ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 11-04-2022 ರಂದು ಮಡಿಕೇರಿ ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿ ಕೆಎ-01-ಎಂಜೆ-9012 ರ ಕಾರನ್ನು ಚಾಲಕ ಅಬ್ದುಲ್‌ ರಕ್ಕನ್‌ ಎಂಬುವವರು ಸೂಚನೆ ನೀಡದೇ ನಿರ್ಲಕ್ಷತೆಯಿಂದ ಏಕಾಏಕಿ ರಸ್ತೆಯ ಬಲಭಾಗಕ್ಕೆ ಕಾರನ್ನು ತಿರುಗಿಸಿದ ಪರಿಣಾಮ ಹಿಂದೆ ಬರುತ್ತಿದ್ದ ಕೆಎ-12-ಯು-1352 ರ ಸ್ಕೂಟರ್‌ ಕಾರಿಗೆ ಡಿಕ್ಕಿಯಾಗಿ ಸವಾರ ವರುಣ್‌ ಎಂಬುವವರು ರಸ್ತೆಗೆ ಬಿದ್ದಾಗ ಎದುರುಗಡೆಯಿಂದ ಬರುತಿದ್ದ ಕೆಎ-02-ಎಚ್‌ಆರ್-3359‌ ರ ಬೈಕನ್ನು ಸವಾರ ಮಾದಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರ್‌ ಸವಾರನಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್‍ಲೈನ್‍ ವಂಚನೆ ಪ್ರಕರಣ

            ಸೋಮವಾರಪೇಟೆ ತಾಲ್ಲೂಕು ಮೂದ್ರವಳ್ಳಿ ಗ್ರಾಮದ ನಿವಾಸಿ ಮಹಿಳೆಯೊಬ್ಬರ ವಾಟ್ಸಪ್‌ ನಂಬರಿನ ಮೂಲಕ  ರಾಬರ್ಟ್‌ ವರ್ಡಿ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿರುತ್ತಾನೆ. ನಂತರ ದಿನಾಂಕ: 23-03-2022 ರಂದು ಉಡುಗೊರೆ ಕಳುಹಿಸುವುದಾಗಿ ತಿಳಿಸಿರುತ್ತಾನೆ. ದಿನಾಂಕ: 29-03-2022 ರಂದು 9774870660 ಸಂಖ್ಯೆಯಿಂದ ಕಸ್ಟಮ್ಸ್‌ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಪಾರ್ಸೆಲ್‍ ಬಂದಿರುವುದಾಗಿ ಹೇಳಿ ಕಸ್ಟಮ್ಸ್ ಶುಲ್ಕ ಪಾತಿಸಲು ತಿಳಿಸಿದ ಮೇರೆ ಆತನು ತಿಳಿಸಿದ ವಿವಿದ ಬ್ಯಾಂಕ್‍ ಖಾತೆಗೆ ಹಂತ ಹಂತವಾಗಿ ಒಟ್ಟು ₹. 7,75,000 ಹಣ ಸಂದಾಯ ಮಾಡಿರುತ್ತಾರೆ. ನಂತರ ಯಾವುದೇ ಪಾರ್ಸೆಲ್‍ ಕಳುಹಿಸದೆ ಇನ್ನೂ ಹೆಚ್ಚಿನ ಹಣ ಸಂದಾಯ ಮಾಡಲು ತಿಳಿಸಿದಾಗ ವಂಚನೆಗೆ ಒಳಗಾಗಿರುವ ಬಗ್ಗೆ ಅರಿವಾಗಿದ್ದು ಈ ಬಗ್ಗೆ ದಿನಾಂಕ: 11-04-2022 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಲಾಟರಿ ಮಾರಾಟ ಪ್ರಕರಣ

            ದಿನಾಂಕ: 11-04-2022 ರಂದು ವಿರಾಜಪೇಟೆ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ನಗರ ಠಾಣೆ ಪಿ.ಎಸ್‍.ಐ ಜಗದೀಶ್ ಧೂಲಶೆಟ್ಟಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಬಿಜು ಕುರಿಯಾಕೋಸ್‌ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 12-04-2022 07:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080