ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ವಹಿವಾಟು, 5 ಮಂದಿ ಆರೋಪಿಗಳ ಬಂಧನ.

     ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ಚೈನ್ ಗೇಟ್ ಬಳಿಯ ಡಿ.ಎಫ್.ಒ. ವಸತಿ ಗೃಹದ ಹತ್ತಿರ ಐವರು ಅಕ್ರಮವಾಗಿ ಗಾಂಜಾ ಖರೀದಿ ವಹಿವಾಟಿನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್ ನೇತೃತ್ವದ ತಂಡ ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿ

ಆರೋಪಿಗಳಿಂದ 1,26,000/- ರೂಪಾಯಿ ಮೌಲ್ಯದ ಮಾದಕ ವಸ್ತುಗಳಾದ 1) 750 ಗ್ರಾಂ. ಗಾಂಜಾ 2)11.970 ಗ್ರಾಂ, 3) 0.8 ಗ್ರಾಂ ಹಾಗೂ 2 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿಸಲ್ಪಟ್ಟ ಆರೋಪಿಗಳು:-

1)ಮೊಹಮ್ಮದ್ ಅಸ್ಲಾಂ ಕೆ.ಹೆಚ್., ತಂದೆ ಹಮೀದ್ ಕೆ.ಹೆಚ್, ಪ್ರಾಯ 23 ವರ್ಷ, ಅಂತಿಮ ವರ್ಷದ ಬಿ.ಬಿ.ಎಂ. ವಿಧ್ಯಾಥಿ೯, ಸಂತ ಅನ್ನಮ್ಮ ಕಾಲೇಜು, ವಿರಾಜಪೇಟೆ,

2)ಬೋಪಣ್ಣ ಕೆ.ಕೆ., ತಂದೆ ಕಾರ್ಯಪ್ಪ ಕೆ.ಎ., ಪ್ರಾಯ 22 ವರ್ಷ, ಅಂತಿಮ ವರ್ಷದ ಹೆಚ್.ಆರ್.ಡಿ ವಿಧ್ಯಾಥಿ೯, ಎಫ್.ಎಂ.ಸಿ. ಕಾಲೇಜು, ಮಡಿಕೇರಿ,

3)ಅಕ್ಷಿತ್ ಸಿ.ಸಿ @ ಚಿಟ್ಟಿಯಪ್ಪ, ತಂದೆ ಪೌತಿ ಚಂಗಪ್ಪ, ಪ್ರಾಯ-24 ವರ್ಷ, ವ್ಯವಸಾಯ ವೃತ್ತಿ, ವಾಸ-ಬೇತು ಗ್ರಾಮ, ನಾಪೋಕ್ಲು.

4)ಸುಮಂತ್ @ ಅಣ್ಣು ತಂದೆ ಲೇಟ್ ಕೃಷ್ಣ ಕೆ.ಎ, ಪ್ರಾಯ 22 ವರ್ಷ, ಖಾತೆ ನಿರ್ವಹಣೆ ಕೆಲಸ, ಎಸ್.ಬಿ.ಐ. ಬ್ಯಾಂಕ್, ಮಡಿಕೇರಿ. ವಾಸ- ಪೊಸ್ಟಲ್ ಕ್ವಾಟ್ರಸ್, ಚೈನ್ಗೇಟ್, ಮಡಿಕೇರಿ. ಹಾಗೂ

5)ರಾಜೇಶ, ತಂದೆ ಸ್ವಾಮಿ, ಪ್ರಾಯ-22 ವರ್ಷ, ಪೆಯಿಂಟಿಂಗ್ ಕೆಲಸ, ವಾಸ-ಪುಟಾಣಿ ನಗರ, ಮಡಿಕೇರಿ.

ಈ ಕಾರ್ಯಾಚರಣೆಯು ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಮತ್ತು ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷರಾದ ಕು: ಅಂತಿಮ ಎಂ.ಟಿ,, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗಣ್ಣನವರ್,

ಅರುಣ್ ಕುಮಾರ್ ಬಿ.ಜಿ, ಸುನೀಲ್ ಬಿ.ಓ., ಧರ್ಮ ಕೆ.ಎಂ, ಶಶಿಕುಮಾರ್, ದಿವ್ಯ ಮತ್ತು ಸೌಮ್ಯರವರು ನಡೆಸಿದ್ದು ಇವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ.

ಅಕ್ರಮ ಗಾಂಜಾ ಮಾರಾಟ ಮತ್ತು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪೊಲೀಸ್ ಅಧಿಕಾರಿ ಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಲು ಕೋರಿದೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 10-06-2021 ರಂದು ಮಡಿಕೇರಿ ಕುಶಾಲನಗರ ರಸ್ತೆಯ ಕೆದಕಲ್ ಗ್ರಾಮದ ಬಳಿ ಕೆಎ-13-ಪಿ-5434 ರ ಕಾರನ್ನು ಅದರ ಚಾಲಕ ಜೀವನ್‍ ಕುಮಾರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಗೂಡ್ಸ್‍ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡಿದ್ದು ಈ ಬಗ್ಗೆ ಅಜೀಜ್ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 11-06-2021 04:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ