ಅಭಿಪ್ರಾಯ / ಸಲಹೆಗಳು

ಆಕಸ್ಮಿಕ ವಾಗಿ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು.

                ಮಡಿಕೇರಿ ತಾಲ್ಲೂಕು ಯು.ಚೆಂಬು  ಗ್ರಾಮದ ನಿವಾಸಿ ದಾಸಪ್ಪ ಎಂಬುವವರು ಅವರ ತೋಟದಲ್ಲಿ ಅಲ್ಯುಮಿನಿಯಂ ಏಣಿ ಉಪಯೋಗಿಸಿ ಮರಕ್ಕೆ ಹಬ್ಬಿದ್ದ ಬಳ್ಳಿಯಿಂದ ಕಾಳು ಮೆಣಸು ಕುಯ್ಯುತ್ತಿರುವಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್‍ ತಂತಿಗೆ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ತಾಗಿ ವಿದ್ಯತ್‍ ಸ್ಪರ್ಷಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯ ಬಹಳಷ್ಟು ಕಾಫಿ ಹಾಗೂ ಇನ್ನಿತರ ತೋಟಗಳಲ್ಲಿ ವಿದ್ಯುತ್‍ ತಂತಿ ಹಾದುಹೋಗಿದ್ದು ತೋಟಗಳಲ್ಲಿ ಕೆಲಸ ನಿರ್ವಹಿಸುವಾಗ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಿದ್ದು ಕಾರ್ಮಿಕರು ಕೆಲಸ ನಿರ್ವಹಿಸುವಾಗ ಮಾಡುವ ಸಣ್ಣ ಅಜಾಗರೂಕತೆಯಿಂದ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.  ಜಿಲ್ಲೆಯ ತೋಟಗಳ ಮಾಲೀಕರು ಕಾರ್ಮಿಕರಿಂದ ಕೆಲಸ ಮಾಡಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಕೋರಿದೆ. ವಿದ್ಯುತ್ ತಂತಿ ಹಾದುಹೋಗಿರುವ ಸ್ಥಳಗಳಲ್ಲಿ ಕೆಲಸಗಾರರು ಕೆಲಸ ಮಾಡುವ ಸಮಯದಲ್ಲಿ ಬಿದಿರಿನ ಏಣಿಗಳನ್ನು ಬಳಸುವುದು ಹಾಗೂ ಏಣಿ ಉಪಯೋಗಿಸುವಾಗ ರಬ್ಬರ್ ಕೈಗವಸು ( ರಬ್ಬರ್ ಗ್ಲೌಸ್) ಗಳನ್ನು ಹಾಗೂ ರಬ್ಬರ್ ಪಾದರಕ್ಷೆ (ರಬ್ಬರ್ ಶೂ)ಗಳನ್ನು ಧರಿಸುವುದು, ವಿದ್ಯುತ್‌ ತಂತಿ ಹಾದುಹೋಗಿರುವ ಸ್ಥಳದ ಬಳಿ ಮರ ಹತ್ತಿ ಕೆಲಸ ಮಾಡುವಾಗ ಸಾಧ್ಯವಾದರೆ ವಿದ್ಯುತ್‍ ನಿಗಮದ ಸಂಬಂದಪಟ್ಟ ಅಧಿಕಾರಿಯವರಿಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ವಿದ್ಯುತ್‍ ಸಂಪರ್ಕ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳುವುದು. ತೋಟಗಳಲ್ಲಿ ವಿದ್ಯುತ್‍ ಕಂಬಗಳ ಬಳಿ ಯಾವುದೇ ಹಸಿರು ಬಳ್ಳಿಗಳು, ಮರಗಿಡಗಳು ಬೆಳೆಯುವುದನ್ನು ತಡೆಯುವುದು ಹಾಗೂ ಸಂಬಂದಪಟ್ಟ ವಿದ್ಯುತ್‍ ನಿಗಮದ ಕಛೇರಿಗೆ ಮಾಹಿತಿ ನೀಡಿ ವಿದ್ಯುತ್‍ ಕಂಬಗಳ ಸಮೀಪದ ಮರಗಳ  ರೆಂಬೆಕೊಂಬೆಗಳು ವಿದ್ಯುತ್‍ ತಂತಿಗೆ ತಾಗದಂತೆ ತೆರವುಗೊಳಿಸುವ ಕ್ರಮ ಕೈಗೊಳ್ಳಲು ಕೋರಿದೆ.

ಕಳವು ಪ್ರಕರಣ

ದಿನಾಂಕ: 14-12-2021 ರಂದು ರಾತ್ರಿ ಪೊನ್ನಂಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಬ್ರಿಜೇಶ್‌ ಎಂಬುವವರು ಅವರ ಮನೆಯ ಹೊರಗೆ ಶೆಡ್‌ನಲ್ಲಿ 47 ಚೀಲಗಳಲ್ಲಿ ತುಂಬಿಸಿಟ್ಟಿದ್ದ ಅಂದಾಜು 120 ಕೆ.ಜಿ ತೂಕದ ಒಣಗಿದ ಕಾಳು ಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 14-12-2021 ರಂದು ವಿರಾಜಪೇಟೆ ಪಟ್ಟಣದ ಮೂರ್ನಾಡು ಜಂಕ್ಷನ್‌ ಬಳಿ ಬ್ರದರ್ಸ್‌ ವೈನ್‌ ಶಾಪ್‌ ಮೇಲಿನ ಕೊಠಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಪಟ್ಟಣ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಮನೋಜ್‌ ಮತ್ತು ಕಿಶೋರ್‌ ಕುಮಾರ್‌ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 16-12-2021 04:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080