ಅಭಿಪ್ರಾಯ / ಸಲಹೆಗಳು

ಅಕ್ರಮ ಲಾಟರಿ ಮಾರಾಟ ಪ್ರಕರಣ

                ದಿನಾಂಕ: 13-02-2022 ರಂದು  ಕುಶಾಲನಗರ ತಾಲ್ಲೂಕು 7ನೇ ಹೊಸಕೋಟೆ  ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸ್ಥಳೀಯ ನಿವಾಸಿ ರಾಜ  ಎಂಬುವವರು ಅಕ್ರಮ ವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಸಾರ್ವಜನಿರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆ ಸಿಹೆಚ್‌ಸಿ ವಿಜಯಕುಮಾರ್ ರವರು ಸಿಬ್ಬಂದಿಯವರು ಪತ್ತೆ ಮಾಡಿ ನೀಡಿದ ವರದಿ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಟೋ ರಿಕ್ಷಾ ಡಿಕ್ಕಿ, ಬಾಲಕ ಸಾವು.

                ದಿನಾಂಕ: 13.02.2022 ರಂದು ಕುಶಾಲನಗರ ತಾಲ್ಲೂಕು ಕೊಡಗರ ಹಳ್ಳಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12ಬಿ-2253 ರ ಆಟೋ ರಿಕ್ಷಾವನ್ನು ಚಾಲಕ ನವೀನ್‌ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ಅಜೀಜ್‌ ಎಂಬುವವರ ಮಗ 6 ವರ್ಷ ಪ್ರಾಯದ ಬಾಲಕನಿಗೆ ಡಿಕ್ಕಿಪಡಿಸಿದ ಪರಿಣಾಮ ತೀವ್ರ ಗಾಯಗೊಂಡ ಬಾಲಕನನ್ನು ಡಿಕ್ಕಿಪಡಿಸಿದ ಆಟೋ ರಿಕ್ಷಾದಲ್ಲೆ ಚಾಲಕನೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿರುತ್ತಾನೆ. ಈ ಬಗ್ಗೆ ರಿಯಾಜ್‌ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಚಾಲಕರು ಗ್ರಾಮದ ಪರಿಮಿತಿಯಲ್ಲಿ, ಶಾಲಾ ಪರಿಮಿತಿಯಲ್ಲಿ ವಾಹನಗಳನ್ನು ಜಾಗರೂಕತೆಯಿಂದ ನಿಗದಿತ ವೇಗದಲ್ಲಿ ಚಾಲನೆ ಮಾಡುವುದು. ಸಾರ್ವಜನಿಕರು, ಮಕ್ಕಳು ರಸ್ತೆ ಬದಿಯಲ್ಲಿ ಇರುವಾಗ , ರಸ್ತೆ ದಾಟುವಾಗ ವಾಹನಗಳನ್ನು ಜಾಗರೂಕತೆಯಿಂದ ನಿಧಾನವಾಗಿ ಚಾಲನೆ ಮಾಡುವುದು. ಒಂದು ಜೀವಹಾನಿಯಾದಗ ಇತರರು ಮರುಕಪಡಬಹುದು, ಆದರೆ ಪೋಷಕರಿಗೆ, ತಂದೆ ತಾಯಿಯರಿಗೆ ಒಂದು ಜೀವ ಹಾನಿ ಅತ್ಯಮೂಲ್ಯ ಹಾಗೂ ತುಂಬಲಾರದ ನಷ್ಟವಾಗುತ್ತದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ವಾಹನ ಚಾಲಕರು ಜಾಗ್ರತೆ ವಹಿಸಲು ಕೋರಲಾಗಿದೆ. ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ನಿಮ್ಮ ಹಾಗೂ ಇತರರ ಅಮೂಲ್ಯ ಜೀವವನ್ನು ಹಾಗೂ ಅವಲಂಬಿತರ ಜೀವನವನ್ನು ಉಳಿಸಿ.

ಇತ್ತೀಚಿನ ನವೀಕರಣ​ : 14-02-2022 04:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080