ಅಭಿಪ್ರಾಯ / ಸಲಹೆಗಳು

ಆನ್‌ ಲೈನ್‌ ವಂಚನೆ ಪ್ರಕರಣ

            ವಿರಾಜಪೇಟೆ ತಾಲ್ಲೂಕು ಹಚ್ಚಿನಾಡು ಗ್ರಾಮದ ನಿವಾಸಿ ವಿನೋದ್‌ ಎಂಬುವವರು ವಿವಾಹವಾಗಲು ತಮಿಳ್‌ ಮ್ಯಾಟ್ರಿಮೊನಿ ಜಾಲತಾಣದಲ್ಲಿ  ಹುಡುಗಿಯರ ಬಗ್ಗೆ ನೋಡುತ್ತಿರುವಾಗ ಪ್ರಿಯ ಎಂಬ ಹುಡುಗಿ ಪರಿಚಯವಾಗಿರುತ್ತದೆ. ಆಕೆ ತಾನು ಲಂಡನ್‌ ನಲ್ಲಿ ಇರುವುದಾಗಿ ಹೇಳಿ ಭಾರತಕ್ಕೆ ವಾಪಾಸ್ಸು ಬಂದ ನಂತರ ವಿವಾಹವಾಗುವುದಾಗಿ ಹೇಳಿ ಆಕೆ ವಸುಗಳನ್ನು ಪಾರ್ಸೆಲ್‌ ಕಳುಹಿಸುತ್ತಿದ್ದು ಇದಕ್ಕೆ ಕಸ್ಟಮ್ಸ್‌ ಶುಲ್ಕ ಪಾವತಿ ಮಾಡಲು ಹೇಳಿ ಆಕೆಯ ಬ್ಯಾಂಕ್‌ ಖಾತೆಗೆ ₹. 2,18,650 ಹಣವನ್ನು ಜಮಾ ಮಾಡಿಸಿಕೊಂಡು ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 16-04-2022 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‌ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ   

         ದಿನಾಂಕ: 16-04-2022 ರಂದು ಪೊನ್ನಂಪೇಟೆ ತಾಲ್ಲೂಕು ಭದ್ರಗೊಳ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಟಿಎನ್-19-ಎಡಿ-2683 ರ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎನ್-9217‌ ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ ಪ್ರಕರಣ

            ದಿನಾಂಕ: 16-04-2022 ರಂದು ವಿರಾಜಪೇಟೆ ಪಟ್ಟಣದ ಮೊಗೆರ ಗಲ್ಲಿ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡಲು ಕೆಎ-01-ಜೆಡ್-4894‌ ರ ಕಾರಿನಲ್ಲಿ ಅಕ್ರಮವಾಗಿ ಕೇರಳ ರಾಜ್ಯ ಲಾಟರಿಗಳನ್ನು ಇಟ್ಟುಕೊಂಡಿದ್ದ  ಪ್ರಕರಣವನ್ನು ವಿರಾಜಪೇಟೆ ನಗರ ಠಾಣೆ ಪಿ.ಎಸ್‍.ಐ ಜಗದೀಶ್ ಧೂಲಶೆಟ್ಟಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಗಫೂರ್‌ ಮತ್ತು ಸುಕುಮಾರನ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

            ದಿನಾಂಕ: 16-04-2022 ರಂದು ವಿರಾಜಪೇಟೆ ತಾಲ್ಲೂಕು ಕೆದಮುಳ್ಳೂರು ಗ್ರಾಮದ ನಿವಾಸಿ ಶರತ್‌ ಎಂಬುವವರು ವಿರಾಜಪೇಟೆ ನಗರದ ಬಸ್‌ ನಿಲ್ದಾಣದಲ್ಲಿರುವಾಗ  ವಿಷ್ಣು ಮತ್ತು ರಂಜಿತ್‌ ಎಂಬುವವರು ವೈಯಕ್ತಿಕ ವಿಷಯದಲಿ ಜಗಳ ತೆಗೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 17-04-2022 12:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080