ಅಭಿಪ್ರಾಯ / ಸಲಹೆಗಳು

ಆನ್‍ ಲೈನ್‍ ವಂಚನೆ ಪ್ರಕರಣ

            ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ನಿವಾಸಿ ಜ್ಞಾನೇಶ್‍ ಎಂಬುವವರ ಮೊಬೈಲ್ ‍ಗೆ 8095649448, 9742250762, 9538812657, 9538584304, 8977299557, ನಂಬರ್‍ ಗಳಿಂದ  ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಲಾಭ ಗಳಿಸುವ ಬಗ್ಗೆ ತಿಳಿಸುತ್ತಿದ್ದರು.  ದಿನಾಂಕ: 16-02-2022 ರಂದು 7416456876  ನಂಬರ್‍ ನಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ZERODA ಷೇರು ಮಾರುಕಟ್ಟೆ ಕಂಪನಿ ಎಂಬುದಾಗಿ ಹೇಳಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದನು. ಇದನ್ನು ನಂಬಿ ಆತನು ತಿಳಿಸಿದ ಆತನ HDFC ಬ್ಯಾಂಕ್ ಖಾತೆ ಸಂಖ‍್ಯೆ 50100466705053 IFSC CODE  HDFC0002436 ಗೆ ಎರಡು ಹಂತದಲ್ಲಿ ಒಟ್ಟು₹. 50,000 ಹಣವನ್ನು ಸಂದಾಯ ಮಾಡಿರುತ್ತಾರೆ. ಪುನಃ ಕರೆ ಮಾಡಿದ ವ್ಯಕ್ತಿ ಇನ್ನೂ ಹೆಚ್ಚಿನ ಹಣ ಪಾವತಿ ಮಾಡುವಂತೆ ತಿಳಿಸಿದಾಗ ಅನುಮಾನ ಬಂದು ಹಣ ಪಾವತಿ ಮಾಡಿರುವುದಿಲ್ಲ. ನಂತರ ಕರೆ ಮಾಡಿದಾಗ ಕರೆ ಸ್ವೀಕರಿಸದೇ ವಂಚನೆ ಮಾಡುವ ಉದ್ದೇಶದಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ  ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ತೊಡಕುಂಟಾದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವುದು. ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್ ಪೇ, ಇತರೆ ಯು.ಪಿ.ಐ ಆಧಾರಿತ ಆನ್ ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್ ಗಳ ಕೋಡ್ ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡದಂತೆ ಸೂಚಸಲಾಗಿದೆ.

ಆನ್ ಲೈನ್ ವಂಚನೆ ಪ್ರಕರಣ

       ಫೇಸ್‍ ಬುಕ್‍  ಜಾಲತಾಣದ  Indian Army Vehicles ಎಂಬ ಪೇಜ್‍ ನಲ್ಲಿ  ವಾಹನ ಮಾರಾಟದ ಜಾಹೀರಾತು ನೋಡಿ ಖರೀದಿಸಲು ಹೋಗಿ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಪ್ರಕರಣ ವರದಿಯಾಗಿರುತ್ತದೆ.ದಿನಾಂಕ: 15-02-2022 ರಂದು ಸೋಮವಾರಪೇಟೆ ತಾಲ್ಲೂಕು ಕೂಗೇಕೊಡಿ ಗ್ರಾಮದ ನಿವಾಸಿ ಸುಮಂತ್‍  ಎಂಬುವವರು ಫೇಸ್‍ ಬುಕ್‍  ಜಾಲತಾಣದ  Indian Army Vehicles ಎಂಬ ಪೇಜ್‍ ನಲ್ಲಿ  ಸ್ಕಾರ್ಪಿಯೋ ವಾಹನ ಖರೀದಿಸಲು ಅದರಲ್ಲಿದ್ದ 9735602230  ಮೊಬೈಲ್‍ ನಂಬರ್‍ ಕರೆ ಮಾಡಿ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡಿ ₹. 1,10,000 ಬೆಲೆ ನಿಗದಿಪಡಿಸಿ ವಾಹನ ಖರೀದಿಸಲು ಒಪ್ಪಿಗೆ ನೀಡಿರುತ್ತಾರೆ. ನಂತರ ಆತನು ನೀಡಿದ ಹೆಚ್ಡಿಎಫ್‍ ಸಿ ಬ್ಯಾಂಕ್‍ ಖಾತೆ ಸಂಖ‍್ಯೆ ಗ50100491278110 IFSC CODE HDFC0001437 ಗೆ ಎರಡು ಹಂತಗಳಲ್ಲಿ ನಿಗದಿಪಡಿಸಿದ ಮೊತ್ತವನ್ನು ಪಾವತಿಸಿರುತ್ತಾರೆ. ಪುನಃ ಕರೆ ಮಾಡಿದ ವ್ಯಕ್ತಿ 35,000 ಹಣ ನೀಡಲು ತಿಳಿಸಿದ್ದು ಈ ಮೊತ್ತವನ್ನು ಸಹ ಪಾವತಿ ಮಾಡಿರುತ್ತಾರೆ . ಅಪರಿಚಿತ ವ್ಯಕ್ತಿ ಪುನಃ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಕೇಳಿದಾಗ ವಂಚನೆಗೊಳಗಾಗಿರುವುದಾಗ ತಿಳಿದು ಆನ್‍ ಲೈನ್‍ ವಾಹನ ಖರೀದಿ ಮಾಡುವಾಗ ಅಪರಿಚಿತ  ವ್ಯಕ್ತಿಯೊಬ್ಬ ಮೋಸ ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ  ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಎಲೆಕ್ಟ್ರಾನಿಕ್ ಅಥವಾ ಗೃಹೋಪಯೋಗಿ ವಸ್ತುಗಳು ಮತ್ತು ಉಪಯೋಗಿಸಿದ ವಾಹನ ಖರೀದಿಸಲು ಅಥವಾ ಮಾರಾಟ ಮಾಡಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಅಥವಾ ಯಾವುದೇ ವಸ್ತಗಳನ್ನು ಖರೀದಿಸುವಾಗ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ, ವಸ್ತು ಅಥವಾ ವಾಹನಗಳನ್ನು, ದಾಖಲಾತಿಗಳನ್ನು ನೇರವಾಗಿ ನೋಡಿ ಪರಿಶೀಲಿಸಿ ನಂತರ ಹಣ ಪಾವತಿಸಿ ಖರೀದಿಸಲು ಸೂಚಿಸಲಾಗಿದೆ.ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಮತ್ತು ಯಾವುದೇ ವಸ್ತಗಳನ್ನು ಖರೀದಿಸುವಾಗ ಕಂಪನಿಗಳ ಬಗ್ಗೆ ಅಥವಾ ಮಾರಾಟ ಮಾಡುವಾಗ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿಕೊಳ್ಳುವುದು. ಆನ್‍ ಲೈನ್ ಹಣಕಾಸು ವರ್ಗಾವಣೆ , ವ್ಯವಹಾರಗಳಿಗೆ ತಮ್ಮ ಬ್ಯಾಂಕ್‍ಗಳ  ಅಧಿಕೃತ ಅಪ್ಲಿಕೇಶನ್‍ ಗಳನ್ನು ಬಳಸಲು ಕೋರಲಾಗಿದೆ. ಯಾವುದೇ ಆನ್‍ಲೈನ್‍ ವ್ಯವಹಾರಗಳ ಸಂದರ್ಭದಲ್ಲಿ ಖರೀದಿ ಅಥವಾ ಮಾರಾಟಕ್ಕೆ ಅವಶ್ಯಕವಿರುವುದು ಹಣದ ವರ್ಗಾವಣೆ ವಿನಃ ವೈಯಕ್ತಿಕ ಮಾಹಿತಿಗಳಲ್ಲ. ಸಾರ್ವಜನಿಕರು  ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಒಟಿಪಿ ಸಂಖ‍್ಯೆ, ಆಧಾರ್ ಸಂಖ‍್ಯೆ, ಪ್ಯಾನ್ ಸಂಖ್ಯೆ,, ಬ್ಯಾಂಕ್‍ ಖಾತೆಗಳ ಮಾಹಿತಿಗಳನ್ನು ಆನ್‍ಲೈನ್‍ ವ್ಯವಹರಣೆಯ ಸಂದರ್ಭದಲ್ಲಿ ನೀಡುವ ಅವಶ್ಯಕತೆ ಇರುವುದಿಲ್ಲ. ಯಾವುದೇ ರೀತಿಯ ವ್ಯವಹಾರಕ್ಕೆ ಇಂತಹ ವೈಯಕ್ತಿಕ ಮಾಹಿತಿಗಳನ್ನು ಅಪೇಕ್ಷಿಸಿದ ಸಂದರ್ಭದಲ್ಲಿ ದೂರವಾಣಿ ಅಥವಾ ಆನ್‍ಲೈನ್‍ ಮುಖಾಂತರ ಮಾಹಿತಿಗಳನ್ನು ನೀಡದೆ, ಖುದ್ದು ಸಂಬಂದಪಟ್ಟ (ಸರ್ಕಾರಿ/ಖಾಸಗಿ) ಸಂಸ್ಥೆಗಳಿಗೆ ಭೇಟಿ ನೀಡಿ ನೈಜತೆ ಪರಿಶೀಲಿಸಿಕೊಂಡು ವ್ಯವಹರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ರಸ್ತೆ ಅಪಘಾತ ಪ್ರಕರಣ ಪಾದಚಾರಿಗೆ ಗಾಯ.

                ದಿನಾಂಕ: 18-02-2022 ರಂದು ಪೊನ್ನಂಪೇಟೆ ತಾಲ್ಲೂಕು ಬಾಳೆಗೆ ಗ್ರಾಮದ ಕೈನಾಟಿ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎಂ-9122 ರ ಕಾರನ್ನು ಚಾಲಕ ಸುಭಾಷ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೇಶ್‍ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 19-02-2022 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080