ಅಭಿಪ್ರಾಯ / ಸಲಹೆಗಳು

ಆನ್‌ ಲೈನ್‌ ವಂಚನೆ ಪ್ರಕರಣ

            ದಿನಾಂಕ: 09-07-2021 ರಂದು ಪೊನ್ನಂಪೇಟೆ ತಾಲ್ಲೂಕು ಭದ್ರಗೊಳ ಗ್ರಾಮದ ನಿವಾಸಿ ರಾಮಕೃಷ್ಣ ಎಂಬುವವರು 5Paisa.Com ಖಾತೆಯನ್ನು ನಿಷ್ರ್ಕಿಯಗೊಳಿಸಲು ಗೂಗಲ್‌ ನಲ್ಲಿ ಗ್ರಾಹಕ ಸೇವಾಕೇಂದ್ರದ ಸಂಖ್ಯೆಯನ್ನು ಹುಡುಕಿ 8976689766 ಸಂಖ್ಯೆಗೆ  ಕರೆ ಮಾಡಿದಾಗ ರೆ ಸ್ವೀಕರಿಸಿದ ವ್ಯಕ್ತಿ Any Desk App  ಡೌನ್‌ ಲೋಡ್‌ ಮಾಡಲು ತಿಳಿಸಿ ನಂತರ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆದು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ₹. 823546 ಹಣವನ್ನು ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 12-07-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‌ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

             ಸಾರ್ವಜನಿಕರು ಆನ್ ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್ ನ ಅಧಿಕೃತ ಅಪ್ಲಿಕೇಶನ್ ಗಳನ್ನು ಬಳಸುವುದು. ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಆನ್ ಲೈನ್‍ ಹಣ ವರ್ಗಾವಣೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ  ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ತೊಡಕುಂಟಾದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವುದು. ಹಣಕಾಸು ಸಂಸ್ಥೆಗಳ ಅಥವಾ ಯು.ಪಿ.ಐ ಆಧಾರಿತ ಆನ್ ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್ ಪೇ, ಇತರೆ ಯು.ಪಿ.ಐ ಆಧಾರಿತ ಆನ್ ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್ ಗಳ ಕ್ಯೂ.ಆರ್ ಕೋಡ್‍ ಸ್ಕ್ಯಾನ್‍ ಮಾಡಲು ಹೇಳಿ ಹಾಗೂ ಕೋಡ್ ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡದಂತೆ ಸೂಚಸಲಾಗಿದೆ.

ಹಲ್ಲೆ ಪ್ರಕರಣ

            ದಿನಾಂಕ: 11-07-2021 ರಂದು ಸಂಜೆ ಕುಶಾಲನಗರ ತಾಲ್ಲೂಕು ಮಾದಾಪಟ್ಟಣ ನಿವಾಸಿ ನಟರಾಜ್‌ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಮಹೇಶ್‌ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 12-07-2021 ರಂದು ವಿರಾಜಪೇಟೆ ತಾಲ್ಲೂಕು ಗುಹ್ಯ ಗ್ರಾಮದ ನಿವಾಸಿ ಅಜಯ್‌ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಗಣೇಶ್‌ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 12-07-2021 ರಂದು ಸಂಜೆ ಕುಶಾಲನಗರ ತಾಲ್ಲೂಕು ಗೊಂದಿಬಸವನಹಳ್ಳಿ ಗ್ರಾಮದ  ನಿವಾಸಿ ಮಹಿಳೆಯೊಬ್ಬರಿಗೆ ಅದೇ ಗ್ರಾಮದ ನಿವಾಸಿ ಗಿರೀಶ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಅವಾಚ್ಯಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 13-07-2021 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ