ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 10-03-2022 ರಂದು ಕುಶಾಲನಗರ ಪಟ್ಟಣದ ಬಸ್‍ ನಿಲ್ದಾಣದ ಬಳಿ ಕೆಎ-11-ಎಫ್—0442 ರ ಕೆ.ಎಸ್‍.ಆರ್‍.ಟಿ.ಸಿ ಬಸ್ಸನ್ನು ಚಾಲಕ ಪುನೀತ್‍ ಕುಮಾರ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಮೇಶ್‍ ನಾಯಕ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 10-03-2022 ರಂದು ಮಡಿಕೇರಿ ತಾಲ್ಲೂಕು ಅಯ್ಯಂಗೇರಿ ಗ್ರಾಮದ ನಿವಾಸಿ ಮಹಮ್ಮದ್ ಫೈಜ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಯೂಸುಫ್, ಫಹಾದ್, ಫೈಜಲ್ ಎಂಬುವವರು ವೈಷಮ್ಯದಿಂದ ಸ್ಕೂಟರ್‍ ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ ಪ್ರಕರಣ

            ದಿನಾಂಕ: 10-03-2022 ರಂದು ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ  ಠಾಣೆ ಪಿ.ಎಸ್‍.ಐ ವಿರೂಪಾಕ್ಷ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕಾನ್ವೆಂಟ್‍ ಬಾಣೆ ನಿವಾಸಿ ಯೋಗೇಶ್‍  ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ವಾಗಿ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು.

                ದಿನಾಂಕ: 10-03-2022  ರಂದುಕುಶಾಲನಗರ ತಾಲ್ಲೂಕು ರಂಗಸಮುದ್ರ ಗ್ರಾಮದ ಮಾವಿನಹಳ್ಳ ನಿವಾಸಿ ದೀಕ್ಷಿತ್‍ ಎಂಬ ಯುವಕ ಅದೇ ಗ್ರಾಮದ ತೋಟವೊಂದರಲ್ಲಿ ಕಾಳೂ ಮೆಣಸು ಕುಯ್ಯುವ ಗುತ್ತಿಗೆ ಪಡೆದುಕೊಂಡು ಅಲ್ಯುಮಿನಿಯಂ ಏಣಿ ಉಪಯೋಗಿಸಿ ಮರಕ್ಕೆ ಹಬ್ಬಿದ್ದ ಬಳ್ಳಿಯಿಂದ ಕಾಳು ಮೆಣಸು ಕುಯ್ಯುತ್ತಿರುವಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್‍ ತಂತಿಗೆ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ತಾಗಿ ವಿದ್ಯತ್‍ ಸ್ಪರ್ಷಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯ ಬಹಳಷ್ಟು ಕಾಫಿ ಹಾಗೂ ಇನ್ನಿತರ ತೋಟಗಳಲ್ಲಿ ವಿದ್ಯುತ್‍ ತಂತಿ ಹಾದುಹೋಗಿದ್ದು ತೋಟಗಳಲ್ಲಿ ಕೆಲಸ ನಿರ್ವಹಿಸುವಾಗ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಿದ್ದು ಕಾರ್ಮಿಕರು ಕೆಲಸ ನಿರ್ವಹಿಸುವಾಗ ಮಾಡುವ ಸಣ್ಣ ಅಜಾಗರೂಕತೆಯಿಂದ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.  ಜಿಲ್ಲೆಯ ತೋಟಗಳ ಮಾಲೀಕರು ಕಾರ್ಮಿಕರಿಂದ ಕೆಲಸ ಮಾಡಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಕೋರಿದೆ. ವಿದ್ಯುತ್ ತಂತಿ ಹಾದುಹೋಗಿರುವ ಸ್ಥಳಗಳಲ್ಲಿ ಕೆಲಸಗಾರರು ಕೆಲಸ ಮಾಡುವ ಸಮಯದಲ್ಲಿ ಉದ್ದನೆಯ ಲೋಹದ ಸಲಕರಣೆಗಳ ಬದಲಿಗೆ ಬಿದಿರಿನ ಗಳ, ಬಿದಿರಿನ ಏಣಿಗಳನ್ನು ಬಳಸುವುದು ಹಾಗೂ ಏಣಿ ಉಪಯೋಗಿಸುವಾಗ ರಬ್ಬರ್ ಕೈಗವಸು ( ರಬ್ಬರ್ ಗ್ಲೌಸ್) ಗಳನ್ನು ಹಾಗೂ ರಬ್ಬರ್ ಪಾದರಕ್ಷೆ (ರಬ್ಬರ್ ಶೂ)ಗಳನ್ನು ಧರಿಸುವುದು, ವಿದ್ಯುತ್‌ ತಂತಿ ಹಾದುಹೋಗಿರುವ ಸ್ಥಳದ ಬಳಿ ಮರ ಹತ್ತಿ ಕೆಲಸ ಮಾಡುವಾಗ ಸಾಧ್ಯವಾದರೆ ವಿದ್ಯುತ್‍ ನಿಗಮದ ಸಂಬಂದಪಟ್ಟ ಅಧಿಕಾರಿಯವರಿಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ವಿದ್ಯುತ್‍ ಸಂಪರ್ಕ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳುವುದು. ತೋಟಗಳಲ್ಲಿ ವಿದ್ಯುತ್‍ ಕಂಬಗಳ ಬಳಿ ಯಾವುದೇ ಹಸಿರು ಬಳ್ಳಿಗಳು, ಮರಗಿಡಗಳು ಬೆಳೆಯುವುದನ್ನು ತಡೆಯುವುದು ಹಾಗೂ ಸಂಬಂದಪಟ್ಟ ವಿದ್ಯುತ್‍ ನಿಗಮದ ಕಛೇರಿಗೆ ಮಾಹಿತಿ ನೀಡಿ ವಿದ್ಯುತ್‍ ಕಂಬಗಳ ಸಮೀಪದ ಮರಗಳ  ರೆಂಬೆಕೊಂಬೆಗಳು ವಿದ್ಯುತ್‍ ತಂತಿಗೆ ತಾಗದಂತೆ ತೆರವುಗೊಳಿಸುವ ಕ್ರಮ ಕೈಗೊಳ್ಳಲು ಕೋರಿದೆ.

ಇತ್ತೀಚಿನ ನವೀಕರಣ​ : 11-03-2022 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080