ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 18-06-2021 ರಂದು ಮಡಿಕೇರಿ ನಗರದ ಮ್ಯಾನ್ಸ್‌ ಕಾಂಪೌಂಡ್‌ ಬಳಿ ರಸ್ತೆಯಲ್ಲಿ ಯೋಗೇಶ್‌ ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 18-06-2021 ರಂದು ಕುಶಾಲನಗರದ ರೈತ ಭವನದ ಬಳಿ ಸತೀಶ್‌ ಎಂಬುವವರು ಕೆಎ-12-ಆರ್‌-3225 ರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಿಳೆ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಶ್ಲೀಲ ದೃಶ್ಯಾವಳಿ ವಿನಿಮಯ ಪ್ರಕರಣ

            ಅಪ್ರಾಪ್ತ ವಯಸ್ಕರನ್ನು ಪ್ರಲೋಭನೆಗೆ ಒಳಪಡಿಸಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿದ ದೃಶ್ಯಾವಳಿಗಳನ್ನು ವಶದಲ್ಲಿಟ್ಟಿಕೊಂಡು ಆನ್‌ಲೈನ್‌ ಮೂಲಕ ವಿನಿಮಯ, ಪ್ರಸಾರ, ಮಾರಾಟ ಹಾಗೂ ವಾಣಿಜ್ಯ ವ್ಯವಹಾರಗಳಿಗೆ  ಬಳಸಿಕೊಂಡಿರುವ ಬಗ್ಗೆ ರಾಜ್ಯ ಸಿಐಡಿ ವಿಭಾಗದ ಮೂಲಕ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗವು ಕಳುಹಿಸಿದ ಮಾಹಿತಿಯನ್ನು ಆದರಿಸಿ ಕೊಡಗು ಸೈಬರ್‌ ಅಪರಾಧ ಠಾಣೆ ಪೊಲೀಸರು ಪರಿಶೀಲಿಸಿ ಕುಶಾಲನಗರದ 4ನೇ ಬ್ಲಾಕ್‌ ನಿವಾಸಿ ಬಿನುಕುಮಾರ್ ಮತ್ತು ಕುಶಾಲನಗರದ ನಿಸರ್ಗಧಾಮ ನಿವಾಸಿ ಅಮಿತ್‌ ಕರ್ಮಾಕರ್ ಎಂಬುವವರ ವಿರುದ್ದ ದಿನಾಂಕ: 18-06-2021 ರಂದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

            ಅಪ್ರಾಪ್ತರ ಮೇಲಿನ ಸಹಮತಿಯ ಲೈಂಗಿಕ ದೌರ್ಜನ್ಯವೂ ಕೂಡ  ಘೋರ ಅಪರಾಧವಾಗಿದ್ದು ಇಂತಹ ಕೃತ್ಯಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಿದ ದೃಶ್ಯಗಳನ್ನು ಡಿಜಿಟಲ್‌ ಅಥವಾ ಇತರೆ ರೂಪದಲ್ಲಿ ಇಟ್ಟುಕೊಳ್ಳುವುದು, ಇಂತಹ ದೃಶ್ಯಗಳ ಆನ್‌ಲೈನ್‌ ವಿನಿಮಯ, ಪ್ರಸಾರ, ಮಾರಾಟ ಹಾಗೂ ವಾಣಿಜ್ಯ ವ್ಯವಹಾರಗಳಿಗೆ  ಬಳಸಿಕೊಳ್ಳುವುದು ಘೋರ ಅಪರಾಧವಾಗಿರುತ್ತದೆ. ಇಂತಹ ಕೃತ್ಯಗಳ ಮೇಲೆ ಸೈಬರ್‌ ಅಪರಾಧ ಪೊಲೀಸರು ನಿಗಾವಹಿಸಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು ಸಾರ್ವಜನಿಕರು ಇಂತಹ ಅಪರಾಧಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಇಂತಹ ಕೃತ್ಯಗಳು ಕಂಡುಬಂದಲ್ಲಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

 ಕಳವು ಪ್ರಕರಣ

            ದಿನಾಂಕ: 16-06-2021 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳೂರು ಗ್ರಾಮದ ನಿವಾಸಿ ದಾಮೋದರ ಎಂಬುವವರು ಶನಿವಾರಸಂತೆಯ ಗಣಪತಿ ದೇವಾಲಯದ ಮುಂಭಾಗ ನಿಲ್ಲಿಸಿದ್ದ ಕೆಎ-45-ಕೆ-679 ರ ಸ್ಕೂಟರನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 18-06-2021 ರಂದು ಸೋಮವಾರಪೇಟೆ ತಾಲ್ಲೂಕು ಮಳೂರು  ಗ್ರಾಮದ ನಿವಾಸಿ  ಪದ್ಮನಾಭ  ಎಂಬುವವರು ಅವರ ಅಂಗಡಿಯ ಮುಂದಿನ  ಆವರಣದಲ್ಲಿ  ಸಾರ್ಜಜನಿಕ ಸ್ಥಳದಲ್ಲಿ  ಮದ್ಯವನ್ನು ಇಟ್ಟುಕೊಂಡು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ  ಮಾಡುತ್ತಿದ್ದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 18-06-2021 ರಂದು ಸೋಮವಾರಪೇಟೆ ತಾಲ್ಲೂಕು ಕೂಡಿಗೆ ಗ್ರಾಮದ ಮದಲಾಪುರ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ:

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೋಕಿನ ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟವನ್ನು ಪತ್ತೆಹಚ್ಚುವಲ್ಲಿ ಡಿಸಿಐಬಿ ತಂಡ ಯಶಸ್ವಿಯಾಗಿದೆ.

    ಖಚಿತ ಮಾಹಿತಿ ಮೇರೆ ದಿನಾಂಕ 17-06-2021 ರ ಸಂಜೆ ಕೊಡ್ಲಿಪೇಟೆ ಹೋಬಳಿ  ಹಂಡ್ಲಿ ಗ್ರಾಮದ ಬಿ.ಎಸ್ ಅನಂತಕುಮಾರ್ ರವರ ಗೋದಾಮಿಗೆ  ದಾಳಿ ನಡೆಸಿದ ಡಿಸಿಐಬಿ ಪೊಲೀಸರು  ಜೂಜಾಟ ವಾಡುತ್ತಿದ್ದ  9 ಜನರನ್ನು ವಶಕ್ಕೆ  ಪಡೆದಿರುತ್ತಾರೆ.

ಬಂಧಿತ ಆರೋಪಿಗಳ ವಿವರ: -

 1. ಟಿ.ಕೆ ಪುನಿತ್ ತಳಾರು ಗ್ರಾಮ
 2. ನಟೇಶ ಎಂ.ಪಿ ಮಣಗಲಿ ಗ್ರಾಮ
 3. ಕೋಮಲೇಶ್ @ ಕಿರಣ್ ಹಂಡ್ಲಿ ಗ್ರಾಮ ಕೊಡ್ಲಿಪೇಟೆ.
 4. ಶೇಷಗಿರಿ @ ಗಿರೀಶ್ , ತ್ಯಾಗರಾಜ ಕಾಲೋನಿ ಶನಿವಾರಸಂತೆ .
 5. ಪ್ರಮೋದ್ ಎಸ್.ಎಸ್ ಶಾಂತವೇರಿ ಗ್ರಾಮ ನಂದಿಗುಂದ ಅಂಚೆ ಸೋಮವಾರಪೇಟೆ.
 6. ಪಿ.ಲೊಕೇಶ್ ಗುಂಡುರಾವ್ ಬಡಾವಣೆ ಶನಿವಾರಸಂತೆ
 7. ಆರುಣ್ ಕೆ.ಜೆ ಕೂಗೂರು ಗ್ರಾಮ ಗೌಡಳ್ಳಿ ಅಂಚೆ ಸೋಮವಾರಪೇಟೆ.
 8. ಹೆಚ್.ಎಸ್ ಪರಮೇಶ ಗುಡುಗಳಲೆ ಶನಿವಾರಸಂತೆ.
 9. ಎಂ.ಪಿ ಕಿರಣ್ ತ್ಯಾಗರಾಜ ಕಾಲೋನಿ ಶನಿವಾರಸಂತೆ.

        ಬಂಧಿತರಿಂದ  ಜೂಜಾಟಕ್ಕೆ ಬಳಸಿದ  ಇಸ್ಪೀಟ್ ಎಲೆಗಳು , ನಗದು ರೂ 17910/-ರೂ ಮತ್ತು ಟೇಬಲ್ ಹಾಗೂ ಚೇರ್ ಗಳನ್ನು ವಶಪಡಿಸಿಕೊಂಡಿದ್ದು  ಅಕ್ರಮವಾಗಿ ಜೂಜಾಡುತ್ತಿದ್ದವರು ಹಾಗೂ ಗೋದಾಮು ಮಾಲೀಕ ಬಿ.ಎಸ್ ಅನಂತಕುಮಾರ್  ವಿರುದ್ದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

           ಡಿ.ಸಿ.ಆರ್.ಬಿ ಇನ್ಸ್ ಪೆಕ್ಟರ್  ಎನ್.ಕುಮಾರ್ ಆರಾಧ್ಯ ಸಿಬ್ಬಂದಿಗಳಾದ  ನಿರಂಜನ್, ಯೊಗೇಶ್ ಕುಮಾರ್,  ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಸುರೇಶ್, ಯು.ಎ ಮಹೇಶ್  ಹಾಗೂ ಶಶಿಕುಮಾರ್ ರವರು  ಕಾರ್ಯಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು  ಶ್ಲಾಘಿಸಲಾಗಿದೆ. ಕೊಡಗು ಜಿಲ್ಲೆಯ ಸಾರ್ವಜನಿಕರು  ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಕೋರಲಾಗಿದೆ.

 

ಇತ್ತೀಚಿನ ನವೀಕರಣ​ : 19-06-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080