ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

            ದಿನಾಂಕ: 14-09-2021 ರಂದು ಪೊನ್ನಂಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ನರೇಶ್‌ ಎಂಬುವವರಿಗೆ ಅದೇ  ಗ್ರಾಮದ ನಿವಾಸಿಗಳಾದ ಸೋಮಯ್ಯ ಮತ್ತು ಪೂಣಚ್ಚ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಾಹನದಲ್ಲಿ ಅನಧಿಕೃತವಾಗಿ ಸರ್ಕಾರದ ಫಲಕವನ್ನು ಅಳವಡಿಸಿ ವಂಚನೆ ಪ್ರಕರಣ

                       ದಿನಾಂಕ: 14-09-2021 ರಂದು ಕೆಎ-೦5-ಎಂಎಂ-1460 ರ ಇನ್ನೋವಾ ಕಾರಿನ ನಂಬರ್‌ ಪ್ಲೇಟಿನಲ್ಲಿ ಅನಧಿಕೃತವಾಗಿ “ಕರ್ನಾಟಕ ಸರ್ಕಾರ “ ಎಂಬುದಾಗಿ ಸ್ಟಿಕರ್‌ ಹಾಕಿಕೊಂಡು ವಂಚನೆ ಮಾಡುವ ಉದ್ದೇಶದಿಂದ ಜಿಲ್ಲೆಯ ಗೋಣಿಕೊಪ್ಪ ವ್ಯಾಪ್ತಿಯ ಹೋ ಸ್ಟೇ ಯಲ್ಲಿ ತಂಗಲು ಬಂದಿದ್ದ ಪ್ರಕರಣವನ್ನು ಸಾರ್ವಜನಿಕರೊಬ್ಬರು  ತುರ್ತು ಕರೆ ಸಂಖ್ಯೆ 112 (ERSS) ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಮೇರೆ  ERSS ಮತ್ತು ಹೈವೇ ಪಟ್ರೋಲ್‌ ಕರ್ತವ್ಯದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಬೆಂಗಳೂರು ನಿವಾಸಿ ಖಾಲಿದ್‌ ಶರೀಫ್‌ ಎಂಬುವವರ ವಿರುದ್ದ ಗೊಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 15-09-2021 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ