ಅಭಿಪ್ರಾಯ / ಸಲಹೆಗಳು

ವಾಹನ ಕಳವು ಪ್ರಕರಣ ಪತ್ತೆ

ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರ-ಮಡಿಕೇರಿ ಮುಖ್ಯ ರಸ್ತೆಯ ಮಾದಾಪಟ್ಟಣದಲ್ಲಿ ಕೋಳಿ ವ್ಯಾಪಾರಿಯ ಪಿಕ್ ಅಪ್ ವಾಹನವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಈಗ್ಗೆ 3 ತಿಂಗಳ ಹಿಂದೆ ಕೋಳಿ ವ್ಯಾಪಾರ ಮುಗಿಸಿ ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವಾಹನವನ್ನು ಆರೋಪಿಗಳು ಕಳವು ಮಾಡಿದ್ದು, ಈ ಬಗ್ಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದ ಬೆನ್ನು ಹತ್ತಿದ ಕುಶಾಲನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆ ಬಗ್ಗೆ ಸುಳ್ಯ, ಪುತ್ತೂರು, ಕಾಂಞಂಗಾಡ್, ಕಾಸರಗೋಡ್, ಇರಿಟ್ಟಿ (ಕೇರಳ) ಕಡೆಗಳಲ್ಲಿ ಆರೋಪಿಗಳಿಗಾಗಿ ಶೋಧಿಸುತ್ತಿದ್ದರು. ಸುಳ್ಯದ ಬಳಿ ಕಳವು ಮಾಡಿದ ಪಿಕ್ ಅಪ್ ವಾಹನದ ನಂಬರ್ ಬದಲಾಯಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಗುಮಾನಿ ಮೇಲೆ ಹಿಡಿದು ವಿಚಾರಿಸಲಾಗಿ ಕುಶಾಲನಗರದಲ್ಲಿ ಕಳವಾಗಿದ್ದ ಸದರಿ ಪಿಕ್ ಅಪ್ ವಾಹನವು ಪತ್ತೆಯಾಗಿರುತ್ತದೆ.ನಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಣ್ಣೂರು ಜಿಲ್ಲೆಯ ರವೂಫ್‌, ಮೂಲತಃ ಕರಿಕೆ ನಿವಾಸಿಯಾಗಿದ್ದು ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ವಾಶವಿರುವ ಅಬ್ದುಲ್‌ ಫಾರೂಕ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ನಿವಾಸಿ ಡೇವಿಡ್‌ ಪ್ರಶಾಂತ್‌ ಎಂಬ ಮೂವರನ್ನು ಬಂಧಿಸಿ ಕಳುವಾಗಿದ್ದ ಒಂದು ಪಿಕ್‌ ಅಪ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

 

 ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಐಪಿಎಸ್ ಹಾಗೂ ಹೆಚ್.ಎಂ. ಶೈಲೇಂದ್ರ ಪೊಲೀಸ್ ಉಪಾಧೀಕ್ಷಕರು ಸೋಮವಾರಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಎಂ. ಮಹೇಶ್, ಸಿಪಿಐ ಕುಶಾಲನಗರ ವೃತ್ತ ರವರ ನೇತೃತ್ವದಲ್ಲಿ ಗಣೇಶ್ ಪಿಎಸ್ಐ ಕುಶಾಲನಗರ ಟೌನ್ ಪೊಲೀಸ್ ಠಾಣೆ, ಗೋಪಾಲ್, ಎಎಸ್ಐ , ಸಿಬ್ಬಂದಿಯವರಾದ ಚಂದ್ರಶೇಖರ್, ಪ್ರಕಾಶ್, ಸಜಿ, ದಯಾನಂದ, ಸಂದೇಶ್, ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳದ ವೆಂಕಟೇಶ್, ಯೊಗೇಶ್ ಕುಮಾರ್, ನಿರಂಜನ್, ಕೊಡಗು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಮುಂತಾದವರ ತಂಡವು ಭೇದಿಸಿದ್ದು, ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಲಾಗಿದೆ.

 

ಕುಸಿದು ಬಿದ್ದು ವ್ಯಕ್ತಿ ಸಾವು

ದಿನಾಂಕ 11/12/2020ರಂದು ಕುಶಾಲನಗರದ ಕೂಡ್ಲೂರು ನಿವಾಸಿ ಬಾಬು ದೇವಾಡಿಗ ಎಂಬವರು ಅದೇ ಗ್ರಾಮದ ನಿವಾಸಿ ಸುನಿಲ್‌ ಕುಮಾರ್‌ ಎಂಬವರೊಂದಿಗೆ ಮಾತನಾಡಿಕೊಂಡಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 11/12/2020ರಂದು ಕುಶಾಲನಗರ ಬಳಿಯ ಕೂಡ್ಲೂರಿನ ಪ್ರಗತಿ ಬಡಾವಣೆ ನಿವಾಸಿ ತಿರುವಣ್ಣನ್‌ ಎಂಬವರು ಮನೆಯಿಂದ ಅಂಗಡಿಗೆ ನಡೆದುಕೊಂಡು ಹೋಗುತ್ತಿರುವಾಗ ಪ್ರಗತಿ ಬಡಾವಣೆಯ ತಿರುವಿನಲ್ಲಿ ಒಂದು ಟ್ರ್ಯಾಕ್ಟರನ್ನು ಅದರ ಚಾಲಕ ಸದಾ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತಿರುವಣ್ಣನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ತಿರುವಣ್ಣನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 11/12/2020ರಂದು ಶನಿವಾರಸಂತೆ ಬಳಿಯ ಆಲೂರು ಸಿದ್ದಾಪುರದ ದೊಡ್ಡಳ್ಳಿ ನಿವಾಸಿ ಸುರೇಂದ್ರ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಆವರಣ ಗೋಡೆಗೆ ಡಿಕ್ಕಿಯಾಗಿ ಸುರೇಂದ್ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 12-12-2020 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ