ಅಭಿಪ್ರಾಯ / ಸಲಹೆಗಳು

ಕ್ಷುಲ್ಲಕ ವಿಷಯಕ್ಕೆ ವ್ಯಕ್ತಿ ಮೇಲೆ ಹಲ್ಲೆ

 

ಸೋಮವಾರಪೇಟೆ ತಾಲೂಕು, ಗೋಣಿಮರೂರು ಗ್ರಾಮದ ಹೆಚ್.ಪಿ. ಶಿವಮೂರ್ತಿ ಎಂಬವರು ದಿನಾಂಕ 19-12-2020 ರಂದು  ಅಂಕನಹಳ್ಳಿಯ ವಿರೂಪಾಕ್ಷ ರವರ ಅಂಗಡಿಯ ಮುಂದೆ ಹೇಮಂತ ರವರ ಕಾರನ್ನು ಅವರ ತಮ್ಮ ಚೇತನ್ ಎಂಬವರು ಓಡಿಸಿಕೊಂಡು ಹೋಗಿ ಅಪಘಾತಕ್ಕೀಡು ಮಾಡಿರುವ ವಿಚಾರವನ್ನು ಮಾತನಾಡಿಕೊಂಡಿರುವಾಗ್ಗೆ ಅಲ್ಲಿಗೆ ಅಂಕನಳ್ಳಿ ಗ್ರಾಮದ ಚೇತನ್ ಮತ್ತು ಮೆಣಸ ಗ್ರಾಮದ ಹರ್ಷ ಎಂಬವರು  ಬಂದು ಕಾರು ಅಪಘಾತವಾದ ವಿಷಯವಾಗಿ ಯಾಕೆ ಮಾತನಾಡುತ್ತೀರೆಂದು ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಮನೆಗೆ ಅಕ್ರಮ ಪ್ರವೇಶ, ಹಲ್ಲೆ:

 

ದಿನಾಂಕ 20-12-2020 ರಂದು ಸೋಮವಾರಪೇಟೆ ತಾಲೂಕು ಸೀಗೆಮರೂರು ಗ್ರಾಮದ  ಧನರಾಜ್ ಎಂಬವರ  ªÀÄ£ÉUÉ ಅದೇ ಗ್ರಾಮದ ಜನಪ್ರಕಾಶ್ ಮ್ತು ಕುಮಾರಸ್ವಾಮಿ ಎಂಬವರು ಅಕ್ರಮ ಪ್ರವೇಶ ಮಾಡಿ  ಜಾಗದ ವಿಷಯವಾಗಿ ಜಗಳ ಮಾಡಿ  ಧನರಾಜ್ ರವರನ್ನು ತಳ್ಳಿ ಬೀಳಿಸಿ ಅವಾಚ್ಯ ಶಬ್ದಗಳಿಂದ  ಬೈದು  ಕಬ್ಬಿಣದ ರಾಡಿನಿಂದ  ತಲೆಯ ಮೇಲ್ಭಾಗಕ್ಕೆ ಹೊಡೆದು ಗಾಯಪಡಿಸಿದ್ದು ನಂತರ ತಡೆಯಲು ಬಂದ ಧನರಾಜ್ ರವರ ಪತ್ನಿ ªÀÄvÀÄÛ ಮಗ½UÉ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೋವುಪಡಿಸಿದ್ದು ಕೊಲೆ ಬೆದರಿಕೆ ಹಾಕುರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಮಹಿಳೆಯ ಅಸಹಜ ಸಾವು:

 

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮಾಲಂಬಿ ಗ್ರಾಮದ ಗಿರಿಜನ ಹಾಡಿಯ ನಿವಾಸಿ ಜೇನು ಕುರುಬರ ರಮೇಶ್ ಎಂಬವರ  ತಾಯಿ ಸಿದ್ದಮ್ಮನವರಿಗೆ  ವಿಪರೀತ ಮದ್ಯಪಾನ ಮಾಡುವ ಹವ್ಯಾಸ ಇದ್ದು,  ಒಂದು ವಾರದಿಂದ ಸಿದ್ದಮ್ಮ ರವರು ಮನೆಯಲ್ಲಿ ಇಲ್ಲದೇ ಇದ್ದು, ದಿನಾಂಕ 20-12-2020 ರಂದು ಮಾಲಂಬಿ ಗ್ರಾಮದ ಬಾಲಕೆರೆ ಎಂಬಲ್ಲಿ ತೋಡಿನ ಬಳಿ ಸದರಿ ಸಿದ್ದಮ್ಮನವರ ಮೃತ ಶರೀರ ಪೂರ್ತಿ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡುಬಂದಿದ್ದು, ಸದರಿ ಮಹಿಳೆಯ ಮಗ ಜೇನುಕುರುಬರ ರಮೇಶ್ ರವರ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ

 

ಸೋಮವಾರಪೇಟೆ ತಾಲೂಕು, ಬಾಣಾವಾರ ಗ್ರಾಮದ ಬಿ.ಜೆ. ಪರಮೇಶ್ ಎಂಬವರ ತಾಯಿ ಶ್ರೀಮತಿ ಕಾಳಮ್ಮ ಎಂಬವರು ದಿನಾಂಕ 16-12-2020 ರಂದು ಬಾಣಾವಾರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಯೆರಪಾರೆ ಗ್ರಾಮದ ರಮೇಶ್ ಎಂಬವರು ಮೋಟಾರ್ ಸೈಕಲಿನಲ್ಲಿ ಹಿಂದಿನಿಂದ ಬಂದು ಶ್ರೀಮತಿ ಕಾಳಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಕಾಲು ಮುರಿದು ಹೋಗಿದ್ದು ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿ.ಜೆ. ಪರಮೇಶ್ ರವರ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪತಿಯಿಂದ ಪತ್ನಿಯ ಕೊಲೆಗೆ ಯತ್ನ

 

ವಿರಾಜಪೇಟೆ ನಗರದ ವಿದ್ಯಾನಗರದಲ್ಲಿ ಶ್ರೀಮತಿ ಎ.ಜಾಕೀರ ಎಂಬವರು ತನ್ನ ಗಂಡ ಮುನೀರ್ ನೊಂದಿಗೆ ವಾಸವಾಗಿದ್ದು, ದಿನಾಂಕ 20-12-2020 ರಂದು ಶ್ರೀಮತಿ ಎ.ಜಾಕೀರರವರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಗಂಡ ಮುನೀರ್ ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು ಗಲಾಟೆ ಮಾಡಿದ್ದು ಅಲ್ಲದೆ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದು ಪರಿಣಾಮ ಶ್ರೀಮತಿ ಎ.ಜಾಕೀರ ರವರ ಕೈಗೆ ರಕ್ತಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 21-12-2020 04:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080