ಅಭಿಪ್ರಾಯ / ಸಲಹೆಗಳು

ವಾಹನ ಕಳವು ಪ್ರಕರಣ ಪತ್ತೆ, ಇಬ್ಬರು ಆರೋಪಿಗಳ ಬಂಧನ.

       ಕೊಡಗು ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ವಾಹನಗಳನ್ನು ಕಳುವು ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಸುತ್ತಮುತ್ತ ಹಾಗೂ ಹಾಸನ ಕಡೆಗಳಲ್ಲಿ ಮನೆಯ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನು ಮತ್ತು ವಾಹನಗಳನ್ನು ನಿಲ್ಲಿಸಿ ವಾಹನದಲ್ಲಿ ಕೀ ಬಿಟ್ಟು ಹೋಗುವವರನ್ನು ಗಮನಿಸಿ ಕಾರು,ಬೈಕ್,ಸ್ಕೂಟಿಗಳನ್ನು ಕಳುವು ಮಾಡುತ್ತಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ:-

1) ಬಿಲ್ಲವರ ಜೀವನ್ ತಂದೆ  ಗಣೇಶ   ಪ್ರಾಯ 23 ವರ್ಷ  ಕೂಲಿ ಕೆಲಸ ವಾಸ ಸುಳುಗಳಲೆ ಕಾಲೋನಿ ಶನಿವಾರಸಂತೆ

2)ರಿಯಾಜ್ ತಂದೆ ಮಹಮ್ಮದ್ ಅದ್ಲ  ಪ್ರಾಯ 29 ವರ್ಷ ಕೂಲಿ ಕೆಲಸ ವಾಸ ಹೊಸೂರು ಗ್ರಾಮ ಯಸಳೂರು ಹೋಬಳಿ ಸಕಲೇಶಪುರ ತಾಲೋಕು ಹಾಸನ ಜಿಲ್ಲೆ

ಆರೋಪಿಗಳಿಂದ ವಶಪಡಿಸಿಕೊಂಡ ಕಳುವು ಮಾಲಿನ ವಿವರ

1) ಕೆಎ-04-ಎಂಇ-7788 ರ ಮಾರುತಿ 800 ಕಾರು

2)ಕೆಎ-45-ಕೆ-0679 ರ ಹೊಂಡಾ ಎಲಿವೇಟರ್ ಸ್ಕೂಟಿ

3) ಕೆಎ-13-ಇಎಂ-3822  ರ ಸೂಪೆರ್ ಎಕ್ಸೆಲ್  ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ

   ಸದ್ರಿ ವಾಹನಗಳ  ಒಟ್ಟು ಮೌಲ್ಯ 1,20,000 ರೂ ಆಗಿರುತ್ತದೆ.

ಆರೋಪಿ ಜೀವನ್ 2019ರಲ್ಲಿ ಕಳವು ಪ್ರಕರಣದಲ್ಲಿ  ಬಾಗಿಯಾಗಿ ಒಂದು ವರ್ಷ ಶಿಕ್ಷೆಯನ್ನು ಅನುಭವಿಸಿ ಹೊರಬಂದ ನಂತರ ಒಂದು ಮೋಟಾರು ಸೈಕಲನ್ನು ಕಳವು ಮಾಡಿ 2020  ನವಂಬರ್ವರೆಗೆ ಜೈಲಿನಲ್ಲಿದ್ದು ಪುನಃ ಹಳೆ ಚಾಳಿಯನ್ನು ಮುಂದುವರೆಸಿ ಕಳ್ಳ ತನ ಮಾಡುತ್ತಿರುವುದಾಗಿದೆ.

ಆರೋಪಿಗಳ ಮೇಲೆ  ವಾಹನ ಕಳ್ಳತನಕ್ಕೆ ಸಂಬಂದಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ  ಹಾಗೂ ಹಾಸನ ಜಿಲ್ಲೆಯ ಬಾಣಾವಾರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ  ದಾಖಲಾಗಿರುತ್ತದೆ.

    ಈ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಶನಿವಾರಸಂತೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿ ರವರ ನೇತೃತ್ವದ ಪಿ.ಎಸ್.ಐ. ದೇವರಾಜು ಹೆಚ್.ಇ. ಎ.ಎಸ್.ಐ. ಜಯಕುಮಾರ್, ಸಿಬ್ಬಂದಿಗಳಾದ ಲೋಕೇಶ್, ಶಶಿಕುಮಾರ್ ಹೆಚ್.ಬಿ., ಬಿ.ಡಿ.ಮುರುಳಿ, ಪ್ರದೀಪ್, ವಿನಯ್, ಸಂತೋಷ್, ಪ್ರದೀಪ, ಕುಮಾರ್ ರವರನ್ನೊಳಗೊಂಡ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಮತ್ತು ಕಳುವು ಮಾಲನ್ನು ಪತ್ತೆ ಹಚ್ಚುವಲ್ಲಿ  ಯಶಸ್ವಿಯಾಗಿರುತ್ತಾರೆ. ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

    ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ರೀತಿಯಲ್ಲಿ ನೋಡಿಕೊಂಡು ರಾತ್ರಿ ಸಮಯದಲ್ಲಿ ವಾಹನಗಳನ್ನು ಸೂಕ್ತ ಭದ್ರತೆಯ ಸ್ಥಳದಲ್ಲಿ ನಿಲ್ಲಿಸಿ ಎಚ್ಚರ ವಹಿಸಿಕೊಂಡು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ.

ಕಳವು ಪ್ರಕರಣ

            ದಿನಾಂಕ:  18-06-2021 ರಂದು ರಾತ್ರಿ ಪೊನ್ನಂಪೇಟೆ ತಾಲ್ಲೂಕು ಬೆಸಗೂರು ಗ್ರಾಮದಲ್ಲಿರುವ ಕೊಡವ ಕುಟುಂಬದ ಐನ್‌ ಮೆನೆಯೊಂದಕ್ಕೆ ಯಾರೋ ಕಳ್ಳರು ನುಗ್ಗಿ ಬೀಗ ಮುರಿದು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು ₹. 3,000 ನಗದು ಹಣ ಮತ್ತು ₹. 2,500 ಮೌಲ್ಯದ ವಡಿಕತ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸುರೇಶ್‌ ಎಂಬುವವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

            ದಿನಾಂಕ: 19-06-2021 ರಂದು ಸೋಮವಾರಪೇಟೆ ತಾಲ್ಲೂಕು ಹಾರಂಗಿ ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಕುಮಾರ್‌ ಮತ್ತು ರವಿ ಮತ್ತು  ಅದೇ ಗ್ರಾಮದ ನಿವಾಸಿಗಳಾದ ಭಾಸ್ಕರ್‌ ಮತ್ತು ದೊರೆಸ್ವಾಮಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹಲ್ಲೆ ಮಾಡಿಕೊಂಡು ಗಾಯಪಡಿಸಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲ ಕಾರ್ಮಿಕರ ರಕ್ಷಣೆ.

       ಮಕ್ಕಳ ಸಹಾಯವಾಣಿಗೆ ಬಂದ ದೂರನ್ನು ಆಧರಿಸಿ ಇಂದು ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ, ಹೊಸೂರು, ಕಾರೆಕಾಡು ಗ್ರಾಮಗಳ ಕಾಫಿ ತೋಟ ಹಾಗೂ ಸ್ಥಳೀಯ ಮನೆಗಳಿಗೆ ತೆರಳಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಧೆಯ ಕಾರ್ಮಿಕ ಕಾಯ್ದೆಯಡಿ ತಪಾಸಣೆಯನ್ನು ನಡೆಸಲಾಯಿತು. ಸದರಿ ಕಾರ್ಯಾಚರಣೆ ಸಂದರ್ಭ ಮನೆಯ ಹಾಗೂ ತೋಟದ ಕೆಲಸಗಳಲ್ಲಿ ನಿರತರಾಗಿದ್ದ ಇಬ್ಬರು ಕಿಶೋರಾವಸ್ಧೆಯ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಸದರಿ ಮಕ್ಕಳ ಪೋಷಣೆ ಹಾಗೂ ರಕ್ಷಣೆಯ ಉದ್ದೇಶದಿಂದ ಮಡಿಕೇರಿ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳನ್ನು ಪುನರ್ವಸತಿಗೋಳಿಸಲಾಗಿದೆ. ಹಾಗೂ ತಪ್ಪಿತಸ್ಥ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
       ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಶ್ರೀಮತಿ ಎಂ.ಬಿ ಸುಮತಿ ಹಾಗೂ ಶ್ರೀ ಯು.ಎ.ಮಹೇಶ್, ಶ್ರೀ ಆರ್. ಶೀರಾಝ್ ಅಹ್ಮದ್ ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಶ್ರೀ ಜಯಣ್ಣ ಹಿರಿಯ ಕಾರ್ಮಿಕ ನಿರೀಕ್ಷಕರು ವಿರಾಜಪೇಟೆ ವೃತ್ತ, ಶ್ರೀ ಹೆಚ್.ಕೆ ಪೂನ್ನು, ಉಪ ತಹಶಿಲ್ದಾರರು ಪೋನ್ನಂಪೇಟೆ ತಾಲ್ಲೂಕು, ಶ್ರೀ ಪ್ರವೀಣ್ ಕುಮಾರ್, ಜಿಲ್ಲಾ ಚೈಲ್ಡ್ ಲೈನ್ ಮಕ್ಕಳ ಸಹಾಯವಾಣಿ ತಂಡದ ಸದಸ್ಯರು, ಶ್ರೀ ಕಿರಣ್ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೆ.ಎಂ. ಭಾನುಪ್ರಿಯ, ಮೋನಿಕ ಡಿ.ಜಿ, ಮತ್ತು ಬಣಗಾರ್ ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.

 

ಇತ್ತೀಚಿನ ನವೀಕರಣ​ : 20-06-2021 11:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080