ಅಭಿಪ್ರಾಯ / ಸಲಹೆಗಳು

ವಾಮಾಚಾರ ಪ್ರಕರಣ

           ದಿನಾಂಕ 08-01-2022ರಂದು  ಖಚಿತ ಮಾಹಿತಿ ಮೇರೆ ಸಿದ್ದಾಪುರ  ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಎಂ.ಆರ್ ಗಣೇಶ್ ಎಂಬವರ ಮನೆಗೆ  ದಾಳಿ ನಡೆಸಿದ  ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು  ವಾಮಾಚಾರ ನಡೆಸಿ ನಿಧಿ ಶೋಧನೆಯಲ್ಲಿ ತೊಡಗಿದ್ದ  ಎಂ.ಆರ್ ಗಣೇಶ್ ಹಾಗೂ ಉಡುಪಿ ಮೂಲದ ಸಾಧಿಕ್ ಎಂಬವರುಗಳನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿಗಳಿಬ್ಬರು ಮಂಗಳೂರು  ಹಾಗೂ ಕೇರಳ ಮೂಲದ  ವಾಮಾಚಾರಿಗಳ  ಬಲೆಗೆ  ಬಿದ್ದು  ಮೌಡ್ಯತೆಯಿಂದ  ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ  ನಿಧಿ ಇದೆಯೆಂದು ಸುಮಾರು  15 ಅಡಿಗಳಷ್ಟು  ಮಣ್ಣು ತೆಗೆದು ಗುಂಡಿತೋಡಿರುತ್ತಾರೆ. ನಿಧಿ ಶೋಧನೆಯ  ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು  ಮುಂದಿನ ದಿನಗಳಲ್ಲಿ  ದೊಡ್ಡ ಬಲಿ ಪೂಜೆ  ನಡೆಸಲು  ನಿರ್ಧರಿಸಲಾಗಿತ್ತೆಂದು  ಆರೋಪಿ ವ್ಯಕ್ತಿಗಳಿಂದ ತಿಳಿದುಬಂದಿದ್ದು  ಮುಂದೆ  ನಡೆಯಬಹುದಾಗಿದ್ದ  ಭಾರಿ ಅನಾಹುತ ತಪ್ಪಿದಂತಾಗಿದೆ. ಅಲ್ಲದೇ  ಮೌಡ್ಯತೆಯಿಂದ ಇನ್ನೂ ಕೆಲವು ಅಡಿಗಳಷ್ಟು ಮಣ್ಣು  ತೆಗೆದಿದಲ್ಲಿ  ಮನೆ ಕುಸಿದು ಮನೆಯಲ್ಲಿದ್ದವರೆಲ್ಲ  ಸಾವನ್ನಪ್ಪುವ  ಸಾಧ್ಯತೆಯಿತ್ತು. ತಲೆಮರೆಸಿಕೊಂಡ  ಆರೋಪಿಗಳ ಪತ್ತೆ ಕಾರ್ಯಮುಂದುವರಿದಿದೆ.

ಆರೋಪಿಗಳ ವಿವರ: 

  1. ಎಂ.ಆರ್ ಗಣೇಶ್ ತಂದೆ ರಮೇಶ್ , ಪ್ರಾಯ 23 ವರ್ಷ  ಸೆಂಟ್ರಿಂಗ್ ಕೆಲಸ ಒಳಮಾಳ  ಕೋಟೆ ಪೈಸಾರಿ  ಚೆನ್ನಯ್ಯನಕೋಟೆ  ಸಿದ್ದಾಪುರ
  2. ಸಾಧಿಕ್ ಬಿ.ಕೆ ತಂದೆ ಲೇಟ್ ಅಬ್ದುಲ್ ರಹಿಮಾನ್ ,ಪ್ರಾಯ 42ವರ್ಷ  ಪಡುಬಿದ್ರಿ ಹಂಚಿನಡ್ಕ ಉಡುಪಿ ಜಿಲ್ಲೆ.

ಆರೋಪಿಗಳ ವಿರುದ್ದ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ವಾಮಾಚಾರಕ್ಕೆ ಬಳಸಿದ ಕೆಲವು  ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

          ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ ಪ್ರಸಾದ್ ರವರ ಮಾ‍ರ್ಗದರ್ಶನದಲ್ಲಿ  ಜಿಲ್ಲಾ ಅಪರಾಧ ಗುಪ್ತದಳ ಇನ್ಸ್ ಪೆಕ್ಟರ್   ಐ.ಪಿ ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ ವೆಂಕಟೇಶ್  ಹಾಗೂ ಡಿಸಿಐಬಿ ಸಿಬ್ಬಂದಿಗಳಾದ  ವೆಂಕಟೇಶ್, ಯೊಗೇಶ್  ಕುಮಾರ್ , ನಿರಂಜನ್ , ವಸಂತ , ಸುರೇಶ್ , ಶರತ್ ರೈ , ಶಶಿಕುಮಾರ್ ಮತ್ತುಅಭಿಲಾಷ್ ಹಾಗೂ ಸಿದ್ದಾಪುರ ಠಾಣೆಯ  ಎಎಸ್ಐ ಮೊಹಿದ್ದೀನ್,  ಸಿಬ್ಬಂದಿಗಳಾದ ಬೆಳಿಯಪ್ಪ, ಲಕ್ಷೀಕಾಂತ್ , ಮಲ್ಲಪ್ಪ , ಶಿವಕುಮಾರ್ ಹಾಗೂ ಸಿಡಿಆರ್ ಸೆಲ್ ನ ರಾಜೇಶ್, ಗಿರೀಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು  ಪ್ರಶಂಸಿಸಲಾಗಿದೆ.

ಆನ್ ಲೈನ್‍ ವಂಚನೆ ಪ್ರಕರಣ

          ಕುಶಾಲನಗರದ ಶಿವರಾಮಕಾರಂತ ಬಡಾವಣೆ ನಿವಾಸಿ ದಿಲೀಪ್‍ ಎಂಬುವವರು ಹಲವು ವರ್ಷಗಳಿಂದ BADOO ಎಂಬ ಮೊಬೈಲ್‍ ಅಪ್ಲಿಕೇಶನ್ ಬಳಸುತ್ತಿದ್ದರು. ಈ ಆಪ್‍ ಮೂಲಕ ಪ್ರದೀಪ್‍ ಎಂಬ ವ್ಯಕ್ತಿಯ ಪರಿಚಯವಾಗಿ ಆತನ 9960140131 ನಂಬರ್ ಗೆ ವಾಟ್ಸಪ್ ಮೂಲಕ ಚಾಟ್ ಮಾಡಿಕೊಂಡಿದ್ದರು. ಆತನು ಕೆನಡಾ ದೇಶದ ಪೌರತ್ವ ಹೊಂದಿರುವುದಾಗಿ ಹೇಳಿ ಅವಶ‍್ಯಕತೆಯಿದ್ದವರಿಗೆ ಕೆನಡ ದೇಶಕ್ಕೆ ಹೋಗಲು ವೀಸಾ ಕೊಡಿಸುವ  ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದನು. ದಿಲೀಪ್‍ ರವರ ಎಂ.ಎಸ್ಸಿ ವಿದ್ಯಾಭ್ಯಾಸ ಮಾಡಿದ್ದರಿಂದ ಕೆನಡಾ ದೇಶದಲ್ಲಿ ಕೆಲಸ ಮಾಡುವ ಇಚ್ಚೆ ಇದ್ದರೆ ವಿಸಾ ಕೊಡಿಸುವುದಾಗಿ ಹೇಳಿ ಸುಮಾರು 10 ಲಕ್ಷ ಹಣ ಪಾವತಿಸಬೇಕೆಂದು ತಿಳಿಸಿದ್ದನು. ಇದಕ್ಕೆ ದಿಲೀಪ್‍ ರವರು ಒಪ್ಪಿ ದಿನಾಂಕ: 18-12-2019 ರಿಂದ 20-03-2020 ರ ವರೆಗೆ ಹಂತ ಹಂತವಾಗಿ ದಿಲೀಪ್ ‍ತಿಳಿಸಿದ SBI ಬ್ಯಾಂಕ್‍ ಖಾತೆ ಸಂಖ್ಯೆ 31827024295 IFSC CODE SBIN0013342 ಕ್ಕೆ ಒಟ್ಟು ₹. 7,22,000 ಹಣ ಪಾವತಿಸಿರುತ್ತಾರೆ. ನಂತರ ಕೊರೋನ ಇರುವುದರಿಂದ ವೀಸಾ ಸಿಗುತ್ತಿಲ್ಲ ಎಂದು ಹೇಳಿ ಸತಾಯಿಸುತ್ತಾ ಬಂದಿರುತ್ತಾನೆ. ವಿಸಾ ಸಿಕ್ಕದೇ ಇರುವುದರಿಂದ ಹಣ ವಾಪಾಸ್ಸು ಕೊಡುವಂತೆ  ಹೇಳಿದಾಗ ಈವರೆಗೂ ವಿಸಾವನ್ನೂ ಕೊಡಿಸದೇ, ಹಣವನ್ನೂ ಸಹಾ ವಾಪಾಸ್ಸು ನೀಡದೇ ಮೋಸ ಮಾಡಿದ್ದು ಈ ಬಗ್ಗೆ ದಿನಾಂಕ 08-01-2022 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 08-01-2022 ರಂದು ಮಡಿಕೇರಿ ನಗರದ ಮೈಸೂರು ರಸ್ತೆಯ ಕಮಾನು ಗೇಟು ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎಲ್-60-ಎಂ-969 ರ ಕಾರನ್ನು ಅದರ ಚಾಲಕ ಶಪೀಕ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಆರ್‍-4374 ರ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರಿರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 07-01-2022 ರಂದು ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಭಾಗಿರತಿ ಎಂಬುವವರಿಗೆ ಅವರ ನೆರೆಮನೆ ನಿವಾಸಿ ವೇದಾವತಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 07-01-2022 ರಂದು ಪೊನ್ನಂಪೇಟೆ ಗ್ರಾಮದ ಕಾರು ನಿಲ್ದಾಣದ ಬಳಿ  ಯಶ್ವಂತ್‍  ಎಂಬುವವರು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಪೊನ್ನಂಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕಾಫಿ ಕಳವು ಪ್ರಕರಣ

                ದಿನಾಂಕ 07-01-2022 ರಂದು ಮಡಿಕೇರಿ ತಾಲ್ಲೂಕು ಕಕ್ಕಬೆ ಗ್ರಾಮದ ನಿವಾಸಿ ಕುಶಾಲಪ್ಪ ಎಂಬುವವರ ಕಾಫಿ ತೋಟದಿಂದ ನಾಲಡಿ ಗ್ರಾಮದ ನಿವಾಸಿಗಳಾದ ಕುಟ್ಟಪ್ಪ, ಅಚ್ಚಮ್ಮ, ಬೋಪಯ್ಯ, ಮಾದಪ್ಪ, ತಮ್ಮಯ್ಯ ಎಂಬುವವರು ಅಂದಾಜು ₹. 1,50,000 ಮೌಲ್ಯದ 5000 Kg ಯಷ್ಟು ಹಸಿ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 07-01-2022 ರಂದು ಕುಶಾಲನಗರ ಪಟ್ಟಣದ ಮುಳ್ಳುಸೋಗೆ ಅಂಬೇಡ್ಕರ್ ಕಾಲೋನಿ ನಿವಾಸಿ  ನಾಗರಾಜು  ಎಂಬುವವರು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ನವೀಕರಣ​ : 09-01-2022 01:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080