ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಮಾರಾಟ, 6 ಜನರ ಬಂಧನ.

ಮಡಿಕೇರಿ ನಗರದ ರಾಣಿಪೇಟೆಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾ ಡಿಸಿಐಬಿ ಪೊಲೀಸರು ದಾಳಿ ನಡೆಸಿ 6 ಮಂದಿ ಆರೋಪಗಳನ್ನು ಬಂಧಿಸಿ ಅವರಿಂದ ಅಂದಾಜು 50 ಸಾವಿರ ರೂ. ಮೌಲ್ಯದ 415 ಗ್ರಾಂ ತೂಕದ ಗಾಂಜಾವನ್ನು ಮತ್ತು 35,760 ರೂ. ನಗದನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿ ದ್ದಾರೆ. ಈ ಪ್ರಕರಣದಲ್ಲಿ 1) ಎಂ.ಅಸ್ಗರ್ ಅಲಿ, ತಂದೆ ಎಂ.ಎಸ್ ಅಬ್ಬಾಸ್, ತ್ಯಾಗರಾಜ ಕಾಲೋನಿ, ಮಡಿಕೇರಿ, 2) ಅಬ್ದುಲ್ ರಹೀಂ, ತಂದೆ ಮೊಹ್ಮದ್, ತ್ಯಾಗರಾಜ ಕಾಲೋನಿ, ಮಡಿಕೇರಿ, 3) ಸಫಾನ್ ಅಹಮ್ಮದ್, ತಂದೆ ಅಬ್ದುಲ್ ರಶೀದ್, ಅಯ್ಯಪ್ಪ ದೇವಸ್ಥಾನದ ಹತ್ತಿರ, ಸುಂಟಿಪೊಪ್ಪ, 4) ನೌಶಾದ್ ಆಲಿ ಎಂ.ಕೆ, ತಂದೆ ಖಾದರ್, ಆಜಾದ್ ನಗರ, ಮಡಿಕೇರಿ, 5) ಜಬೀವುಲ್ಲಾ ಎಂ, ತಂದೆ W.M. ಶರೀಫ್, ಮಹದೇವಪೇಟೆ ಮಡಿಕೇರಿ ಮತ್ತು 6) ಡಿ.ಆರ್.ಸುರೇಶ್, ತಂದೆ ಡಿ.ಎಸ್. ರಾಜು, ಭಗವತಿನಗರ ಮಡಿಕೇರಿ ಇವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅದರಂತೆ ಡಿಸಿಐಬಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್ ಮತ್ತು ಮಹೇಶ್ ಭಾಗಿಯಾಗಿದ್ದು ಇವರ ಕಾರ್ಯವೈಖರಿ ಯನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 07-06-2021ರಂದು ಸೋಮವಾರಪೇಟೆ ತಾಲ್ಲೂಕು ಬಸವನಹಳ್ಳಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-21-ಯು-9871ರ ಬೈಕನ್ನು ಅದರ ಸವಾರ ಅಫ್ಜಲ್‌ ಎಂಬುವವರು ಅತಿವೇಗ ಮತ್ತುಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-01-ಹೆಚ್.ಡಬ್ಲ್ಯೂ-7312 ರ ಸ್ಕೂಟರ್‌ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ ಸವಾರ ಭೀಮಯ್ಯ, ಬೈಕ್‌ ಸವಾರ ಹಾಗೂ ಹಿಂಬದಿ ಸವಾರ ಆಸಿಫ್‌ ಎಂಬುವವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮಾರಾಟಕ್ಕಾಗಿ ಮದ್ಯ ಸಾಗಾಟ ಪ್ರಕರಣ

                ದಿನಾಂಕ: 07-06-2021 ರಂದು ವಿರಾಜಪೇಟೆ ಪಟ್ಟಣದ  ಗೋಣಿಕೊಪ್ಪ ರಸ್ತೆಯಲ್ಲಿ ಚಂಬೆಬೆಳ್ಳೂರು ಗ್ರಾಮದ ನಿವಾಸಿ  ಸುಬ್ರಮಣಿ ಎಂಬುವವರು  ಅವರ ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ  ಮಾರಾಟ ಮಾಡಲು ಕೆಎ-05-ಎಂಬಿ-8522 ರ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ನಗರ  ಠಾಣೆ ಪಿಎಸ್‌ಐ ಬೋಜಪ್ಪ  ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

            ದಿನಾಂಕ: 07-06-2021 ರಂದು ಪೊನ್ನಂಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ನಿವಾಸಿ ರಂಗಸ್ವಾಮಿ ಎಂಬುವವರು ಬೆಳಿಗ್ಗೆ ವಾಕಿಂಗ್‌ ಗೆ ಹೋಗಿದ್ದಾಗ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಗಾಯಗೊಂಡವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ನವೀಕರಣ​ : 08-06-2021 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080