ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

                ದಿನಾಂಕ: 16-12-2021 ರಂದು ಪೊನ್ನಂಪೇಟೆ ತಾಲ್ಲೂಕು ಬೆಮ್ಮತ್ತಿ ಧನುಗಾಲ ಗ್ರಾಮದ ನಿವಾಸಿ ಲೋಕೇಶ್‌ ಎಂಬುವವರನ್ನು ಅದೇ ಗ್ರಾಮದ ನಿವಾಸಿ ಜೀವನ್‌ ಎಂಬುವವರು ಹಳೆ ವೈಷಮ್ಯದಿಂದ ದಾರಿ ತಡೆದು ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 16-12-2021 ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ನಿವಾಸಿ ಜೀವನ್‌ ಎಂಬುವವರನ್ನು ಬೆಮ್ಮತ್ತಿ ಧನುಗಾಲ ಗ್ರಾಮದ ನಿವಾಸಿ ಲೋಕೇಶ್‌ ಎಂಬುವವರು ಹಳೆ ವೈಷಮ್ಯದಿಂದ ದಾರಿ ತಡೆದು ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ವಾಗಿ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು.

                ದಿನಾಂಕ: 16-12-2021 ರಂದು ಪೊನ್ನಂಪೇಟೆ ತಾಲ್ಲೂಕು ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ದೇವಯ್ಯ ಎಂಬುವವರು  ಅದೇ ಗ್ರಾಮದ ಮೀರ ಎಂಬುವವರ ಅಡಿಕೆ ತೋಟದಲ್ಲಿ ಕಬ್ಬಿಣದ ರಾಡಿಗೆ ಅಳವಡಿಸಿದ್ದ ಕತ್ತಿಯಿಂದ ಅಡಿಕೆ ಕುಯ್ಯುತ್ತಿರುವಾಗ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್‌ ತಂತಿಗೆ ಕೈಯಲ್ಲಿದ್ದ ರಾಡು ತಾಗಿ ವಿದ್ಯುತ್‌ ಸ್ಪರ್ಷಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮೃತರ ಪೋಷಕರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯ ಬಹಳಷ್ಟು ಕಾಫಿ ಹಾಗೂ ಇನ್ನಿತರ ತೋಟಗಳಲ್ಲಿ ವಿದ್ಯುತ್‍ ತಂತಿ ಹಾದುಹೋಗಿದ್ದು ತೋಟಗಳಲ್ಲಿ ಕೆಲಸ ನಿರ್ವಹಿಸುವಾಗ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಿದ್ದು  ಕಾರ್ಮಿಕರು ಕೆಲಸ ನಿರ್ವಹಿಸುವಾಗ ಮಾಡುವ ಸಣ್ಣ ಅಜಾಗರೂಕತೆಯಿಂದ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.  ದಿನಾಂಕ: 15-12-2021 ರಂದು ಸಹಾ ಯು.ಚೆಂಬು  ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕಾಳುಮೆಣಸು ಕುಯ್ಯುವಾಗ ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ಅಲ್ಯುಮಿನಿಯಂ ಏಣಿ ತಾಗಿ ಮೃತಪಟ್ಟಿರುತ್ತಾರೆ. ಜಿಲ್ಲೆಯ ತೋಟಗಳ ಮಾಲೀಕರು ಕಾರ್ಮಿಕರಿಂದ ಕೆಲಸ ಮಾಡಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಕೋರಿದೆ. ವಿದ್ಯುತ್ ತಂತಿ ಹಾದುಹೋಗಿರುವ ಸ್ಥಳಗಳಲ್ಲಿ ಕೆಲಸಗಾರರು ಕೆಲಸ ಮಾಡುವ ಸಮಯದಲ್ಲಿ ಉದ್ದನೆಯ ಲೋಹದ ಸಲಕರಣೆಗಳ ಬದಲಿಗೆ ಬಿದಿರಿನ ಗಳ, ಬಿದಿರಿನ ಏಣಿಗಳನ್ನು ಬಳಸುವುದು ಹಾಗೂ ಏಣಿ ಉಪಯೋಗಿಸುವಾಗ ರಬ್ಬರ್ ಕೈಗವಸು ( ರಬ್ಬರ್ ಗ್ಲೌಸ್) ಗಳನ್ನು ಹಾಗೂ ರಬ್ಬರ್ ಪಾದರಕ್ಷೆ (ರಬ್ಬರ್ ಶೂ)ಗಳನ್ನು ಧರಿಸುವುದು, ವಿದ್ಯುತ್‌ ತಂತಿ ಹಾದುಹೋಗಿರುವ ಸ್ಥಳದ ಬಳಿ ಮರ ಹತ್ತಿ ಕೆಲಸ ಮಾಡುವಾಗ ಸಾಧ್ಯವಾದರೆ ವಿದ್ಯುತ್‍ ನಿಗಮದ ಸಂಬಂದಪಟ್ಟ ಅಧಿಕಾರಿಯವರಿಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ವಿದ್ಯುತ್‍ ಸಂಪರ್ಕ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳುವುದು. ತೋಟಗಳಲ್ಲಿ ವಿದ್ಯುತ್‍ ಕಂಬಗಳ ಬಳಿ ಯಾವುದೇ ಹಸಿರು ಬಳ್ಳಿಗಳು, ಮರಗಿಡಗಳು ಬೆಳೆಯುವುದನ್ನು ತಡೆಯುವುದು ಹಾಗೂ ಸಂಬಂದಪಟ್ಟ ವಿದ್ಯುತ್‍ ನಿಗಮದ ಕಛೇರಿಗೆ ಮಾಹಿತಿ ನೀಡಿ ವಿದ್ಯುತ್‍ ಕಂಬಗಳ ಸಮೀಪದ ಮರಗಳ  ರೆಂಬೆಕೊಂಬೆಗಳು ವಿದ್ಯುತ್‍ ತಂತಿಗೆ ತಾಗದಂತೆ ತೆರವುಗೊಳಿಸುವ ಕ್ರಮ ಕೈಗೊಳ್ಳಲು ಕೋರಿದೆ.

ಇತ್ತೀಚಿನ ನವೀಕರಣ​ : 17-12-2021 05:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080