ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ ಪತ್ತೆ ಆರೋಪಿ ಬಂಧನ

ಕೊಡಗು ಜಿಲ್ಲೆಯ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡುಮಂಗಳೂರು ಬಸವನತ್ತೂರು ಗ್ರಾಮದ ತಂಗಮ್ಮನವರ ಮನೆಯಿಂದ ಸುಮಾರು 240 ಗ್ರಾಂ ಚಿನ್ನಾಭರಣ ವನ್ನು ಕಳವು ಮಾಡಿದ್ದ ಪ್ರಕರಣವನ್ನು 24 ಗಂಟೆಯೊಳಗೆ ಪತ್ತೆಹಚ್ಚುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೂಡುಮಂಗಳೂರು ಬಸವನತ್ತೂರು ಗ್ರಾಮದ ನಿವಾಸಿ ತಂಗಮ್ಮ ಎಂಬವರ ಮನೆಯಲ್ಲಿ 2 ತಿಂಗಳಿನಿಂದ ಚಿನ್ನದ ಆಭರಣಗಳು ಕಳ್ಳತನವಾಗುತ್ತಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣದ ಆರೋಪಿ ತಂಗಮ್ಮನವರ ತೋಟದ ರೈಟರ್ ದಯಾನಂದ @ ಕಾಡು ಎಂಬಾತನನ್ನು ವಶಕ್ಕೆ ಪಡೆದು ಆತ ಕಳವು ಮಾಡಿದ್ದ 4,15,000/- ರೂ. ಬೆಲೆಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿ ದ್ದಾರೆ.

ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ಸೂಚನೆಗಳನ್ನು ನೀಡಿದ್ದು ಅದರಂತೆ ಸೋಮವಾರಪೇಟೆ ಉಪ ವಿಭಾಗದ ಡಿಎಸ್ಪಿ ಶ್ರೀ ಹೆಚ್.ಎಂ.ಶೈಲೇಂದ್ರ ರವರ ಮಾರ್ಗದರ್ಶನದಲ್ಲಿ ಕುಶಾಲನಗರ ಸಿ.ಪಿ.ಐ. ಎಂ.ಮಹೇಶ್ ಮತ್ತು ಪಿಎಸ್ಐ ಶಿವಶಂಕರ್ ರವರ ನೇತೃತ್ವ ದಲ್ಲಿ ನಡೆಸಿದ ಈ ಕಾರ್ಯಾಚರಣೆ ಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯ ಎಎಸ್ಐ ಸ್ವಾಮಿ ಸಿಬ್ಬಂದಿಗಳಾದ ಶನಂತ, ಶ್ರೀನಿವಾಸ, ಸಾಫಿನ್ ಆಹ್ಮದ್, ಅಜಿತ್, ಪ್ರವೀಣ್ ಕುಮಾರ್, ಪ್ರಿಯಕುಮಾರ್ ರವರು ಭಾಗಿಯಾಗಿದ್ದರು.. ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪ್ರಶಂಸಿಸಲಾಗಿದೆ.

ನಕಲಿ ರಿವಾಲ್ವರ್ ಮಾರಾಟಕ್ಕೆ ಯತ್ನ

ದಿನಾಂಕ 12-12-2020 ರಂದು ಮಡಿಕೇರಿ ನಗರ ಠಾಣಾಧಿಕಾರಿ ಕು: ಅಂತಿಮ ರವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ವ್ಯಕ್ತಿಯೋರ್ವ ಸಂಶಯ ಬರುವ ರೀತಿಯಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿ ಆತನನ್ನು ವಿಚಾರಣೆಗೊಳಪಡಿಸಿದಾಗ ಸದರಿ ವ್ಯಕ್ತಿ ಯಾವುದೇ ದಾಖಲಾತಿಗಳಿಲ್ಲದೆ ನಕಲಿ ರಿವಾಲ್ವರ್ ನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯಿಂದ ಅಕ್ರಮ ಲಾಟರಿ ಟಿಕೇಟ್ ಮಾರಾಟ

ದಿನಾಂಕ 12-12-2020 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಪೊನ್ನಂಪೇಟೆ ನಗರದ ಕಾನೂರು ಜಂಕ್ಷನ್ ನಲ್ಲಿ ಕೆ.ಎ.ವೇಣು ಎಂಬ ವ್ಯಕ್ತಿ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದನ್ನು ಪತ್ತೆ  ಹಚ್ಚಿ ದಾಳಿ ನಡೆಸಿದ  ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಆರೋಪಿತನಿಂದ ಕೇರಳ ರಾಜ್ಯದ 40/-ರೂ. ಬೆಲೆಬಾಳುವ 168  ಲಾಟರಿ ಟಿಕೇಟ್ ಗಳನ್ನು ಹಾಗು ಲಾಟರಿ ಟಿಕೇಟ್ ಮಾರಾಟ ಮಾಡಿದ ಹಣ ರೂ.2,640/- ಗಳನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಕುಶಾಲನಗರದ ಮಾರುತಿ ಬಡಾವಣೆಯಲ್ಲಿ ವಾಸವಾಗಿರುವ ಭರತ್ ಎಂಬವರ ತಂದೆ ಕುಶಾಲಪ್ಪ ಎಂಬವರು ದಿನಾಂಕ 11-12-2020 ರಂದು ವಿಷಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟು , ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರು ಬೈಕಿಗೆ ವ್ಯಾನ್ ಡಿಕ್ಕಿ

ದಿನಾಂಕ 12-12-2020 ರಂದು ಕುಶಾಲನಗರ ಸಮೀಪದ ಕಣಿವೆ ಎಂಬಲ್ಲಿ ಆನಂದ ಎಂಬವರು ತನ್ನ ಮೋಟಾರ್ ಸೈಕಲಿನಲ್ಲಿ ಮೂರ್ತಿ ಎಂಬವರೊಂದಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಕೆಎ12-ಎಂಎ-0349ರ ಮಾರುತಿ ವ್ಯಾನ್ ಡಿಕ್ಕಿಯಾಗಿದ್ದು, ಪರಿಣಾಮ ಬೈಕಿನಲ್ಲಿ ಸವಾರಿ ಮಾಡುತ್ತಿದ್ದ ಆನಂದ ಹಾಗು ಮೂರ್ತಿಯವರಿಗೆ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನವೀಕರಣ​ : 13-12-2020 12:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080