ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ ಪತ್ತೆ ಆರೋಪಿಗಳ ಬಂಧನ.: 

ಜಿಲ್ಲೆಯ ಮಡಿಕೇರಿ ನಗರ ಮ್ಯಾನ್ಸ್ ಕಾಂಪೌಂಡ್ ಬಳಿಯ ಮನೆ ಸೈಟ್ ನಿಂದ ಕಾಂಕ್ರೀಟ್ ಮಿಕ್ಸ್ ಮಾಡುವ ಯಂತ್ರವನ್ನು ಕಳ್ಳತನ ಮಾಡಿದ ಇಬ್ಬರು ವ್ಯಕ್ತಿಗಳನ್ನು ಪತ್ತೆಹಚ್ಚಿ ಸ್ವತ್ತನ್ನು ವಶಪಡಿಸಿಕೊಳ್ಲುವಲ್ಲಿ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿಯಲ್ಲಿ ಮನೆ ನಿರ್ಮಿಸುತ್ತದ್ದ ಸೈಟಿನಿಂದ ಕಾಂಕ್ರೀಟ್ ಮಿಕ್ಸರ್ ಮಿಷನ್ ಕಳವು ಆದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಾಹಿತಿಯನ್ನು ಕಲೆಹಾಕಿದ ಡಿಸಿಐಬಿ ಪೊಲೀಸರು ದಿನಾಂಕ 13-11-2021 ರಂದು ಆರೋಪಿಗಳಾದ 1) ಎಂ.ಹೆಚ್.ಇಮ್ರಾನ್, ಶಾಸ್ತ್ರಿನಗರ, ಮಡಿಕೇರಿ ಮತ್ತು 2) ಆರ್.ಪ್ರಮೋದ್ ರಾಜ್, ಗಣಪತಿ ಬೀದಿ, ಮಡಿಕೇರಿ ರವರನ್ನು ಬಂಧಿಸಿ ಸದರಿಯವರಿಂದ ಒಂದು ಲಕ್ಷ ರೂ.ಬೆಲೆಬಾಳುವ ಕಾಂಕ್ರೀಟ್ ಮಿಕ್ಸರ್ ಯಂತ್ರ ಮತ್ತು 2 ಲಕ್ಷ ರೂ. ಮೌಲ್ಯದ ಒಂದು ಹುಂಡೈ ಇಲಾಂಟ್ರಾ ಕಾರನ್ನು ವಶಪಡಿಸಿ ಕೊಳ್ಳಲು ಯಶಸ್ವಿಯಾದರು.

ಈ ಕಾರ್ಯಾಚರಣೆಯು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಐ.ಪಿ ಮೇದಪ್ಪರವರ ನೇತ್ರತ್ವದಲ್ಲಿ ನಡೆದಿದ್ದು, ಕಾರ್ಯಾ ಚರಣೆಯಲ್ಲಿ ಡಿಸಿಐಬಿ ಎಎಸ್ ಐ ಹಮೀದ್ ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶರತ್ ರೈ, ಅನಿಲ್ ಕುಮಾರ್, ಶಶಿಕುಮಾರ್ ಮತ್ತು ಸಿಡಿಆರ್ ಘಟಕ ದ ರಾಜೇಶ್, ಗಿರೀಶ್ ಭಾಗವಹಿಸಿದ್ದು ಇವರ ಕಾರ್ಯವೈಖರಿ ಯನ್ನು ಪ್ರಶಂಸಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ       

                ದಿನಾಂಕ: 13-11-2021 ರಂದು ಕುಶಾಲನಗರದ ಹಲೆ ಮಾರ್ಕೆಟ್‌ ರಸ್ತೆಯಲ್ಲಿ ಕೆಎ-12-ಬಿ-8913 ರ ಆಟೋ ರಿಕ್ಷಾವನ್ನು ಅದರ ಚಾಲಕ ಹರೀಶ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಆರ್‌-7924 ರ ಸ್ಕೂಟರ್‌ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ ಸವಾರಿರಬ್ಬರು ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

 

ದಿನಾಂಕ: 13-11-2021 ರಂದು ಕುಶಾಲನಗರದ ಮಾದಾಪಟ್ಟಣದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎಂಎ-2232 ರ ಓಮ್ನಿ ಕಾರನ್ನು ಅದರ ಚಾಲಕ ಅವಿನಾಶ್‌ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಏಕಾಏಕಿ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಬಿ-2533 ರ ಆಟೋರಿಕ್ಷಕ್ಕೆ ಡಿಕ್ಕಿಯಾದ ಪರಿಣಾಮ ಕಿಶೋರ್‌ ಕುಮಾರ್‌ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ನವೀಕರಣ​ : 14-11-2021 12:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080