂದಪಟ್ಟ ಅಧಿಕಾರಿಯವರಿಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ವಿದ್ಯುತ್‍ ಸಂಪರ್ಕ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳುವುದು. ತೋಟಗಳಲ್ಲಿ ವಿದ್ಯುತ್‍ ಕಂಬಗಳ ಬಳಿ ಯಾವುದೇ ಹಸಿರು ಬಳ್ಳಿಗಳು, ಮರಗಿಡಗಳು ಬೆಳೆಯುವುದನ್ನು ತಡೆಯುವುದು ಹಾಗೂ ಸಂಬಂದಪಟ್ಟ ವಿದ್ಯುತ್‍ ನಿಗಮದ ಕಛೇರಿಗೆ ಮಾಹಿತಿ ನೀಡಿ ವಿದ್ಯುತ್‍ ಕಂಬಗಳ ಸಮೀಪದ ಮರಗಳ ರೆಂಬೆಕೊಂಬೆಗಳು ವಿದ್ಯುತ್‍ ತಂತಿಗೆ ತಾಗದಂತೆ ತೆರವುಗೊಳಿಸುವ ಕ್ರಮ ಕೈಗೊಳ್ಳಲು ಕೋರಿದೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 20-03-2021 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಬಾಳಾಜಿ ಗ್ರಾಮದ ಬಳಿ ಮಾಯಮುಡಿ ರಸ್ತೆಯಲ್ಲಿ ಕೆಎ-12-ಯು-3061 ರ ಸ್ಕೂಟರನ್ನು ಅದರ ಸವಾರ ಗಣೇಶ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಸ್ಕೂಟರ್‍ ನಿಯಂತ್ರಣ ತಪ್ಪಿ ಬಿದ್ದುದರಿಂದ ಸವಾರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ಹಿಂಬದಿ ಸವಾರ ವಿನೋದ್‍ ಎಂಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 21-03-2021 12:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ