ಅಭಿಪ್ರಾಯ / ಸಲಹೆಗಳು

ಆನ್‍ ಲೈನ್‍ ವಂಚನೆ ಪ್ರಕರಣ

ದಿನಾಂಕ: 14-03-2021 ರಂದು ವಿರಾಜಪೇಟೆ ತಾಲ್ಲೂಕು ಹೆಗ್ಗಳ ಗ್ರಾಮದ ನಿವಾಸಿ ರಫೀಕ್‍ ಎಂಬುವವರು ಫ್ಲಿಪ್‍ ಕಾರ್ಟ್ ಮುಖಾಂತರ ಆನ್‍ ಲೈನ್‍ ಮೂಲಕ ವಸ್ತುವನ್ನು ಖರೀದಿಸುವಾಗ ಯಾರೋ ಅಪರಿಚಿತರು ಒಂದು ಲಿಂಕ್‍ ಕಳುಹಿಸಿ ₹. 51 ಸಂದಾಯ ಮಾಡುವಂತೆ ಕೋರಿದ ಮೇರೆ ಗೂಗಲ್‍ ಪೇ ಮುಖಾಂತರ ಸಂದಾಯ ಮಾಡಿದ ನಂತರ ಅವರ ಬ್ಯಾಂಕ್‍ ಖಾತೆಯಿಂದ ₹. 90,990 ಹಣವನ್ನು ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಒಎಲ್ ಎಕ್ಸ್ ವಂಚನೆ ಪ್ರಕರಣ

     ದಿನಾಂಕ:10-03-2021 ರಂದು ಮಡಿಕೇರಿ ನಗರದ ನಿಸರ್ಗ ಲೇಔಟ್ ನಿವಾಸಿ ಪೊನ್ನಪ್ಪ ಎಂಬುವವರು ಒಎಲ್ಎಕ್ಸ್ ನಲ್ಲಿ ಕೆಎ-12-ಎಂಎ-1670 ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರನ್ನು ನೋಡಿ ಅದರಲ್ಲಿದ್ದ ಮೊಬೈಲ್‍ ನಂಬರ್‍ ಗೆ ಕರೆ ಮಾಡಿದಾಗ ಲಿಖಿತ್‍ ರಾಜ್‍ ಎಂಬ ಹೆಸರಿನ ವ್ಯಕ್ತಿ ಮಾತನಾಡಿ ₹. 47,400 ಕ್ಕೆ ಕಾರು ಖರೀದಿಸಲು ನಿರ್ದರಿಸಿ ಹಂತ ಹಂತವಾಗಿ ಫೋನ್ ಪೇ ಮೂಲಕ ಹಣವನ್ನು ಸಂದಾಯ ಮಾಡಿದ್ದರು. ನಂತರ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ವಾಹನವನ್ನು ಕಳುಹಿಸದೇ ಮೋಸ ಮಾಡಿದ್ದು ಈ ಬಗ್ಗೆ ಪೊನ್ನಪ್ಪ ರವರು ದಿನಾಂಕ: 15-03-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 16-03-2021 01:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080