ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ ಪತ್ತೆ. ಆರೋಪಿಗಳ ಬಂಧನ.

            ದಿನಾಂಕ 09/09/2021 ರಿಂದ ದಿನಾಂಕ 10/09/2021 ನಡುವೆ ವಿರಾಜಪೇಟೆ ತಾಲ್ಲೂಕು ಕಳತ್ಮಾಡು ಗ್ರಾಮದ ನಿವಾಸಿ ಒಂಟಿಯಾಗಿ ವಾಸಮಾಡಿಕೊಂಡಿದದದ್ದ ಅಂಗವಿಕಲರಾದ ಬಿ.ಜಿ.ಉದಯ ಶಂಕರ್  ಆಸ್ತಿ ವೈಷಮ್ಯದಿಂದ ಯಾರೋ ದುಷ್ಕರ್ಮಿಗಳು ಆಸ್ತಿಯ ವೇಳೆ ಮಲಗಿಕೊಂಡಿದ್ದಾಗ ಮರ್ಮಾಂಗಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದು ಈ ಸಂಬಂದ ಸಿದ್ದಾಪುರ ಪೊಲೀಸ್ ಠಾಣಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

   ಪ್ರಕರಣದ ತನಿಖೆ ಕೈಗೊಂಡ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ಪಿ. ರವರ ನೇತೃತ್ವದ ತಂಡಗಳು ದಿನಾಂಕ-16/09/2021 ರಂದು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳತ್ಮಾಡು ಗ್ರಾಮದ ಬಿ.ಎಸ್.ಸಂದೀಪ್, ಬಿ.ಜೆ.ಸುಂದರ ಹಾಗೂ ಗೋಣಿಕೊಪ್ಪದ ಮೊಹಮ್ಮದ್ ಸುಲೈಮಾನ್@ ವಿನೋದ್ ಪೂಜಾರಿ  ಎಂಬ ಆರೋಪಿಗಳನ್ನು ಬಂದಿಸಿದ್ದು ಆರೋಪಿತರುಗಳು ಆಸ್ತಿಯ ವಿಚಾರದಲ್ಲಿ ದಿನಾಂಕ-09/09/2021 ರಂದು ರಾತ್ರಿ ವೇಳೆಯಲ್ಲಿ ಉದಯ ಶಂಕರ್ ರವರನ್ನು ಕಳತ್ಮಾಡು ಗ್ರಾಮದಿಂದ ಕಾರಿನಲ್ಲಿ ಎತ್ತಿಕೊಂಡು ಹೋಗಿ ಗೋಣಿಕೊಪ್ಪ ಪಂಚವಳ್ಳಿ ಕಡೆಗೆ ಹೋಗುವ ಮಾರ್ಗದ ಮಧ್ಯದಲ್ಲಿನ ನಿರ್ಜನ ಪ್ರದೇಶದಲ್ಲಿ ಬೆಡ್ ಶೀಟ್ನಿಂದ ಉಸಿರುಗಟ್ಟಿಸಿ, ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ನಂತರ ಮೃತ ಶರೀರವನ್ನು ಆತನ ವಾಸದ ಮನೆಗೆ ತಂದು ಮಲಗಿಸಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿರುತ್ತದೆ. 

  ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಪಿ.ವಿ.ವೆಂಕಟೇಶ್,  ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ಪಿ. ಮೋಹನ್‌ ರಾಜು. ಎ.ಎಸ್.ಐ. ಎನ್.ಟಿ.ತಮ್ಮಯ್ಯ, ಸಿಬ್ಬಂದಿಗಳಾದ ಟಿ.ಜೆ.ರತನ್, ವಸಂತಕುಮಾರ್.ಹೆಚ್.ಕೆ. ಮಲ್ಲಪ್ಪ ಮುಶಿಗೇರಿ, ಹೆಚ್.ಎಂ.ಲಕ್ಷ್ಮೀಕಾಂತ, ಗೋವರ್ಧನ, ಕಿರಣ, ಚರ್ಮಣ, ರಾಜೇಶ್ ಹಾಗೂ ಗಿರೀಶ್ ರವರು ಭಾಗವಹಿಸಿದ್ದು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

  ಕೊಲೆ ಯತ್ನ ಪ್ರಕರಣ

            ದಿನಾಂಕ: 15.09.2021 ರಂದು ಕುಶಾಲನಗರ ತಾಲ್ಲೂಕು ಹೇರೂರು ಗ್ರಾಮದ ನಿವಾಸಿ ಅಭಿಜಿತ್‌ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಕರುಣ ಎಂಬುವವರು ಹಳೆ ವೈಷಮ್ಯದಿಂದ ದಾರಿ ತಡೆದು ಕೊಲೆ ಮಾಡುವ ಉದ್ದೇಶದಿಂದ ಕೋವಿಯಿಂದ ಗುಂಡು ಹೊಡೆದಾಗ ಗುಂಡು ರಸ್ತೆಗೆ ತಾಗಿ ಚಿಲ್ಲುಗಳು ಅಭಿಜಿತ್‌ ರವರ ಕಾಲಿಗೆ ತಾಗಿ ಗಾಯವಾಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

            ದಿನಾಂಕ: 15-09-2021 ರಂದು ರಾತ್ರಿ ಮಡಿಕೇರಿ ತಾಲ್ಲೂಕು ದಬ್ಬಡ್ಕ ಚೆಂಬು ಗ್ರಾಮದ ನಿವಾಸಿ  ಮುತ್ತು ಎಂಬುವವರು ವೈಯಕ್ತಿಕ ವೈಷಮ್ಯದಿಂದ ಸಂಬಂದಿಕ ಮಹಿಳೆಯೊಬ್ಬರು ಕುಟುಂಬದವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಎಳೆದುಕೊಂಡು ಹೋಗಿ ಕುತ್ತಿಗೆಯನ್ನು ನೇಣು ಬಿಗಿದು ಕೊಲೆ ಮಾಡಿ ಆತನು ಸಹಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತ ಪತಿ ಕೇಶವ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 17-09-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080