Feedback / Suggestions

ಅಕ್ರಮ ಗಾಂಜಾ ಮಾರಾಟ   ನಾಲ್ವರ ಬಂಧನ . 1 ಕೆ.ಜಿ 365 ಗ್ರಾಂ

                   ದಿನಾಂಕ 11-02-2021 ರಂದು ಸಮಯ 10-10 ಎ.ಎಂ.ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ  ಬೋಜಪ್ಪ ರವರಿಗೆ ಆರ್ಜಿ ಗ್ರಾಮದ ಗ್ಯಾಸ್ ಗೋಡಾನ್ ಬಳಿಯ  ರಾಮನಗರ, ಹೆಗ್ಗಳ ರಸ್ಯೆಯ ಜಂಕ್ಷನ್ ಬಳಿ ಪೆರಂಬಾಡಿ ಗ್ರಾಮದ, ಶಂಶುದ್ದೀನ್ , ರಶೀದ್ , ಮತ್ತು ಇತರರು ಆಟೋ ರಿಕ್ಷಾ  ಹಾಗೂ ಮೋಟಾರು ಸೈಕಲಿನಲ್ಲಿ  ಕೂಳಿತು ಅಕ್ರಮವಾಗಿ ಸಾರ್ವಜನಿಕರಿಗೆ  ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಗೆ ಸ್ವ ವರದಿ ತಯಾರಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ  ಕಳುಹಿಸಿ ನಂತರ  ಮೇಲಾಧಿಕಾರಿಗಳಿಗೆ  ಮಾಹಿತಿ ರವಾನಿಸಿ, ಠಾಣೆಗೆ ಪಂಚರನ್ನು ಬರಮಾಡಿಕೊಂಡು  ಪಂಚರೊಂದಿಗೆ  ಹಾಗೂ ಸಿಬ್ಬಂದಿಗಳೊಂದಿಗೆ  ಆರ್ಜಿ ಗ್ರಾಮಕ್ಕೆ ತೆರಳಿ,  ಆರ್ಜಿ ಗ್ರಾಮದ ರಾಮನಗರ, ಹೆಗ್ಗಳ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿಯಲ್ಲಿ ನಾಲ್ಕು ಜನರು ಒಂದು ಆಟೋ ರಿಕ್ಷಾದಲ್ಲಿ ಕುಳಿತುಕೊಂಡಿದ್ದು ಅವರು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಸುತ್ತುವರೆದು ಹಿಡಿದುಕೊಂಡು ಅವರನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಪರಿಶೀಲನೆ ಮಾಡಿದಾಗ 1) ಕೆ.ಬಿ ರಶೀದ್ ತಂದೆ ಪೌತಿ ಬಾಬು, ಪ್ರಾಯ 38 ವರ್ಷ, ಆಟೋ ಚಾಲಕ, ವೃತ್ತಿ, ವಾಸ ಪೆರಂಬಾಡಿ , ಆರ್ಜಿ ಗ್ರಾಮ, ವಿರಾಜಪೇಟೆ ತಾಲ್ಲೂಕು 2) ಎಸ್. ಸಂಶುದ್ದೀನ್, ತಂದೆ ಸಿದ್ದಿಕ್, ಪ್ರಾಯ 32 ವರ್ಷ, ಬಾವಿ ಕೆಲಸ, ವಾಸ ಅವ್ ಲಕ ರವರ ಬಾಡಿಗೆ ಮನೆ,  ಪೆರಂಬಾಡಿ ಆರ್ಜಿ ಗ್ರಾಮ, ವಿರಾಜಪೇಟೆ ತಾಲ್ಲೂಕು 3)  ಸಿ.ಕೆ. ನೌಷೀರ್, ತಂದೆ ಅಬ್ದುಲ್ ರಶೀದ್, ಪ್ರಾಯ 31 ವರ್ಷ,ಮ ಕೂಲಿಕೆಲಸ, ಮೊಹಮ್ಮದ್ ರವರ ಬಾಡಿಗೆ ಮನೆ, ಸುಣ್ಣದಬೀದಿ, ವಿರಾಜಪೇಟೆ 4) ಎಂ.ಎಂ. ಅಫ್ರೀದ್, ತಂದೆ ಮುನೀಬ್, ಪ್ರಾಯ 22 ವರ್ಷ, ಕೂಲಿಕೆಲಸ, ವಾಸ ಜಂಶೀರ್ ರವರ ಬಾಡಿಗೆ ಮನೆ, ಪೊಲೀಸ್ ಠಾಣೆಗೆ ಹತ್ತಿರ, ಗೋಣಿಕೊಪ್ಪಲು, ವಿರಾಜಪೇಟೆ ತಾಲ್ಲೂಕು ಇವರುಗಳನ್ನು ವಶಕ್ಕೆ ಪಡೆದು ಇವರುಗಳಿಂದ   ಸುಮಾರು ಅಂದಾಜು 50 ಸಾವಿರ ರೂಪಾಯಿ ಬೆಲೆ ಬಾಳುವ 1.ಕೆ.ಜಿ 365 ಗ್ರಾಂ ಗಾಂಜಾವನ್ನು   ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ನಂಬರ್ ಕೆಎ-12-ಬಿ-4612 ಹಾಗೂ ಬುಲ್ಲೆಟ್ ಬೈಕ್ ನಂಬರ್ ಕೆಎ-12-ಯು-4159 ರನ್ನು ಅಮಾನತ್ತುಪಡಿಸಿಕೊಳ್ಳಲಾಯಿತು.

          ವಿರಾಜಪೇಟೆ ಉಪವಿಭಾಗದ ಡಿವೈಎಸ್.ಪಿ ಜಯಕುಮಾರ್ ರವರ ಮಾರ್ಗದರ್ಶನದಲ್ಲಿ, ವಿರಾಜಪೇಟೆ ವೃತ್ತ  ನಿರೀಕ್ಷಕರಾದ ಶ್ರೀಧರ್ ರವರ ನೇತ್ರುತ್ವದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಬೋಜಪ್ಪ, ಪಿ.ಎಸ್.ಐ (ಕಾ.ಸು) ಜಗದೀಶ ಧೂಳಶೆಟ್ಟಿ, ಹಾಗೂ ಸಿಬ್ಬಂದಿಯವರಾದ ಮುಸ್ತಾಫ, ಗಿರೀಶ, ಎನ್.ಎಸ್. ಲೋಕೇಶ, ಸಂತೋಷ್ ದೊಡ್ಡಮನಿ, ಆನಂದ, ಚಾಲಕ ಪೂವಯ್ಯ ವಿರಾಜಪೇಟೆ ಗ್ರಾಮಾಂತರ ಠಾಣೆಯ ಸಿಬ್ಬಂದಿ ಪ್ರದೀಪ್ ಮಹಿಳಾ ಸಿಬ್ಬಂದಿ ನಳಿನಿ, ಮತ್ತು ಗೀತಾ  ಮಡಿಕೇರಿ ಸಿಡಿ.ಆರ್. ಘಟಕ ರಾಜೇಶ್ ಮತ್ತು ಗಿರೀಶ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 09-02-2021 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ಮಾದಾಪುರ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಹೆಚ್‍-1454ರ ಬೈಕನ್ನು ಸವಾರ ವಿನೋದ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್‍ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದುದರಿಂದ ಬೈಕ್‍ ಸವಾರ ಹಾಗೂ ಹಿಂಬದಿ ಸವಾರ ಶರತ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಸೋಮರವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 11-02-2021 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು  ಗ್ರಾಮದ  ಕಾನ್ವೆಂಟ್‍ ಬಾಣೆ ನಿವಾಸಿ ಮುರುಗ  ಎಂಬುವವರು ಅವರ ವಾಸದ ಮನೆಯಲ್ಲಿ ಅಕ್ರಮವಾಗಿ  ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪಿಎಸ್‍ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಆನ್‍ ಲೈನ್‍ ವಂಚನೆ ಪ್ರಕರಣ

            ದಿನಾಂಕ: 03-12-2020 ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ರುಬಿಯಾ ನಸ್ರೀನ್‍ ಎಂಬುವವರ ವಾಟ್ಸಪ್‍ ನಂಬರಿಗೆ ಗ್ರಾಪಿಕ್ಸ್ ಮಿಲ್ಲರ್ ಎಂಬ ವ್ಯಕ್ತಿ ಚಿನ್ನದ ಚೈನ್‍ ಮತ್ತು ಲ್ಯಾಪ್‍ ಟಾಪ್‍ ಗಿಫ್ಟ್‍ ಕಳುಹಿಸುವುದಾಗಿ ತಿಳಿಸಿ ಅವುಗಳನ್ನು ಪಡೆದುಕೊಳ್ಳಲು ಕಸ್ಟಮ್‍ ಚಾರ್ಜ್‍ ₹. 15,000 ಹಣವನ್ನು ಆತನಿಗೆ ಸಂದಾಯ ಮಾಡಲು ತಿಳಿಸಿದ ಮೇರೆ ಆತನು ತಿಳಿಸಿದ ಬ್ಯಾಂಕ್‍ ಖಾತೆಗೆ ಜಮಾ ಮಾಡಿರುತ್ತಾರೆ. ನಂತರ ಯಾವುದೇ ಗಿಫ್ಟ್‍ ಬರದೇ ಇದ್ದಾಗ ಫೋನ್‍ ಮುಖಾಂತರ ಸಂಪರ್ಕಿಸಿದಾಗ ಯಾವುದೇ ಕರೆ ಸ್ವೀಕರಿಸದೇ ಮೋಸ ಮಾಡಿದ್ದು ಈ ಬಗ್ಗೆ ದಿನಾಂಕ : 11-02-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

Last Updated: 12-02-2021 05:58 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080