ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಮಾರಾಟಗಾರರ ಬಂಧನ

           ದಿನಾಂಕ 17-12-2020 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಜಗದೀಶ್ ಧೂಳಶೆಟ್ಟಿ ರವರಿಗೆ ಅಕ್ರಮ ಗಾಂಜಾ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಉಪ ವಿಭಾಗದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ವಿರಾಜಪೇಟೆ ನಗರ ಪೋಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಪರಾಧ ಪತ್ತೆ ಹಚ್ಚಿ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ 50,000/-ರೂಪಾಯಿ ಮೌಲ್ಯದ 1 ಕೆ.ಜಿ 487 ಗ್ರಾಂ ಗಾಂಜ ಮತ್ತು ಕೃತ್ಯಕ್ಕೆ ಉಪಯೋಗಿಸಿದ 1 ಮೋಟಾರ್ ಬೈಕು ಮತ್ತು ಒಂದು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಹೆಸರು ಮತ್ತು ವಿಳಾಸ

1) ಎ.ಎಸ್.ಸಾಧಿಕ್ ತಂದೆ ಏಜಾಜ್, ಪ್ರಾಯ 31 ವರ್ಷ,ಮೆಕಾನಿಕ್ ಕೆಲಸ,ವಾಸ ಸೆಲ್ವಾನಗರ,ವಿರಾಜಪೇಟೆ,

2) ಅಬ್ದುಲ್ ಜಮೀಲ್ @ ಬಬ್ಲು ತಂದೆ ಪೌತಿ ಬಾಷ, ಪ್ರಾಯ 26 ವರ್ಷ,ಕೂಲಿ ಕೆಲಸ,ವಾಸ ಸುಭಾಷ್ ನಗರ, ವಿರಾಜಪೇಟೆ,

3)ಕೆ.ಇ.ಕಬೀರ್ ತಂದೆ ಇಬ್ರಾಹಿಂ,ಪ್ರಾಯ 27 ವರ್ಷ,ಕೂಲಿ ಕೆಲಸ,ವಾಸ ಕಲ್ಲುಬಾಣೆ,ಆರ್ಜಿ ಗ್ರಾಮ, ವಿರಾಜಪೇಟೆ,

4) ಮೇಲ್ವಿನ್ ಅಂತೋಣಿ ತಂದೆ ಪೌತಿ ಅಂತೋಣಿ,ಪ್ರಾಯ 22 ವರ್ಷ,ಅಲ್ಯೂಮಿನಿಯಂ ಪ್ಯಾಬ್ರಿಕೇಷನ್ ಕೆಲಸ,ವಾಸ ಮೀನುಪೇಟೆ,ವಿರಾಜಪೇಟೆ,

5) ಎಂ.ಎ.ಇಮ್ರಾನ್ @ ಸೋನು ತಂದೆ ಪೌತಿ ಅಬ್ಸಲ್,ಪ್ರಾಯ 22 ವರ್ಷ,ಡೆಕೋರೇಷನ್ ಕೆಲಸ,ವಾಸ ವಿಜಯ ನಗರ,ವಿರಾಜಪೇಟೆ.

          ವಿರಾಜಪೇಟೆ ಉಪವಿಭಾಗದ ಡಿವೈಎಸ್.ಪಿ ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ವೃತ್ತ  ನಿರೀಕ್ಷಕರಾದ ಕ್ಯಾತೇಗೌಡ ರವರ ನೇತೃತ್ವದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಜಗದೀಶ್ ಧೂಳಶೆಟ್ಟಿ, ಸಿಬ್ಬಂದಿಗಳಾದ ASI ಎಂ.ಎಸ್. ಸುಬ್ರಮಣಿ, ASI ಫ್ರಾನ್ಸಿಸ್, ಎಂ.ಡಿ.ಮನು, ಎ.ಪಿ. ವಿಶ್ವನಾಥ, ರಂಜಿತ್, ರಾಮಪ್ಪ, ಟಿ.ಎಸ್. ಗಿರೀಶ, ಚಂದ್ರಶೇಖರ, ಎನ್.ಎಸ್. ಲೋಕೇಶ್, ಪೂವಯ್ಯ, ರಾಜೇಶ್ ಮತ್ತು ಗೀರೀಶ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪೊಲೀಸರ ಕಾರ್ಯವನ್ನು ಶ್ಲಾಘಿಸಲಾಗಿದೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 17-12-2020 ರಂದು ಸೋಮವಾರಪೇಟೆ ತಾಲ್ಲೂಕು ಮಲ್ಲೇನಹಳ್ಳಿ  ಗ್ರಾಮದ  ನಿವಾಸಿ ಮಾದೇಶ ಎಂಬುವವರು ಅವರ ಅಂಗಡಿಯಲ್ಲಿ ಅಕ್ರಮವಾಗಿ  ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾತರ ಠಾಣೆ ಪಿಎಸ್‍ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 17-12-2020 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ನೇತ್ರ ಮತ್ತು ದೀಪಕ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಸಂತೋಷ ಮತ್ತು ಅವ್ವಯ್ಯಮ್ಮ ಎಂಬುವವರು ವೈಯಕ್ತಿಕ ಕಾರಣದಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

                ದಿನಾಂಕ; 16-12-2020 ರಂದು  ಸೋಮವಾರಪೇಟೆ ತಾಲ್ಲೂಕು ಕೈಸರವಳ್ಳಿ ಗ್ರಾಮದ ನಿವಾಸಿ ವಿಶ್ವನಾಥ ಎಂಬುವವರು ಅದೇ ಗ್ರಾಮದ ನಿವಾಸಿ ಕುಮಾರ್‍ ಎಂಬುವವರಿಗೆ ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 18-12-2020 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080