ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 14-04-2021 ರಂದು ಸೋಮವಾರಪೇಟೆ ತಾಲ್ಲೂಕು ಕಣಿವೆ ಗ್ರಾಮದ  ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-12-ಕ್ಯೂ-6163 ರ ಬೈಕನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಮಂಜು ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 14-04-2021 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕಕುಂದ ಗ್ರಾಮದ ನಿವಾಸಿ ನವೀನ್‍ ಎಂಬುವವರು ಅವರ ಸ್ನೇಹಿತ ಚಿಕ್ಕಭಂಡಾರ ಗ್ರಾಮದ ರಘು ಎಂಬುವವರು ಪಡೆದುಕೊಂಡಿದ್ದ ಟೈರ್‍ ಹಿಂಪಡೆಯಲು ಹೋಗಿದ್ದಾಗ ರಘು ಮತ್ತು ಲೋಕೇಶ್‍ ಎಂಬುವವರು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು.

                ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ದಿನಾಂಕ: 14-04-2021 ರಂದು ಪೊನ್ನಂಪೇಟೆ ಗ್ರಾಮದ ನಿವಾಸಿ ಉಮೇಶ್‍ ಎಂಬುವವರು ಮಗ ಮಡಿಕೇರಿ ತಾಲ್ಲೂಕು ಹೆರವನಾಡು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು ಸ್ನೇಹಿತರೊಂದಿಗೆ ಮನೆಯ ಸಮೀಪದ ಕೆರೆಗೆ ಸ್ನಾನ ಮಾಡಲು ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಕ್ಕಳು ಸ್ನಾನ ಮಾಡಲು, ಆಟವಾಡಲು ಹೊಳೆ, ಹಳ್ಳ, ಕೆರೆ-ಕಟ್ಟೆ,ನದಿ,ಕಾಲುವೆ ಸೇರಿದಂತೆ ಯಾವುದೇ ರೀತಿಯ ನೀರಿನ ಮೂಲಗಳ ಬಳಿ ತೆರಳದಂತೆ ಪೋಷಕರು ಮುನ್ನೆಚ್ಚರಿಕೆ ವಹಿಸಬೇಕಾಗಿ ಕೋರಲಾಗಿದೆ.

ಇತ್ತೀಚಿನ ನವೀಕರಣ​ : 15-04-2021 05:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ