ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

            ಸೋಮವಾರಪೇಟೆ ತಾಲ್ಲೂಕು ಮಣಗಲಿ ಗ್ರಾಮದ ನಿವಾಸಿ ಜಾನಕಿ ಎಂಬುವವರು 2021 ನೇ ಸೆಪ್ಟೆಂಬರ್‍ ತಿಂಗಳಿನಲ್ಲಿ ಅವರ ಮನೆಗೆ ಬೀಗ ಹಾಕಿಕೊಂಡು ಹೊಸಪೇಟೆ ಯಲ್ಲಿರುವ ಅವರ ಮಗನ ಮನೆಗೆ ಹೋಗಿ ವಾಪಸ್ಸು ಡಿಸೆಂಬರ್‍ ತಿಂಗಳಿನಲ್ಲಿ ವಾಪಾಸ್ಸು ಮನೆಗೆ ಬಂದು ನೋಡಿದಾಗ ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ₹. 1,20,000 ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 17-1-2022 ರಂದು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

            ದಿನಾಂಕ: 17-01-2022 ರಂದು ಮಡಿಕೇರಿ ತಾಲ್ಲೂಕು ತಲಕಾವೇರಿ ಗ್ರಾಮದಲ್ಲಿರುವ ಮಂಗಳೂರು ನಿವಾಸಿ ಮುರಳೀಧರ ಎಂಬುವವರ ಮನೆಯ ಒಳಗೆ ಇಟ್ಟಿದ್ದ ₹. 30,000 ಮೌಲ್ಯದ ತಲಾ 50 ಕೆ.ಜಿ ತೂಕದ 10 ಚೀಲ ಕಾಫಿಯನ್ನು ಯಾರೋ ಕಳ್ಳರು ಪಿಕ್‍ ಅಪ್ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತದ ನಂತರ ಬೆದರಿಸಿ ಸುಲಿಗೆಗೆ ಯತ್ನ ಪ್ರಕರಣ

            ದಿನಾಂಕ: 09-01-2022 ರಂದು ಮಹಾರಾಷ್ಟ್ರದ ಮುಂಬೈ ನಿವಾಸಿ ಸುನಿಲ್‍ ಯಾದವ್‍ ಎಂಬುವವರು ಅವರ ಪತ್ನಿಯೊಂದಿಗೆ ಎಂಹೆಚ್‍-06-ಬಿಯು-4022 ರ ಕ್ರೆಟಾ ಕಾರಿನಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದು ಕುಶಾಲನಗರದ ನೆಕ್ಸ್ಟ್‍ ಸ್ಟೇ ಎಕ್ಸೆಲೆನ್ಸಿ ರೆಸಾರ್ಟಿನಲ್ಲಿ ತಂಗಿದ್ದರು. ದಿನಾಂಕ: 11-01-2022 ರಂದು ನಾಗರಹೊಳೆ ಪ್ರವಾಸ ಮುಗಿಸಿ ವಾಪಾಸ್ಸು ಕುಶಾಲಗರಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ದುಬಾರೆ ಬಳಿ ಮುಖ್ಯ ರಸ್ತೆಯಲ್ಲಿ ಕಾರಿನ ಮುಂಭಾಗದ ಚಕ್ರ ಸ್ಪೋಟಗೊಂಡು ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಪಿ-6476 ರ ಪಿಕ್‍ ಅಪ್‍ ವಾಹನಕ್ಕೆ ಡಿಕ್ಕಿಯಾಗಿ ವಾಹನ ಜಖಂಗೊಂಡು ಮಹಮ್ಮದ್ ಶಿಯಾಬ್ ಎಂಬುವವರಿಗೆ ಕುತ್ತಿಗೆ ನೋವಾಗಿರುತ್ತದೆ. ಅಪಘಾತದ ನಂತರ ಸುನಿಲ್‍ ಯಾದವ್‍ ರವರು ಅಪಘಾತದ ಮಾಹಿತಿಯನ್ನು ಪೊಲೀಸ್‍ ಠಾಣೆಗೆ ತಿಳಿಸುವುದನ್ನು ತಡೆದು ರಾಜಿ ಮಾಡಿಕೊಳ್ಳೂವ ನೆಪದಲ್ಲಿ ಅಲ್ಲಿಗೆ ಸ್ನೇಹಿತರನ್ನು ಕರೆದು ಬಲವಂತವಾಗಿ ಬೇರೆ ಕರೊಂದರಲ್ಲಿ ಕರೆದುಕೊಂಡು ಹೋಗಿ ₹. 2 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟು ಬಲವಂತವಾಗಿ ರೆಸಾರ್ಟ್ ನಲ್ಲಿ ಇರುವಂತೆ ಮಾಡಿರುತ್ತಾರೆ. ನಂತರ ಯಾವುದೋ ಒಂದು ಕ್ಯಾಬ್‍ ಬುಕ್‍ ಮಾಡಿಕೊಂಡು ರೆಸಾರ್ಟ ನಿಂದ ತಪ್ಪಿಸಿಕೊಂಡು ಮೈಸೂರಿಗೆ ಹೋಗಿರುತ್ತಾರೆ. ಜೊತೆಗೆ ಕುಶಾಲನಗರ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿ ಎಂದು ಹೇಳಿದ ವ್ಯಕ್ತಿಯೊಬ್ಬ ರಾಜಿ ಮಾಡಿಕೊಳ್ಳದಿದ್ದರೆ ಹಿಟ್ ಅಂಡ್ ರನ್‍ ಕೇಸ್‍ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು. ಈ ಎಲ್ಲಾ ಕೃತ್ಯಗಳಲ್ಲಿ ಮಹಮ್ಮದ್ ಶರೀಫ‍್, ಶಿಯಾಬ್,ಅಭಿಲಾಶ್, ಆಲಿ. ಮೊಯ್ದು, ಶರತ್, ಅಂತೋಣಿ, ಮಣಿ ಎಂಬುವವರು ಭಾಗಿಯಾಗಿದ್ದು ಈ ಬಗ್ಗೆ ದಿನಾಂಕ 17-01-2022 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

            ರಸ್ತೆ ಅಪಘಾತ ಸಂಭವಿಸಿದ ಪ್ರಕರಣಗಳಲ್ಲಿ ಅಥವಾ ಅನಿರೀಕ್ಷಿತವಾಗಿ ಯಾವುದೇ  ಕಾನೂನು ರೀತ್ಯಾ ಅಪರಾಧವಾಗುವಂತಹ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಾರ್ವಜನಿಕರು ರಾತ್ರಿ ವೇಳೆ ಇನ್ನಿತರ ಯಾವುದೇ ರೀತಿಯ ತೊಂದರೆಗಳಿಗೆ ಒಳಗಾದಲ್ಲಿ ಯಾರೂ ಸಹಾ ಸ್ಥಳದಲ್ಲಿಯೇ ಸ್ವಯಂ ನಿರ್ಧಾರಗಳನ್ನು ಕೈಗೊಳ‍್ಳದೇ ಕೂಡಲೇ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ (ERSS)  ದೂರವಾಣಿ ಸಂಖ್ಯೆ 112 ಗೆ ಕರೆ ಮಾಡಿ ಪೊಲೀಸ್‍ ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ. ಇಂತಹ ಘಟನೆಗಳ ಬಗ್ಗೆ ಕೂಡಲೇ ಸಮೀಪದ ಪೊಲೀಸ್‍ ಠಾಣೆಗೆ ಮಾಹಿತಿ ನೀಡಿ ಯಾವುದೇ ಸಮಸ್ಯೆಗಳನ್ನು ಕಾನೂನು ರೀತ್ಯಾ ಪರಿಹರಿಸಿಕೊಳ್ಳಬೇಕೆಂದು ಕೋರಲಾಗಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 17-01-2022 ರಂದು ಸೋಮವಾರಪೇಟೆ ತಾಲ್ಲೂಕು ಬಿಳಿಗೇರಿ ಗ್ರಾಮದ ನಂದಿಮೊಟ್ಟೆ ನಿವಾಸಿ  ಮುತ್ತಣ್ಣ  ಎಂಬುವವರು ಅವರ ಮನೆಯಲ್ಲಿ   ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಗ್ರಾಮಾಂತರ  ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 18-01-2022 04:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080