ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ ಪ್ರಕರಣ:

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೋಕಿನ ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟವನ್ನು ಪತ್ತೆಹಚ್ಚುವಲ್ಲಿ ಡಿಸಿಐಬಿ ತಂಡ ಯಶಸ್ವಿಯಾಗಿದೆ.

    ಖಚಿತ ಮಾಹಿತಿ ಮೇರೆ ದಿನಾಂಕ 17-06-2021 ರ ಸಂಜೆ ಕೊಡ್ಲಿಪೇಟೆ ಹೋಬಳಿ  ಹಂಡ್ಲಿ ಗ್ರಾಮದ ಬಿ.ಎಸ್ ಅನಂತಕುಮಾರ್ ರವರ ಗೋದಾಮಿಗೆ  ದಾಳಿ ನಡೆಸಿದ ಡಿಸಿಐಬಿ ಪೊಲೀಸರು  ಜೂಜಾಟ ವಾಡುತ್ತಿದ್ದ  9 ಜನರನ್ನು ವಶಕ್ಕೆ  ಪಡೆದಿರುತ್ತಾರೆ.

ಬಂಧಿತ ಆರೋಪಿಗಳ ವಿವರ: -

  1. ಟಿ.ಕೆ ಪುನಿತ್ ತಂದೆ ಕೃಷ್ಣೇಗೌಡ , ಪ್ರಾಯ 31 ವರ್ಷ , ಟಾರ್ನ್ಸ್ ಪೋರ್ಟ ಮ್ಯಾನೇಜರ್ ಕೆಲಸ ಬೆಂಗಳೂರು .ಹಾಲಿ ವಾಸ ತಳಾರು ಗ್ರಾಮ ಹಂಡ್ಲಿ ಅಂಚೆ ಕೊಡ್ಲಿಪೇಟೆ.
  2. ನಟೇಶ ಎಂ.ಪಿ ತಂದೆ ಪುಪ್ಪಣ್ಣ , ಪ್ರಾಯ 48 ವರ್ಷ, ವ್ಯವಸಾಯ  ವೃತ್ತಿ , ಮಣಗಲಿ ಗ್ರಾಮ ಹಂಡ್ಲಿ ಅಂಚೆ ಕೊಡ್ಲಿಪೇಟೆ.
  3. ಕೋಮಲೇಶ್ @ ಕಿರಣ್ ,ತಂದೆ ಮಲ್ಲಿಕಾರ್ಜುನ , ಪ್ರಾಯ 42 ವರ್ಷ , ವ್ಯವಸಾಯ ವೃತ್ತಿ , ವಾಸ ಹಂಡ್ಲಿ ಗ್ರಾಮ ಕೊಡ್ಲಿಪೇಟೆ.
  4. ಶೇಷಗಿರಿ @ ಗಿರೀಶ್ , ತಂದೆ ನಾಗರಾಜು. ಪ್ರಾಯ 48ವರ್ಷ , ವ್ಯವಸಾಯ ವೃತ್ತಿ , ತ್ಯಾಗರಾಜ ಕಾಲೋನಿ ಶನಿವಾರಸಂತೆ .
  5. ಪ್ರಮೋದ್ ಎಸ್.ಎಸ್ ತಂದೆ ಸಿದ್ದಪ್ಪ ,ಪ್ರಾಯ 47ವರ್ಷ ಎಸ್ಟೇಟ್ ಮಾಲೀಕ , ವಾಸ ಶಾಂತವೇರಿ ಗ್ರಾಮ ನಂದಿಗುಂದ ಅಂಚೆ ಸೋಮವಾರಪೇಟೆ.
  6. ಪಿ.ಲೊಕೇಶ್ , ತಂದೆ ಲೇಟ್ ಪಂಚಾಕ್ಷರಿ , ಪ್ರಾಯ 27ವರ್ಷ , ಚಾಲಕ ವೃತ್ತಿ , ವಾಸ ಗುಂಡುರಾವ್ ಬಡಾವಣೆ ಶನಿವಾರಸಂತೆ
  7. ಆರುಣ್ ಕೆ.ಜೆ ತಂದೆ ಜಯಪ್ಪ, ಪ್ರಾಯ 31ವರ್ಷ, ವ್ಯವಸಾಯ ವೃತ್ತಿ , ವಾಸ ಕೂಗೂರು ಗ್ರಾಮ ಗೌಡಳ್ಳಿ ಅಂಚೆ ಸೋಮವಾರಪೇಟೆ.
  8. ಹೆಚ್.ಎಸ್ ಪರಮೇಶ ತಂದೆ ಲೇಟ್ ಸಿದ್ದಪ್ಪ, ಪ್ರಾಯ 42ವರ್ಷ , ವ್ಯವಸಾಯ ವೃತ್ತಿ, ವಾಸ ಗುಡುಗಳಲೆ ಶನಿವಾರಸಂತೆ.
  9. ಎಂ.ಪಿ ಕಿರಣ್ , ತಂದೆ ಲೇಟ್ ಸಿದ್ದಪ್ಪ, ಪ್ರಾಯ 42 ವರ್ಷ ವ್ಯವಸಾಯ ವೃತ್ತಿ, ವಾಸ ತ್ಯಾಗರಾಜ ಕಾಲೋನಿ ಶನಿವಾರಸಂತೆ.

        ಬಂಧಿತರಿಂದ  ಜೂಜಾಟಕ್ಕೆ ಬಳಸಿದ  ಇಸ್ಪೀಟ್ ಎಲೆಗಳು , ನಗದು ರೂ 17910/-ರೂ ಮತ್ತು ಟೇಬಲ್ ಹಾಗೂ ಚೇರ್ ಗಳನ್ನು ವಶಪಡಿಸಿಕೊಂಡಿದ್ದು  ಅಕ್ರಮವಾಗಿ ಜೂಜಾಡುತ್ತಿದ್ದವರು ಹಾಗೂ ಗೋದಾಮು ಮಾಲೀಕ ಬಿ.ಎಸ್ ಅನಂತಕುಮಾರ್  ವಿರುದ್ದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

           ಡಿ.ಸಿ.ಆರ್.ಬಿ ಇನ್ಸ್ ಪೆಕ್ಟರ್  ಎನ್.ಕುಮಾರ್ ಆರಾಧ್ಯ ಸಿಬ್ಬಂದಿಗಳಾದ  ನಿರಂಜನ್, ಯೊಗೇಶ್ ಕುಮಾರ್,  ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಸುರೇಶ್, ಯು.ಎ ಮಹೇಶ್  ಹಾಗೂ ಶಶಿಕುಮಾರ್ ರವರು  ಕಾರ್ಯಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು  ಶ್ಲಾಘಿಸಲಾಗಿದೆ. ಕೊಡಗು ಜಿಲ್ಲೆಯ ಸಾರ್ವಜನಿಕರು  ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಕೋರಲಾಗಿದೆ.

ಹಲ್ಲೆ ಪ್ರಕರಣ

            ದಿನಾಂಕ:  17-06-2021 ರಂದು ಸೋಮವಾರಪೇಟೆ ತಾಲ್ಲೂಕು ಹಾನಗಲ್ಲು ಗ್ರಾಮದ ನಿವಾಸಿ ಸಂಪತ್‌ ಕುಮಾರ್‌ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರಮೇಶ್‌ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಶ್ಲೀಲ ದೃಶ್ಯಾವಳಿ ವಿನಿಮಯ ಪ್ರಕರಣ

            ಅಪ್ರಾಪ್ತ ವಯಸ್ಕರನ್ನು ಪ್ರಲೋಭನೆಗೆ ಒಳಪಡಿಸಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿದ ದೃಶ್ಯಾವಳಿಗಳನ್ನು ವಶದಲ್ಲಿಟ್ಟಿಕೊಂಡು ಆನ್‌ಲೈನ್‌ ಮೂಲಕ ವಿನಿಮಯ, ಪ್ರಸಾರ, ಮಾರಾಟ ಹಾಗೂ ವಾಣಿಜ್ಯ ವ್ಯವಹಾರಗಳಿಗೆ  ಬಳಸಿಕೊಂಡಿರುವ ಬಗ್ಗೆ ರಾಜ್ಯ ಸಿಐಡಿ ವಿಭಾಗದ ಮೂಲಕ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗವು ಕಳುಹಿಸಿದ ಮಾಹಿತಿಯನ್ನು ಆದರಿಸಿ ಕೊಡಗು ಸೈಬರ್‌ ಅಪರಾಧ ಠಾಣೆ ಪೊಲೀಸರು ಪರಿಶೀಲಿಸಿ ವಿರಾಜಪೇಟೆ ನಗರದ ವಿಜಯನಗರ ನಿವಾಸಿ ಅಬ್ದುರ್‌ ರೆಹಮಾನ್‌ ಮತ್ತು ಕುಶಾಲನಗರದ ತಾವರೆಕೆರೆ ನಿವಾಸಿ ಅಬ್ದುಲ್‌ ಸಲಾಂ ಎಂಬುವವರ ವಿರುದ್ದ ದಿನಾಂಕ: 17-06-2021 ರಂದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

            ಅಪ್ರಾಪ್ತರ ಮೇಲಿನ ಸಹಮತಿಯ ಲೈಂಗಿಕ ದೌರ್ಜನ್ಯವೂ ಕೂಡ  ಘೋರ ಅಪರಾಧವಾಗಿದ್ದು ಇಂತಹ ಕೃತ್ಯಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಿದ ದೃಶ್ಯಗಳನ್ನು ಡಿಜಿಟಲ್‌ ಅಥವಾ ಇತರೆ ರೂಪದಲ್ಲಿ ಇಟ್ಟುಕೊಳ್ಳುವುದು, ಇಂತಹ ದೃಶ್ಯಗಳ ಆನ್‌ಲೈನ್‌ ವಿನಿಮಯ, ಪ್ರಸಾರ, ಮಾರಾಟ ಹಾಗೂ ವಾಣಿಜ್ಯ ವ್ಯವಹಾರಗಳಿಗೆ  ಬಳಸಿಕೊಳ್ಳುವುದು ಘೋರ ಅಪರಾಧವಾಗಿರುತ್ತದೆ. ಇಂತಹ ಕೃತ್ಯಗಳ ಮೇಲೆ ಸೈಬರ್‌ ಅಪರಾಧ ಪೊಲೀಸರು ನಿಗಾವಹಿಸಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು ಸಾರ್ವಜನಿಕರು ಇಂತಹ ಅಪರಾಧಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಇಂತಹ ಕೃತ್ಯಗಳು ಕಂಡುಬಂದಲ್ಲಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

 

ಇತ್ತೀಚಿನ ನವೀಕರಣ​ : 18-06-2021 03:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ