Feedback / Suggestions

ಜೀಪ್‍ ಕಳವು ಪ್ರಕರಣ, ವಾಹನ ತಪಾಸಣೆ ಸಂದರ್ಭ ಪತ್ತೆ

            ದಿನಾಂಕ: 07-12-2020 ರಂದು ಮಡಿಕೇರಿ ನಗರ ಠಾಣೆ ಪಿಎಸ್‍ಐ ಅಂತಿಮ ಮತ್ತು ಸಿಬ್ಬಂದಿಯವರು ವಾಹನ ತಪಾಸಣೆ ಸಮಯದಲ್ಲಿ ಸುಳ್ಯ ತಾಲ್ಲೂಕು ಸಂಪಾಜೆ ಗಡಿಕಲ್ಲು ಗ್ರಾಮದ ನಾರಾಯಣ ಎಂಬುವರು ಒಂದು ಬೊಲೆರೋ ಜೀಪಿನಲ್ಲಿ ಬಂದಿದ್ದು ವಾಹನ ದಾಖಲೆ ಪರಿಶೀಲನೆ ಮಾಡುವಾಗ ಮೂಲ ದಾಖಲೆಗಳನ್ನು ತೋರಿಸಲು ಹೇಳಿದಾಗ ಅನುಮಾನಾಸ್ಪದವಾಗಿ ವರ್ತಿಸಿದವರನ್ನು ವಿಚಾರಣೆ ಮಾಡಿದಾಗ, ಇಮ್ತಿಯಾಜ್‍ ಮತ್ತು ಸಂದೀಪ್‍ ಎಂಬುವವರು ಎರಡು ವರ್ಷಗಳ ಹಿಂದ ಕೇರಳ ರಾಜ್ಯದ ಕಾಸರಗೂಡಿನಲ್ಲಿ ಕಳ‍್ಳತನ ಮಾಡಿ ಇಂಜಿನ್‍ ನಂಬರ್‍ ಮತ್ತು ಚಾಸಿಸ್ ನಂಬರನ್ನು ತಿದ್ದಿ ಜೀಪನ್ನು ಕಲ್ಲುಗುಂಡಿ ನಿವಾಸಿ ಲಕ್ಷ್ಮತ್‍ ಎಂಬುವವರ ಮುಖಾಂತರ ನಾರಾಯಣ ರವರಿಗೆ ಮಾರಾಟ ಮಾಡಿದ್ದರು. ನಂತರ ಕೆಎ-12-ಎಂ-2559 ರ ಸಂಖ್ಯೆ ಬೇರೆ  ಯಾರದೋ ವಾಹನದ ದಾಖಲೆಗಳನ್ನು ಅಂತರ್ಜಾಲದಿಂದ ತೆಗೆದು ಮುದ್ರಿಸಿ ಇಟ್ಟುಕೊಂಡು ಕಳವು ಮಾಡಿದ್ದ ಜೀಪಿಗೆ ನಂಬರ್‍ ಅಳವಡಿಸಿಕೊಂಡು ಚಾಲನೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 07-12-2020 ರಂದು ಮಡಿಕೇರಿ ನಗರದ ಎಂ.ಎಂ ವೃತ್ತದ ಬಳಿ ಕೆಎ-12-ಕೆ-7387 ರ ಬೈಕನ್ನು ಸವಾರ ಪವನ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿ.ಸಿ.ಸಿ ಬ್ಯಾಂಕ್ ಗೆ ಹೋಗುವ ಮೆಟ್ಟಿಲಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಮೋಹನ್‍ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 07-12-2020 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ  ಗ್ರಾಮದ  ನಿವಾಸಿ ರಘು ಎಂಬುವವರು ಅವರ ಅಂಗಡಿಯಲ್ಲಿ ಅಕ್ರಮವಾಗಿ  ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾತರ ಠಾಣೆ ಪಿಎಸ್‍ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 06-12-2020 ರಂದು ಕುಶಾಲನಗರ ಪಟ್ಟಣದ ಕಾರ್ಯಪ್ಪ ವೃತ್ತದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-01-ಎಂಹೆಚ್-9871 ರ ಕಾರನ್ನು ಅದರ ಚಾಲಕ ಫೌಲ್‍ರಾಜ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿಪಡಿಸಿ ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ:07-12-2020 ರಂದು ಸೋಮವಾರಪೇಟೆ ತಾಲ್ಲೂಕು ಬಾಣಾವಾರ  ಗ್ರಾಮದ  ನಿವಾಸಿ ಶಿವನ್ ಎಂಬುವವರು  ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಇಟ್ಟುಕೊಂಡುಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ  ಠಾಣೆ ಪಿಎಸ್‍ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕಳವು ಪ್ರಕರಣ

                ದಿನಾಂಕ: 07-12-2020 ರಂದು ಪೊನ್ನಂಪೇಟೆ ತಾಲ್ಲೂಕು ಕೈಕೇರಿ ಗ್ರಾಮದ ನಿವಾಸಿ ತರುಣ್‍ ಎಂಬುವವರ ಮನೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್, ಟಾರ್ಚ್‍, ನಗದು  ಸೇರಿದಂತೆ 25,000 ರೂ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 08-12-2020 05:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080