ಅಭಿಪ್ರಾಯ / ಸಲಹೆಗಳು

ಅನಾಥ ಮಕ್ಕಳಿದ್ದಲ್ಲಿ ಮಾಹಿತಿ ನೀಡಲು ಮನವಿ.

ಕೋವಿಡ್ -19ನಿಂದ ಪೋಷಕರಿಬ್ಬರು ಮೃತಪಟ್ಟು ಅನಾಥರಾದ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಅವರ ರಕ್ಷಣೆ ಮತ್ತು ಪೋಷಣೆ ದೃಷ್ಟಿಯಿಂದ ಅಂತಹ ಮಕ್ಕಳಿರುವ ಮಾಹಿತಿಯನ್ನು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ, ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಆಥವಾ 112, 1098ಕ್ಕೆ ಕರೆ ಮಾಡಿ ತಿಳಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದು, ಅಂತಹ ಮಕ್ಕಳ ಮುಂದಿನ ಪಾಲನೆ, ಪೋಷಣೆ, ರಕ್ಷಣೆ ಮತ್ತು ಪುನರ್ ವಸತಿ ಕಲ್ಪಿಸುವ ಬಗ್ಗೆ ಅಂತಹ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ'' ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಈಗಾಗಲೇ ಕೋವಿಡ್ -19 ನಿಂದ ತನ್ನ ತಂದೆಯನ್ನು ಕಳೆದುಕೊಂಡ ನೊಂದ ಬಾಲಕಿ ಅವರಿಗೆ ಆಹಾರ ಸಾಮಾಗ್ರಿಯನ್ನು ನೀಡುವಂತೆ 1098ಕ್ಕೆ ಕರೆ ಮಾಡಿ ತಿಳಿಸಿದ್ದು ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಆರತಿ ಸೋಮಯ್ಯನವರು ಸೇರಿಕೊಂಡು ಅವರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿರುತ್ತಾರೆ.

ಅಂತೆಯೇ ಸೋಮವಾರಪೇಟೆ ತಾಲೋಕು ಕೂಡಿಗೆ ಗ್ರಾಮದಲ್ಲಿ ತನ್ನ ತಂದೆ ತಾಯಿಯಿಂದ ಪರಿತ್ಯಜಿಸಲ್ಪಟ್ಟು ಅಜ್ಜ ಅಜ್ಜಿಯೊಂದಿಗೆ ವಾಸವಿರುವ 7 ವರ್ಷದ ಬಾಲಕಿ ತಮಗೆ ಜೀವಿಸಲು ಕಷ್ಟವಾಗುತ್ತಿದ್ದು ತನ್ನ ಅಜ್ಜ ಅಜ್ಜಿಗೆ ಕೆಲಸ, ಸೂರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಇದ್ದು, ಆಹಾರ ಸಾಮಾಗಿಗಳ ಅವಶ್ಯಕತೆ ಇರುವುದಾಗಿ 1098ಕ್ಕೆ ಕರೆಮಾಡಿ ತಿಳಿಸಿದ್ದು, ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಅರತಿ ಸೋಮಯ್ಯನವರು ಸೇರಿಕೊಂಡು ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವು ನೀಡುರುತ್ತಾರೆ.

ಅಕ್ರಮ ಮರಳು ಸಂಗ್ರಹಣೆ  ಪತ್ತೆ.

ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಚಿಕ್ಕಕೊಡ್ಲಿ ಎಂಬ ಸ್ಥಳದಲ್ಲಿ ಹೇಮಾವತಿ ಹೊಳೆಯಲ್ಲಿ ಯಾಂತ್ರಿಕ ಬೋಟ್ ಬಳಸಿಕೊಂಡು ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ಧಳಕ್ಕೆ ಬಂದ ಮಾಹಿತಿಯಂತೆ, ಪೊಲೀಸ್ ನಿರೀಕ್ಷಕರಾದ ಕುಮಾರ್ ಆರಾಧ್ಯ ಮತ್ತು ಮತ್ತು ಸಿಬ್ಬಂದಿ ದಾಳಿ ಮಾಡಿ ಎರಡು ಟ್ರ್ಯಾಕ್ಟರ್, ಒಂದು ಬೋಟ್, ಒಂದು ದೊಡ್ಡ ಮೋಟಾರ್, ಮರಳು ತೆಗೆಯಲು ಬಳಸುವ ಪೈಪ್ ಗಳು ಹಾಗೂ ಬೋಟ್ ಬಳಸಿ ತೆಗೆದ ಮರಳುನ್ನು ವಶಪಡಿಸಿಕೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿಯನ್ನು ನೀಡಿ ಕಾನೂನು ರೀತಿಯ ಕ್ರಮ ಕೈಗೊಳಲೂ ವರದಿಯನ್ನು ಮತ್ತು ವಶ ಪಡಿಸಿಕೊಂಡ ಸ್ವತನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರ್ಗಯಿಸಲಾಯಿತು. ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ಸುಮಾರು 20 ಲಕ್ಷಗಳಾಗಿರುತ್ತದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಡಿಸಿಐಬಿ ಪೊಲೀಸ್ ನಿರೀಕ್ಷಕರ ಮತ್ತು ತಂಡದವರ ಕಾರ್ಯವನ್ನು ಪ್ರಶಂಸಿಸಲಾಗಿದೆ.

ಕಳವು ಪ್ರಕರಣ

                ದಿನಾಂಕ: 17-05-2021 ರಂದು ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಡಿ ಗ್ರೂಪ್‌ ನೌಕರರು  ಇರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ಯು.ಪಿ.ಎಸ್‌ ಬ್ಯಾಟರಿ ರಿಪೇರಿ ಮಾಡಲು ಕಛೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿ ₹. 24,000 ಬೆಲೆಬಾಳುವ ೨ ಯುಪಿಎಸ್‌ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ ಡೌನ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 18-05-2021 ರಂದು ವಿರಾಜಪೇಟೆ ತಾಲ್ಲೂಕು ಚಾಮಿಯಾಲ ಗ್ರಾಮದ ನಿವಾಸಿ ಕೆ.ಎಂ ರಜಾಕ್‌ ಎಂಬುವವರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ದಿನಸಿ ಅಂಗಡಿಯನ್ನು ತೆರೆದು ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುತ್ತಿದ್ದ ಮೇರೆ ವಿರಾಜಪೇಟೆ ಠಾಣೆ ಪಿಎಸ್‍ಐ ಸಿದ್ದಲಿಂಗ ಬಾನಸೆ ಮತ್ತು ಸಿಬ್ಬಂದಿಯವರು ಪರಿಶೀಲನೆ ಮಾಡಿ ನೀಡಿದ ವರದಿ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.

ಇತ್ತೀಚಿನ ನವೀಕರಣ​ : 19-05-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080